Rashmika Mandanna: ಸಿನಿಮಾದಲ್ಲಿ ಮತ್ತಷ್ಟು ಮಿಂಚಲು, ಶಕ್ತಿ ಮೀರಿ ಮೈಲೇಜ್ ಹೆಚ್ಚಿಸಲು ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಕೇಳಿದರೇ, ಮೈ ಎಲ್ಲ ನಡುಗುತ್ತದೆ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್. ಪುಷ್ಪ ಸಿನಿಮಾ ಇಂದ ಇವರ ರೇಂಜ್ ಚೇಂಜ್ ಆಗಿ ಹೋಗಿದೆ. ಬಾಲಿವುಡ್ ಇಂದ ಕೂಡ ರಶ್ಮಿಕಾ ಅವರಿಗೆ ದೊಡ್ಡ ಆಫರ್ ಗಳು ಬರುತ್ತಲಿವೆ. ಇದೀಗ ರಶ್ಮಿಕಾ ಅವರ ಕೆರಿಯರ್ ನಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ದೊಡ್ಡದೊಂದು ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ..
ಇಷ್ಟು ದಿವಸ ಕಮರ್ಷಿಯಲ್ ಸಿನಿಮಾಗಳಲ್ಲಿ ಹಲವು ರೀತಿಯ ಪಾತ್ರಗಳನ್ನು ನಿಭಾಯಿಸಿದ ರಶ್ಮಿಕಾ ಅವರು ಈಗ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಸಿದ್ಧವಾಗಿದ್ದಾರಂತೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರು ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಛವಾ ಎಂದು ಹೆಸರು ಇಡಲಾಗಿದ್ದು, ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶನ ಮಾಡಲಿದ್ದಾರೆ.
ಇದು ಸಾಮ್ರಾಜ್ಯವನ್ನು ಆಳಿ ದೊಡ್ಡ್ ಹೆಸರು ಮಾಡಿದ್ದ ಮರಾಠಿ ಮಹಾರಾಜ ಸಾಮ್ರಾಟ್ ಶಿವಾಜಿ ಅವರ ಮಗ ಸಂಭಾಜಿ ಮಹಾರಾಜ್ ಅವರ ಜೀವನದ ಕಥೆಯನ್ನು ಅಡಾಪ್ಟ್ ಮಾಡಿಕೊಂಡು ಮಾಡುತ್ತಿರುವ ಕಥೆ ಆಗಿದೆ. ಈ ವಿಶೇಷ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಅವರು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.
ವಿಕ್ಕಿ ಕೌಶಲ್ ಅವರು ಸಹ ಹಾರ್ಸ್ ರೈಡಿಂಗ್ ಸೇರಿದಂತೆ ಇನ್ನಷ್ಟು ಕಲಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಶ್ಮಿಕಾ ಅವರು ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ತಿಳಿದು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಇದು ರಶ್ಮಿಕಾ ಅವರ ಕೆರಿಯರ್ ನಲ್ಲಿ ವಿಶೇಷ ಸಿನಿಮಾ ಆಗುವುದಂತೂ ಗ್ಯಾರಂಟಿ ಆಗಿದೆ.
Comments are closed.