Bride Cancels Marriage: ಕೊನೆ ಕ್ಷಣದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು: ಕಾರಣ ಕೇಳಿ ಭೇಷ್ ಎಂದು ಸಲ್ಯೂಟ್ ಮಾಡಿದ ನೆಟ್ಟಿಗರು. ಏನು ಗೊತ್ತೇ?
Bride Cancels Marriage: ಈಗಿನ ಕಾಲದಲ್ಲಿ ಮದುವೇಗಳು ನಿಂತುಹೋಗುತ್ತಿರುವುದು ಕಾಮನ್ ಆಗಿದೆ. ಹಲವು ಕಾರಣಕ್ಕೆ ಮದುವೆಗಳು ನಿಂತು ಹೋಗುತ್ತಿದೆ, ವರದಕ್ಷಿಣೆ ವಿಚಾರ, ಹುಡುಗ ಅಥವಾ ಹುಡುಗಿ ಬೇರೊಬ್ಬ ವ್ಯಕ್ತಿಯನ್ನು ಲವ್ ಮಾಡಿದ್ದಕ್ಕೆ ಹೀಗೆ ಸಾಕಷ್ಟು ಕಾರಣಗಳಿಗೆ ಮದುವೆ ನಿಂತುಹೋಗುತ್ತಿದೆ. ಆದರೆ ಇಲ್ಲೊಬ್ಬ ಹುಡುಗಿ ಯಾವ ಕಾರಣಕ್ಕೆ ಮದುವೆ ಬೇಡ ಎಂದಿದ್ದಾಳೆ ಎಂದು ತಿಳಿದರೆ ನೀವೇ ಶಾಕ್ ಆಗುತ್ತೀರಿ.
ಈ ಘಟನೆ ನಡೆದಿರುವುದು ಏಪ್ರಿಲ್ 30ರಂದು, ಕಾನ್ಪುರ ದೇಹತ್ ನ ಸಿಕಂದರಾ ಎನ್ನುವ ಊರಿನ ಮನ್ ಪುರ್ ಗ್ರಾಮದಲ್ಲಿ. ಇಲ್ಲಿನ ಹುಡುಗನಿಗೆ ಬನವಾಪುರ ಗ್ರಾಮದ ಹುಡುಗಿಯ ಜೊತೆಗೆ ಮದುವೆ ಫಿಕ್ಸ್ ಆಗಿತ್ತು. ಹುಡುಗಿಯ ಮನೆಗೆ ಹುಡುಗ ಬ್ಯಾಂಡ್ ಬಾಜಾ ಜೊತೆಗೆ, ಸಂಬಂಧಿಕರ ಜೊತೆಗೆ ಅದ್ಧೂರಿಯಾಗಿ ಬಂದಾಗ ಹುಡುಗಿಯ ಮನೆಯವರು ಕೂಡ ಅವರನ್ನು ಚೆನ್ನಾಗಿ ಬರಮಾಡಿಕೊಂಡರು. ನಂತರ ಶಾಸ್ತ್ರಗಳು ಶುರುವಾದವು..
ವರ್ಮಾಲ ಇಂದ ಎಲ್ಲಾ ಶಾಸ್ತ್ರಗಳು ಶುರುವಾಗಿ, ವರನ ಮನೆಯವರು ವಧುವಿನ ಕಡೆಯವರಿಗೆ ವಧುವಿಗಾಗಿ ತಂದಿರುವ ಆಭರಣಗಳೆಲ್ಲವನ್ನು ಕೊಟ್ಟರು. ಇದನ್ನು ನೋಡಿ ಪರೀಕ್ಷಿಸಿದ ವಧುವಿನ ಕಡೆಯವರು, ಆಭರಣಗಳು ಕಡಿಮೆ ಇದೆ ಎಂದು ಜಗಳವಾಡಿ ಮದುವೆಯನ್ನೇ ನಿಲ್ಲಿಸಿಬಿಟ್ಟಿದ್ದಾರೆ, ವಧು ಕೂಡ ಮದುವೆಯನ್ನು ನಿರಾಕರಿಸಿದ್ದಾಳೆ. ಕೊನೆಗೆ ಈ ವಿಚಾರ ಪೊಲೀಸ್ ಠಾಣೆ ವರೆಗು ತಲುಪಿದೆ.
ಪೊಲೀಸ್ ಠಾಣೆಯಲ್ಲಿ ವಧುವಿನ ಮನೆಯವರು ವರದಕ್ಷಿಣೆ ಆರೋಪ ಮಾಡಿದ್ದು, ವರನ ಮನೆಯವರು ನಿರಾಕರಿಸಿದ್ದಾರೆ. ಹಾಗೆಯೇ ವಧುವಿನ ಮನೆಯವರು ತಮಗೆ ಕೊಟ್ಟಿರುವ ಆಭರಣಗಳನ್ನು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಎರಡು ಮನೆಯವರನ್ನು ಕೂರಿಸಿ ಸಮಸ್ಯೆ ಸರಿ ಮಾಡುವುದಕ್ಕೆ ಗಂಟೆಗಟ್ಟಲೇ ಪ್ರಯತ್ನ ಪಟ್ಟರು ಕೂಡ, ಅವರ ಸಮಸ್ಯೆ ಸರಿ ಹೋಗದೆ, ಇಬ್ಬರು ತಮ್ಮ ತಮ್ಮ ಮನೆಗಳಿಗೆ ನಡೆದಿದ್ದಾರೆ.
Comments are closed.