Property Law: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯೇ?? ನಿಜಕ್ಕೂ ಇದು ಸಾಧ್ಯನಾ?? ಕಾನೂನು ಏನು ಹೇಳುತ್ತದೆ ಗೊತ್ತೇ?
Property Law: ತಂದೆಯ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನಮ್ಮ ದೇಶದಲ್ಲಿ ಆಗಿನ ಕಾಲದಿಂದ ಪಾಲಿಸಿಕೊಂಡು ಬಂದಿರುವ ಕೆಲವು ವಿಷಯಗಳಿಗೆ. ತಂದೆ ಆಸ್ತಿಯ ವಿಷಯದಲ್ಲಿ ಮೊದಲ ಹಕ್ಕು ಗಂಡುಮಕ್ಕಳಿಗೆ ಇರುತ್ತದೆ. ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ಸರಿಯಾಗಿ ನೀಡಿಲ್ಲ. 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾನೂನಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ.
ಆದರೆ ಇಂದಿಗೂ ಸಹ ತಂದೆಯ ಆಸ್ತಿ ವಿಚಾರದಲ್ಲಿ ಗಂಡು ಮಕ್ಕಳಿಗೆ ಮೊದಲ ಆದ್ಯತೆ ಆಗಿದೆ. ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾರೆ. ಹಾಗಾಗಿ ಹೆಣ್ಣುಮಕ್ಕಳ ಹಕ್ಕಿನ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಿದ್ದರೆ ತಂದೆಯ ಆಸ್ತಿ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಹಕ್ಕು ಇಲ್ಲವಾ? ನಮ್ಮ ಕಾನೂನು ಏನು ಹೇಳುತ್ತೆ ಗೊತ್ತಾ? ತಿಳಿಸುತ್ತೇವೆ ನೋಡಿ..
2005ರಲ್ಲಿ ಜಾರಿಗೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ನಿಯಮದ ಪ್ರಕಾರ,ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳು ಇಬ್ಬರು ಸರಿಸಮವಾದ ಹಕ್ಕು ಇರುತ್ತದೆ. ಮಗಳಿಗೆ ಮದುವೆ ಆಗಿದ್ದರು, ಮದುವೆ ಆಗದೆ ಇದ್ದರು, ಸಂದರ್ಭ ಯಾವುದೇ ಇದ್ದರು ಕೂಡ ತಂದೆ ಆಸ್ತಿ ವಿಷಯದಲ್ಲಿ ಇಬ್ಬರಿಗೂ ಸಮಾನವಾದ ಹಕ್ಕು ಇರುತ್ತದೆ. ಈ ರೀತಿ ಕಾನೂನು ಇರುವಾಗ, ಮಗಳಿಗೆ ತಂದೆ ಆಸ್ತಿ ಮೇಲೆ ಹಕ್ಕು ಇದೆಯೇ ಎನ್ನುವ ಪ್ರಶ್ನೆಗೆ, ಉತ್ತರ ಹೌದು.. ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿ ವಿಚಾರದಲ್ಲಿ ಹಕ್ಕು ಇದ್ದೇ ಇದೆ..
ಇಲ್ಲಿ ಗಮನ ಕೊಡಬೇಕಾದ ಮತ್ತೊಂದು ಅಂಶ ಏನು ಎಂದರೆ, ಒಂದು ವೇಳೆ ತಂದೆಯವರು ಸಾಯುವುದಕ್ಕಿಂತ ಮೊದಲು ಮಗನ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಬಿಟ್ಟಿದ್ದರೆ, ಮಗಳು ಆ ಆಸ್ತಿಯಿಂದ ಭಾಗ ಪಡೆಯಲು ಸಾಧ್ಯ ಇರುವುದಿಲ್ಲ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯ ಪ್ರಕಾರ, ಈ ಕಾನೂನು ಹಿಂದೂ ಧರ್ಮದ ಮಹಿಳೆಯರಿಗೆ, ಬೌದ್ಧ, ಸಿಖ್, ಜೈನ, ಆರ್ಯರಿಗೆ ಸಹ ಅನ್ವಯಿಸುತ್ತದೆ.
Comments are closed.