Kannada Actress: ಈ ಬಾಲಕಿ ಯಾರು ಗೊತಾಯ್ತಾ?? ಇಂದು ಟಾಪ್ ನಟಿ: ದೇಶವನ್ನೇ ಅಲ್ಲಾಡಿಸುವ ಕನ್ನಡಿಗನ ಹೆಂಡತಿ. ಯಾರು ಗೊತ್ತಾ??
Kannada Actress: ಈಗ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ಹೊಸ ಟ್ರೆಂಡ್ ಮತ್ತು ಸೆನ್ಸೇಷನ್ ಸೃಷ್ಟಿಸುತ್ತಿದೆ. ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಸದ್ದು ಮಾಡಿರುವ ಹೀರೋಯಿನ್ ಒಬ್ಬರ ಚೈಲ್ಡ್ ಹುಡ್ ಫೋಟೋ ಭಾರಿ ಸೌಂಡ್ ಮಾಡುತ್ತಿದೆ. ಈ ನಟಿ ಯಾರು ಅಂತ ನಿಮಗೆ ಗೊತ್ತಾಯ್ತಾ?

ನಿಮಗೆ ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಹುಡುಗಿಯ ಬಗ್ಗೆ ತಿಳಿಸುತ್ತೇವೆ. ಪುಟ್ಟ ಹೇರ್ ಸ್ಟೈಲ್ ನಲ್ಲಿ ಕ್ಯೂಟ್ ಆಗಿ ಕಾಣುತ್ತಿರುವ ಹುಡುಗಿ ಮತ್ಯಾರು ಅಲ್ಲ, ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾವತ್ತಿಗೂ ಕಾಂಟ್ರವರ್ಸಿಗಳಿಗೆ ಸಿಕ್ಕಿ ಹಾಕಿಕೊಳ್ಳದೆ, ಎಲ್ಲರಿಂದಲೂ ಒಳ್ಳೆಯ ಹೆಸರು ಪಡೆದುಕೊಂಡ ನಟಿ ರಾಧಿಕಾ ಪಂಡಿತ್ (Radhika Pandit). ಇವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕಾದಂಬರಿ ಧಾರವಾಹಿ ಮೂಲಕ ನಟನೆ ಶುರು ಮಾಡಿ, ನಂದಗೋಕುಲ ಧಾರವಾಹಿಯಲ್ಲೂ ನಟಿಸಿದರು. ಬಳಿಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದು..
2008ರಲ್ಲಿ ಮೊಗ್ಗಿನ ಮನಸ್ಸು (Moggina Manasu) ಸಿನಿಮಾ ಮೂಲಕ. ಯಶ್ (Yash) ಹಾಗೂ ರಾಧಿಕಾ ಅವರು ಒಂದೇ ಸಿನಿಮಾ ಇಂದ ಬೆಳ್ಳಿತೆರೆಗೆ ಪರಿಚಯವಾದರು. ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ ಈ ಜೋಡಿ, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗಿಂತ ಮೊದಲು 20ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದರು. 2019ರವರೆಗೂ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದ ರಾಧಿಕಾ ಅವರು ಈಗ ದೂರವಿದ್ದಾರೆ. ರಾಧಿಕಾ ಹಾಗೂ ಯಶ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ..
ಆಯ್ರ (Ayra) ಹಾಗೂ ಯಥಾರ್ವ್ (Yatharv).. ಇವರಿಬ್ಬರನ್ನು ನೋಡಿಕೊಳ್ಳುವುದರಲ್ಲಿ ರಾಧಿಕಾ ಪಂಡಿತ್ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಮತ್ತೆ ಸಿನಿಮಾ ಲೋಕಕ್ಕೆ ಬಂದಿಲ್ಲ. ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಆಗಾಗ ಮಕ್ಕಳ ಜೊತೆಗೆ ಹಾಗೂ ಪತಿ ಯಶ್ ಅವರ ಜೊತೆಗೆ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
Comments are closed.