Neer Dose Karnataka
Take a fresh look at your lifestyle.

Aryan Khan: ಕೊನೆಗೂ ಸಾಧನೆ ಮಾಡಿದ ಶಾರುಖ್ ಮಗ: ಶಾರುಖ್ ಖಾನ್ ಫುಲ್ ಕುಶಿಯಾಗಿರುವುದು ಯಾಕೆ ಗೊತ್ತೇ?? ಅಷ್ಟಕ್ಕೂ ಈತ ಮಾಡಿರುವ ಸಾಧನೆ ಏನು ಗೊತ್ತೇ?

Aryan Khan: ಭಾರತ ಚಿತ್ರರಂಗದಲ್ಲಿ ಸ್ಟಾರ್ ಗಳು ಮಾತ್ರವಲ್ಲ ಸ್ಟಾರ್ ಕಿಡ್ ಗಳು ಕೂಡ ಸಿಕ್ಕಾಪಟ್ಟೆ ಫೇಮಸ್. ಸ್ಟಾರ್ ಕಲಾವಿದರ ಮಕ್ಕಳು ಎನ್ನುವ ಕಾರಣಕ್ಕೆ ಅವರಿಗೆ ಚಿತ್ರರಂಗಕ್ಕೆ ಬರಲು ಬಹಳಷ್ಟು ಅವಕಾಶಗಳು ಸಿಗುತ್ತದೆ. ಅದರಿಂದ ಅವರು ಕೂಡ ಬೇಗ ಒಳ್ಳೆಯ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ನಟ ಶಾರುಖ್ ಖಾನ್ ಅವರ ವಿಷಯದಲ್ಲಿ ಆಗುತ್ತಿರುವುದು ಕೂಡ ಇದೇ ರೀತಿ. ಆದರೆ ಶಾರುಖ್ ಖಾನ್ (Shahrukh Khan) ಅವರ ಮಗ ಆರ್ಯನ್ ಖಾನ್ ಬೇರೆ ಸ್ಟಾರ್ ಗಳಿಗಿಂತ ಭಿನ್ನವಾಗಿದ್ದಾರೆ.

ಅವರಿಗೆ ನಟನೆಗಿಂತ ಹೆಚ್ಚು ಆಸಕ್ತಿ ನಿರ್ದೇಶನದಲ್ಲಿದೆ ಹಾಗೆಯೇ ಆರ್ಯನ್ ಖಾನ್ ಗೆ ಬ್ಯುಸಿನೆಸ್ ನಲ್ಲಿ ಕೂಡ ಆಸಕ್ತಿ ಇದೆ. ಇತ್ತೀಚೆಗೆ ಆರ್ಯನ್ ಖಾನ್ ತಮ್ಮದೇ ಆದ ಬಟ್ಟೆಯ ಬ್ರ್ಯಾಂಡ್ ಶುರು ಮಾಡಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ (Salman Khan), ದೀಪಿಕಾ ಪಡುಕೋಣೆ (Deepika Padukone), ಆಲಿಯಾ ಭಟ್ (Alia Bhatt) ಇವರೆಲ್ಲರೂ ತಮ್ಮದೇ ಆದ ಬಟ್ಟೆಯ ಬ್ರ್ಯಾಂಡ್ ಗಳನ್ನು ಹೊಂದಿದ್ದು, ಇದೀಗ ಆರ್ಯನ್ ಕೂಡ ಹೊಸ ಬ್ರ್ಯಾಂಡ್ ಶುರು ಮಾಡಿ, ಆನ್ಲೈನ್ ಮೂಲಕ ಮಾರಾಟ ಶುರು ಮಾಡಿದ್ದಾರೆ. ಇವರ ಬ್ರ್ಯಾಂಡ್ ನ ಬಟ್ಟೆಗಳು ಸಿಕ್ಕಾಪಟ್ಟೆ ದುಬಾರಿ.

ಇದನ್ನು ಓದಿ: Chetan Ahimsa: ಕಾಂಗ್ರೆಸ್ ನೀತಿ ವಿರುದ್ಧ ನಿಂತ ಚೇತನ್ ಅಹಿಂಸಾ: ಕೇರಳ ಸ್ಟೋರಿ ಚಿತ್ರದ ಕುರಿತು ಹೇಳಿದ್ದೇನು ಗೊತ್ತೇ?? ಶಾಕ್ ಆದ ನೆಟ್ಟಿಗರು.

ಒಂದು ಜ್ಯಾಕೆಟ್ ಬೆಲೆ 2ಲಕ್ಷ, ಶರ್ಟ್ ಬೆಲೆ 24 ಸಾವಿರದಿಂದ ಶುರುವಾಗುತ್ತಿದೆ. ಇಷ್ಟು ದುಬಾರಿ ಇದ್ದರು ಕೂಡ, ಜನರು ಇವರ ಬ್ರ್ಯಾಂಡ್ ನ ಬಟ್ಟೆಗಳನ್ನು ಕೊಂಡುಕೊಳ್ಳುವುದಕ್ಕೆ ಉತ್ಸಾಹ ತೋರುತ್ತಿದ್ದು, ಪ್ರಸ್ತುತ ಇವರ ಬ್ರ್ಯಾಂಡ್ ನ ಎಲ್ಲಾ ಬಟ್ಟೆಗಳು ಸೇಲ್ ಆಗಿ ಹೋಗಿದೆ. ಈ ಬಗ್ಗೆ ಆರ್ಯನ್ ಖಾನ್ ಸಂತೋಷವ್ಯಕ್ತಪಡಿಸಿ, ಗ್ರಾಹಕರಿಗೆ ಧನ್ಯವಾದ ಹೇಳಿದ್ದಾರೆ. ಮುಂದಿನ ಸೆಟ್ ಬಟ್ಟೆಗಳ ಜೊತೆಗೆ ಬರುವುದಾಗಿ ತಿಳಿಸಿದ್ದಾರೆ ಆರ್ಯನ್. ಇದರಿಂದ ಶಾರುಖ್ ಖಾನ್ ಅವರಿಗು ಬಹಳ ಸಂತೋಷ ಆಗಿದೆ.

ಮಗನ ಬ್ಯುಸಿನೆಸ್ ಗೆ ಶಾರುಖ್ ಖಾನ್ ಅವರು ಕೂಡ ಸಪೋರ್ಟ್ ಮಾಡಲು ಈ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ ಕಿಂಗ್ ಖಾನ್. ಇನ್ನು ಆರ್ಯನ್ ಖಾನ್ ಚಿತ್ರರಂಗಕ್ಕೆ ಬರುವ ತಯಾರಿ ಕೂಡ ನಡೆಯುತ್ತಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರು ಮಾಡಿಕೊಂಡಿದ್ದಾರಂತೆ. ಇವರ ಮೊದಲ ಸಿನಿಮಾವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಸಂಸ್ಥೆ ನಿರ್ಮಾಣ ಮಾಡಲಿದೆಯಂತೆ.

ಇದನ್ನು ಓದಿ: Smartphone Tricks: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟೆರೆನೆಟ್ ಸ್ಲೋ ಆಗಿದೆಯಾ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ತಡೆದುಕೊಳ್ಳಲು ಆಗಲ್ಲ ಅಷ್ಟು ಬರುತ್ತದೆ.

Comments are closed.