Kannada News: ಸೂಪರ್ ಮಾರ್ಕೆಟ್ ನಲ್ಲಿ ಕೆಲಸ: ಮದುವೆಯಾಗಿ ಮಕ್ಕಳು ಇದ್ದರೂ ಕೂಡ. ಇರಲಾರದೆ ಇರುವೆ ಬಿಟ್ಟುಕೊಂಡು ಏನಾಗಿದೆ ಗೊತ್ತೇ?
Kannada News: ಇಂದು ನಾವು ತಿಳಿಸುತ್ತಿರುವುದು ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳ ಬಗ್ಗೆ. ಇವರಿಬ್ಬರು ಪ್ರತ್ಯೇಕವಾಗಿ ಮದುವೆಯಾಗಿತ್ತು ಮಕ್ಕಳು ಕೂಡ ಇದ್ದವು. ಕೆಲಸದಲ್ಲಿ ಇಬ್ಬರ ಪರಿಚಯವಾಗಿ, ಮಾತುಕತೆ ನಡೆದು, ಇಬ್ಬರು ಕೂಡ ಇಡೀ ದಿನ ಚಾಟಿಂಗ್ ಮಾಡುತ್ತಾ, ಇವರ ಸಂಬಂಧ ವಿವಾಹೇತರ ಸಂಬಂಧವಾಗಿ ಮುಂದುವರೆಯಿತು. ಸಮಯ ಸಿಕ್ಕಾಗಲೆಲ್ಲಾ ಎಂಜಾಯ್ ಮಾಡುತ್ತಿದ್ದರು. ಕೆಲ ವರ್ಷಗಳ ಕಾಲ ಎಲ್ಲವೂ ಹೀಗೆ ಮುಂದುವರೆಯಿತು. ಆದರೆ ಕೊನೆಗೆ ಆಕೆಯ ಬಾಯ್ ಫ್ರೆಂಡ್ ಏನು ಮಾಡಿದ್ದಾನೆ ಗೊತ್ತಾ?

ಈ ಹುಡುಗಿಯ ಹೆಸರು ಅತಿರಾ, ಈಕೆ ಕೇರಳದ ಅಂಗಮಾಲಿಯಲ್ಲಿ ವಾಸವಿದ್ದು, ಅಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿಯೇ ಅಖಿಲ್ ಎನ್ನುವ ಹುಡುಗನ ಪರಿಚಯವಾಯಿತು. ಇವರಿಬ್ಬರ ಪರಿಚಯ, ಪ್ರೇಮವಾಗಿ, ವಿವಾಹೇತರ ಸಂಬಂಧವಾಗಿ ಕೆಲ ವರ್ಷಗಳ ಕಾಲ ಹೀಗೆಯೇ ಮುಂದುವರೆಯಿತು. ಒಂದು ಸಾರಿ ಅಖಿಲ್ ಅತಿರಾ ಹತ್ತಿರ ದುಡ್ಡು ಬೇಕು ಎಂದು ಕೇಳಿದ್ದಾನೆ. ಆಗ ಆಕೆ ತನ್ನ 12 ಗ್ರಾಮ್ ಬಂಗಾರದ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದಾಳೆ.
ತಿಂಗಳುಗಳು ಕಳೆದರು ಅಖಿಲ್ ಹಣ ವಾಪಸ್ ಕೊಡುವ ಮನಸ್ಸು ಮಾಡಲಿಲ್ಲ, ಹಣ ಕೇಳಿದರೆ ಆಗ ಈಗ ಎಂದು ಮುಂದಕ್ಕೆ ಹಾಕುತ್ತಲೇ ಇದ್ದ. ಆಗ ಅತಿರಾ ಹಣ ಕೊಡಲೇಬೇಕು ಇಲ್ಲದೆ ಬಂಗಾರ ಸಿಗುವುದಿಲ್ಲ ಎಂದು ಹೇಳಿದಳು. ಇದರಿಂದ ಅಖಿಲ್ ಏನಾದರೂ ಮಾಡಿ ಆಕೆಯನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ. ಏಪ್ರಿಲ್ 29ರಂದು ಕೆಲಸಕ್ಕೆ ಹೋದಮೇಲೆ, ಇಬ್ಬರು ತ್ರಿಶೂರ್ ನಲ್ಲಿರುವ ಅತಿರಾಪಳ್ಳಿಗೆ ಹೋದರು, ಕಾಡಿನ ಒಳಗೆ ಅತಿರಾಳನ್ನು ಕರೆದುಕೊಂಡು ಹೋದ ಅಖಿಲ್..
ಅಲ್ಲಿ ಆಕೆಯನ್ನು ಮುಗಿಸಿ, ಎಸ್ಕೇಪ್ ಆದ..ಅತಿರಾ ಮನೆಗೆ ಬಂದಿಲ್ಲ ಎಂದು ಆಕೆಯ ಮನೆಯವರು ಪೊಲೀಸರ ಬಳಿ ದೂರು ನೀಡಿದ್ದಾರೆ. ಪೊಲೀಸರು ಆಕೆ ಕೆಲಸ ಮಾಡುತ್ತಿದ್ದ ಸೂಪರ್ ಮಾರ್ಕೆಟ್ ಗೆ ಹೋಗಿ ವಿಚಾರಿಸಿದಾಗ, ಅತಿರಾ ಅಖಿಲ್ ಇಬ್ಬರು ಅಂದು ಕೆಲಸಕ್ಕೆ ಬಂದಿಲ್ಲ ಎಂದು ಗೊತ್ತಾಗಿದೆ. ಪೊಲೀಸರು ಅಖಿಲ್ ಅನ್ನು ಹುಡುಕಿ ವಿಚಾರಿಸಿದಾಗ ಮೊದಲು ಅವನು ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ನಂತರ ಪೊಲೀಸರ ಸ್ಟೈಲ್ ನಲ್ಲಿ ಕೇಳಿದಾಗ, ನಡೆದ ಘಟನೆಯನ್ನು ತಿಳಿಸಿದ್ದಾನೆ.