ISRO Recruitment: ನೀವು 10, ಅಥವಾ ITI ಪಾಸ್ ಆಗಿದ್ದರೆ, ಈಗಲೇ ಇಸ್ರೋ ದಲ್ಲಿ ಅರ್ಜಿ ಹಾಕಿ. ತಿಂಗಳಿಗೆ 81 ಸಾವಿರ ಸಂಬಳ. ಯಾರಿಗುಂಟು ಯಾರಿಗಿಲ್ಲ. ಈಗಲೇ ಹಾಕಿ.
ISRO Recruitment: ISRO ದಲ್ಲಿ ಕೆಲಸ ಪಡೆಯಬೇಕು ಎನ್ನುವ ಸಾಕಷ್ಟು ಜನರಲ್ಲಿ ಇರುತ್ತದೆ. ಅಂಥವರಿಗೆ ಇಸ್ರೋ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ಇಂದ ಒಂದು ಸದಾವಕಾಶ ಸಿಕ್ಕಿದೆ. ಇಸ್ರೋದಲ್ಲಿ ಟೆಕ್ನಿಷಿಯನ್ ಎ, ಡ್ರಾಟ್ಸ್ಮನ್ ವಿ, ಹಾಗೂ ರೇಡಿಯೋಗ್ರಾಫರ್ ಎ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ನೀಡಲಾಗಿದೆ. ಈ ಕೆಲಸಕ್ಕೆ ಆಸಕ್ತಿ ಇರುವ ಅಭ್ಯರ್ಥಿಗಳು, ಇಸ್ರೋ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.. ಕೆಲಸಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ..

ಈ ಕೆಲಸಕ್ಕೆ ಅರ್ಜಿ ಹಾಕಲು ಶುರುವಿನ ದಿನಾಂಕ 2023ರ ಮೇ 4 ಹಾಗೆಯೇ ಕೊನೆಯ ದಿನಾಂಕ 2023ರ ಮೇ 18. ಇಷ್ಟು ದಿನಗಳ ಒಳಗೆ ಆನ್ಲೈನ್ ಮೂಲಕ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ತಾರೀಕಿನಲ್ಲಿ ಬದಲಾವಣೆ ಆದರೆ ವೆಬ್ಸೈಟ್ ನಲ್ಲಿ ತಿಳಿಸಿರುತ್ತಾರೆ. ಅಪ್ಲಿಕೇಶನ್ ಹಾಕಲು https://www.vssc.gov.in/currentOpenings.htmlcan ಈ ಲಿಂಕ್ ಗೆ ಭೇಟಿ ನೀಡಿ. ಇದೀಗ ಒಟ್ಟು 49 ಹುದ್ದೆಗಳು ಖಾಲಿ ಇದ್ದು, ವಿವರ ಹೀಗಿದೆ.. ಟೆಕ್ನಿಷಿಯನ್ ಎ ಕೆಲಸಕ್ಕೆ ಒಟ್ಟು 43 ಹುದ್ದೆಗಳು..
ಡ್ರಾಟ್ಸ್ಮನ್ ಬಿ ಕೆಲಸಕ್ಕೆ ಒಟ್ಟು 5 ಹುದ್ದೆಗಳು, ರೇಡಿಯೊಗ್ರಾಫರ್ ಎ ಕೆಲಸಕ್ಕೆ 1 ಹುದ್ದೇ ಖಾಲಿ ಇದೆ. ಸಾಮಾನ್ಯ ಹಾಗೂ ಓಬಿಸಿ ವರ್ಗದ ವಿದ್ಯಾರ್ಥಿಗಳು ₹100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು, ಎಸ್ಸಿ/ಎಸ್ಟಿ/PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗಳಿಗೆ ತಿಂಗಳ ಸಂಬಳ ಹೇಗಿರುತ್ತದೆ.. ಟೆಕ್ನಿಷಿಯನ್ ಎ ಕೆಲಸಕ್ಕೆ ತಿಂಗಳಿಗೆ ₹21,700 ಇಂದ ₹69,100 ಸಂಬಳ ಇರುತ್ತದೆ. ಡ್ರಾಟ್ಸ್ಮನ್ ಬಿ ಕೆಲಸಕ್ಕೆ ತಿಂಗಳಿಗೆ ₹21,700 ಇಂದ ₹69,100 ಸಂಬಳ ಇರುತ್ತದೆ. ರೇಡಿಯೊಗ್ರಾಫರ್ ಎ ಕೆಲಸಕ್ಕೆ ತಿಂಗಳ ಸಂಬಳ ₹ 25,500 ಇಂದ ₹81,100 ವರೆಗು ಇರುತ್ತದೆ.
35 ವರ್ಷಕ್ಕಿಂತ ಕೆಳಗಿನವರು ಅರ್ಜಿ ಸಲ್ಲಿಸಬಹುದು. ಈ ಕೆಲಸಗಳಿಗೆ ಬೇಕಿರುವ ಶೈಕ್ಷಣಿಕ ಅರ್ಹತೆ ನೋಡುವುದಾದರೆ, 10ನೇ ತರಗತಿ ಪಾಸ್ ಆಗಿರಬೇಕು. ಹಾಗೂ ITI ಮುಗಿಸಿರುವ ಸರ್ಟಿಫಿಕೇಟ್ ಹೊಂದಿರಬೇಕು. ಅರ್ಜಿ ಸಲ್ಲಿಕೆ ಶುರು ಆಗುವ ದಿನಾಂಕ ಮೇ 4, 2023. ಅರ್ಜಿ ಸಲ್ಲಿಕೆ ಮುಕ್ತಾಯವಾಗುವ ದಿನಾಂಕ ಮೇ 18, 2023..