Akhil Akkineni: ಎಂಗೇಜ್ಮೆಂಟ್ ಆಗಿ ಹುಡುಗಿಗೆ ಟೋಪಿ ಹಾಕಿ, ನಟಿಯರ ಜೊತೆ ಚೆಲ್ಲಾಟ ವಾಡಿದ್ದ ಅಖಿಲ್ ಗೆ ಈಗ ಈ ನಟಿ ಜೊತೆ ಡೇಟ್ ಮಾಡುವ ಆಸೆ ಅಂತೇ. ಆ ಸುಂದರಿ ಯಾರು ಗೊತ್ತೇ?
Akhil Akkineni: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬದ ಆಗಿ ಎಂಟ್ರಿ ಕೊಟ್ಟ ಅಖಿಲ್ ಅಕ್ಕಿನೇನಿ ಅವರು ಇಂದಿಗೂ ಸರಿಯಾದ ಸಕ್ಸಸ್ ಸಿಗದೆ ಕಷ್ಟಪಡುತ್ತಿದ್ದಾರೆ. ಅಖಿಲ್ ಅವರ ಮೊದಲ ಸಿನಿಮಾ ಅಖಿಲ್, ತಕ್ಕಮಟ್ಟಿಗೆ ಆವರೇಜ್ ಹಿಟ್ ಎನ್ನಿಸಿಕೊಂಡಿತು. ಆದರ್ಶ್ ಬಳಿಕ ತೆರೆಕಂಡ ಯಾವ ಸಿನಿಮಾ ಕೂಡ ಸಕ್ಸಸ್ ಆಗಲಿಲ್ಲ. ಬ್ಯಾಕ್ ಟು ಬ್ಯಾಕ್ ಡಿಸಾಸ್ಟರ್ ಗಳನ್ನೇ ನೋಡುತ್ತಿದ್ದಾರೆ ಅಖಿಲ್. ಅಖಿಲ್ ಇತ್ತೀಚೆಗೆ ಏಜೆನ್ಟ್ ಸಿನಿಮಾ ಮೂಲಕ ಸಿನಿಪ್ರಿಯರ ಎದುರು ಬಂದರು, ಆದರೆ ಈ ಸಿನಿಮಾ ಕೂಡ ಫ್ಲಾಪ್ ಲಿಸ್ಟ್ ಗೆ ಸೇರಿದೆ.

ಏಜೆನ್ಟ್ ಸಿನಿಮಾಗಾಗಿ ಅಖಿಲ್ ಅವರು ಬಹಳ ಕಷ್ಟಪಟ್ಟಿದ್ದಾರೆ. ಈ ಸಿನಿಮಾವನ್ನು ಸುರೇಂದರ್ ಅವರು ನಿರ್ದೇಶನ ಮಾಡಿದ್ದಾರೆ. ಸಾಕ್ಷಿ ವೈದ್ಯ ಅವರು ಹೀರೋಯಿನ್ ಆಗಿ ನಟಿಸಿದ್ದು, ಏಕೆ ಎಂಟರ್ಟೈನ್ಮೆಂಟ್ಸ್ 80ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದೆ. ಆದರೆ ಈ ಸಿನಿಮಾ ಕೂಡ ಈಗ ಫ್ಲಾಪ್ ಆಗಿದೆ. ಇದರಿಂದ ಅಖಿಲ್ ಸಮಯ ಈಗ ಚೆನ್ನಾಗಿಲ್ಲ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಅಖಿಲ್ ಕೆರಿಯರ್ ನಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿದ್ದು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾ, ಆದರೆ ಬೇರೆ ಸಿನಿಮಾಗಳೆಲ್ಲವು ಫ್ಲಾಪ್ ಆಗಿದೆ. ಯಾವ ದೊಡ್ಡ ಡೈರೆಕ್ಟರ್ ಜೊತೆಗೆ ಎಷ್ಟೇ ಶ್ರಮ ಹಾಕಿ ಸಿನಿಮಾ ಮಾಡುತ್ತಿದ್ದರು ಡಿಸಾಸ್ಟರ್ ಆಗುತ್ತಲೇ ಇದೆ. ಅಖಿಲ್ ಇನ್ನು ಹೊಸದಾಗಿ ಏನಾದರು ಮಾಡಬೇಕು ಎಂದು ನೆಟ್ಟಿಗರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಖಿಲ್ ಅವರು ನಿರೂಪಕಿ ಸುಮಾ ಅವರ ಸುಮಾ ಅಡ್ಡ ಶೋಗೆ ಬಂದಿದ್ದರು.
ಆ ಕಾರ್ಯಕ್ರಮದಲ್ಲಿ ಅಖಿಲ್ ಅವರಿಗೆ ಒಂದು ಪ್ರಶ್ನೆ ಕೇಳಿದರು ಸುಮಾ, ನೀನು ಯಾವ ಹೀರೋಯಿನ್ ಜೊತೆಗೆ ಡೇಟಿಂಗ್ ಹೋಗೋದಕ್ಕೆ ಇಷ್ಟಪಡುತ್ತೀಯಾ ಎಂದು ಕೇಳಿದರು ಸುಮಾ. ಅದಕ್ಕೆ ಒಂದು ಕ್ಷಣ ಕೂಡ ಆಲೋಚನೆ ಮಾಡದೆ, ಪೂಜಾ ಹೆಗ್ಡೆ ಎಂದು ಹೇಳಿದರು ಅಖಿಲ್. ಇದೀಗ ಅಖಿಲ್ ಕೊಟ್ಟ ಈ ಉತ್ತರ ವೈರಲ್ ಆಗುತ್ತಿದ್ದ, ಅಖಿಲ್ ಏನು ಕಡಿಮೆ ಇಲ್ಲ, ಎಂಥ ಹುಡುಗಿಯನ್ನ ಡೇಟ್ ಮಾಡಬೇಕು ಅಂತಿದ್ದಾರೆ ನೋಡಿ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.