Viral News: ಬೆಣ್ಣೆಯಂತಹ ಹೆಂಡತಿ: ಮಗು ಆದಮೇಲೆ ಓದುತ್ತೇನೆ ಎಂದಳು, ಗಂಡ ಬೇಡ ಎಂದ- ಮಗುವಿನ ಮುಂದೇನೆ ಏನಾಗಿ ಹೋಯ್ತು ಗೊತ್ತೇ??
Viral News: ಗಂಡ ಹೆಂಡತಿ ಸಂಬಂಧ ಬಹಳ ಸೂಕ್ಷ್ಮವಾದದ್ದು, ಇಬ್ಬರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಏರುಪೇರು ಬರಬಹುದು, ಆದರೆ ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕು, ಅದೇ ಸಂಸಾರ. ಅದನ್ನು ಬಿಟ್ಟು, ಹಲವರು ಕೋಪದ ಕೈಗೆ ಬುದ್ಧಿ ಕೊಟ್ಟು, ದಾಂಪತ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ..ಇತ್ತೀಚೆಗೆ ಇಂಥದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ, ಹೆಂಡತಿಗೆ ಓದಬೇಕು ಎಂದು ಆಸೆ ಇತ್ತು. ಅದರ ಗಂಡ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ, ಇದಕ್ಕೆ ದುಃಖಿತಳಾದ ಹೆಂಡತಿ ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ?
ಈ ಘಟನೆ ನಡೆದಿರುವುದು ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ಗೆ ಸೇರಿದ ಗೌರವ್ ಎನ್ನುವ ಹುಡುಗ ಅದೇ ಊರಿನ ಇಂದು ತಿವಾರಿ ಎನ್ನುವ ಹುಡುಗಿಯ ಜೊತೆಗೆ 2017ರಲ್ಲಿ ಮದುವೆಯಾದರು. ಈ ಜೋಡಿಗೆ 4 ವರ್ಷದ ಮಗ ಕೂಡ ಇದ್ದಾನೆ. ಮದುವೆ ನಡೆದು ಕೆಲ ಸಮಯದ ವರೆಗು ಇವರಿಬ್ಬರ ಸಂಸಾರ ಬಹಳ ಚೆನ್ನಾಗಿಯೇ ಇತ್ತು. ಆದರೆ ನಂತರ ಇಬ್ಬರ ನಡುವೆ ಜಗಳಗಳು ಶುರುವಾದವು, ಇಬ್ಬರಲ್ಲು ಎಲ್ಲಾ ವಿಷಯಕ್ಕೂ ಜಗಳ ಬರುತ್ತಿತ್ತು. ಕೆಲವು ದಿನಗಳ ಹಿಂದೆ ಓದುವ ವಿಷಯಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.
ಆಕೆಗೆ ಓದಬೇಕು ಎಂದು ಆಸೆ ಇತ್ತು, ತಾನು ಓದಲೇಬೇಕು ಎಂದು ಹಠ ಮಾಡಿದಳು. ಆದರೆ ಗೌರವ್ ಹೆಂಡತಿ ಓದುವುದಕ್ಕೆ ಒಪ್ಪಿಗೆ ಕೊಡಲಿಲ್ಲ. ಅವನನ್ನು ಒಪ್ಪಿಸಲು ಎಷ್ಟೇ ಪ್ರಯತ್ನಪಟ್ಟರು, ಅತ್ತುಕರೆದು ಮಾಡಿದರೂ ಗೌರವ್ ಒಪ್ಪಲಿಲ್ಲ. ಇದರಿಂದ ಇಬ್ಬರು ಬೇರೆ ಬೇರೆಯಾಗಿ ಬೇರೆ ಬೇರೆ ಕೋಣೆಗಳಲ್ಲಿ ಮಲಗಿಕೊಂಡರು. ಇಬ್ಬರಿಗೂ ಸಿಟ್ಟು ಕಡಿಮೆ ಆಗಿರಲಿಲ್ಲ. ಪಕ್ಕದ ರೂಮ್ ನಲ್ಲಿ ಮಲಗಿದ್ದ ಇಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಮಧ್ಯರಾತ್ರಿ ಉಸಿರು ನಿಲ್ಲಿಸಿಕೊಂಡಿದ್ದಾಳೆ. ಬೆಳಗ್ಗೆ ರೂಮ್ ಬಾಗಿಲು ಓಪನ್ ಮಾಡದೆ ಇದ್ದದ್ದು ನೋಡಿ ಗೌರವ್ ಗೆ ಅನುಮಾನ ಶುರುವಾಯಿತು. ಬಾಗಿಲು ಮುರಿದು ನೋಡಿ, ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿ ಶಾಕ್ ಆಗಿದ್ದಾನೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇತ್ತ ಸಿಂಧು ತಂದೆ ತಾಯಿ ವರದಕ್ಷಿಣೆ ಕಿರುಕುಳ ನೀಡಿರುವುದಕ್ಕೆ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ. ಇದೀಗ ಪೊಲೀಸರು ಗೌರವ್ ಮತ್ತು ಅವನ ತಂದೆಯನ್ನು ಬಂಧಿಸಿದ್ದಾರೆ..
Comments are closed.