Astrology: ಮನೆಯಲ್ಲಿ ಚೇಳು ಕಂಡರೆ ಅದಕ್ಕೆ ಏನು ಮಾಡಬೇಡಿ, ಯಾಕೆ ಗೊತ್ತೇ? ಅದು ಬಂದಿರುವುದು ಎಂತಹ ಒಳ್ಳೆಯ ಸಂಕೇತ ಗೊತ್ತೇ? ಏನಾಗಲಿದೆ ಗೊತ್ತೆ?
Astrology: ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬಂದಾಗ ನಮ್ಮ ಮನೆಗಳಲ್ಲಿ ಕ್ಲೀನಿಂಗ್ ಕೆಲಸಗಳು ಶುರುವಾಗುತ್ತದೆ. ಹಾಗೆ ಕ್ಲೀನ್ ಮಾಡುವಾಗ ಮನೆಯಲ್ಲಿ ಅಡಗಿರುವ ಜೀವಿಗಳು ಅಂದರೆ ಕ್ರಿಮಿ ಕೀಟಗಳು ಹೊರಗೆ ಬರುತ್ತದೆ. ಒಂದು ವೇಳೆ ಹೀಗೆ ಕ್ಲೀನ್ ಮಾಡುವಾಗ, ಚೇಳು ಕಾಣಿಸಿಕೊಂಡರೆ ಭಯದಲ್ಲಿ ಅದನ್ನು ಕೊಲ್ಲಬೇಡಿ. ನಮ್ಮ ಸಂಪ್ರದಾಯದಲ್ಲಿ ಕೆಲವು ವಸ್ತುಗಳಿಗೆ, ಪ್ರಾಣಿಗಳಿಗೆ ವಿಶೇಷ ಮಹತ್ವ ಇದೆ. ಅವುಗಳನ್ನು ಹುಷಾರಾಗಿ ಹೊರಗೆ ಬಿಡಬೇಕು ಎಂದು ಹೇಳುತ್ತಾರೆ. ಚೇಳು ಕೂಡ ಒಂದು, ಹಾಗಿದ್ದರೆ ಚೇಳು ಮನೆಯಲ್ಲಿ ಕಾಣಿಸಿದರೆ ಅದು ಎಷ್ಟು ಒಳ್ಳೆಯ ಸಂಕೇತ ಗೊತ್ತಾ?
ಮಂಗಳಕರ ಸಂಕೇತ :- ಮನೆ ಕ್ಲೀನ್ ಮಾಡುವಾಗ ಚೇಳು ಕಾಣಿಸಿದರೆ ಅದು ಮಂಗಳಕರವಾದ ಸಂಕೇತ, ಚೇಳು ಕಂಡರೆ ನೀವು ಬೇಗ ಹಣ ಪಡೆಯುತ್ತೀರಿ ಎಂದು ಅರ್ಥ. ನಿಮ್ಮ ಮನೆಯಲ್ಲಿ ಚೇಳು ವಾಸ ಮಾಡುತ್ತಿದ್ದರೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ, ನಿಮ್ಮ ಮನೆಯ ಮೇಲೆ ಇದೆ ಎಂದು ಅರ್ಥ.
ತೊಂದರೆ ಮಾಡಬೇಡಿ :- ಮನೆಯ ಗೋಡೆಗಳನ್ನು ಕ್ಲೀನ್ ಮಾಡುವಾಗ ಚೇಳು ಕಾಣಿಸಿಕೊಂಡರೆ, ಅದಕ್ಕೆ ತೊಂದರೆ ಮಾಡಬೇಡಿ, ಹುಷಾರಾಗಿ ಚೇಳನ್ನು ಮನೆಯಿಂದ ಹೊರಗೆ ಬಿಡಿ. ಚೇಳುಗಳು ಲಾಭ ಬರುವ ಸೂಚನೆ ಎಂದು ಹೇಳಲಾಗುತ್ತದೆ. ಅದು ಶುಭ ಸೂಚನೆ ಆಗಿದ್ದು, ಲಕ್ಷ್ಮಿದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎಂದು ಅರ್ಥ.
ಬ್ಯುಸಿನೆಸ್ ನಲ್ಲಿ ಲಾಭ :- ಒಂದು ವೇಳೆ ನಿಮ್ಮ ಮನೆಯಲ್ಲಿ ಹಳದಿ ಬಣ್ಣದ ಚೇಳುಗಳು ಕಾಣಿಸಿಕೊಂಡರೆ, ಅದು ಶುಭ ಸಂಕೇತ ಎಂದು ದೊಡ್ಡವರು ಹೇಳುತ್ತಾರೆ. ಚೇಳು ಕಾಣಿಸಿದ ನಂತರ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ನಲ್ಲಿ ಲಾಭ ಆಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗಲಿದೆ, ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.
Comments are closed.