Anupama Gowda: ಅನುಪಮಾ ಜೀವನ ನೀವಂದು ಕೊಂಡಂತೆ ಇರಲಿಲ್ಲ, ತಂದೆ ಕುಡಿತಕ್ಕೆ ದಾಸ, ಒಂದು ಹೊತ್ತಿನ ಊಟಕ್ಕೂ ಕಷ್ಟ ಬಿದ್ದ ಅನುಪಮಾ ಕಥೆ.
Anupama Gowda: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವವರು ನಟಿ ಅನುಪಮಾ ಗೌಡ (Anupama Gowda). ಇವರು ಬಿಗ್ ಬಾಸ್ (Bigg Boss) ಶೋ ಇಂದ ಹೆಚ್ಚು ಗುರುತಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ನಗುನಗುತ್ತಾ ಸಂತೋಷವಾಗಿ ಇರುತ್ತಿದ್ದ ಅನುಪಮಾ ಗೌಡ ಅವರು ಬಾಲ್ಯದಿಂದ ನಿಜ ಜೀವನದಲ್ಲಿ ಹೇಗಿದ್ರು ಗೊತ್ತಾ? ಅವರ ಜೀವನ ಹೀಗೆ ಇತ್ತಾ? ಯಾರಿಗೂ ಗೊತ್ತಿಲ್ಲದ ಅವರ ಲೈಫ್ ಸ್ಟೋರಿ ತಿಳಿಸುತ್ತೇವೆ ನೋಡಿ..

ನಟಿ ಅನುಪಮಾ ಗೌಡ ಅವರು ಚಿಕ್ಕ ವಯಸ್ಸಿನಲ್ಲಿ ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟಪಡುತ್ತಿದ್ದರು. ಇವರ ತಂದೆ ಚಿತ್ರರಂಗದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಒಳ್ಳೆಯ ಸಂಬಳ ಸಿಗುತ್ತಿರಲಿಲ್ಲ. ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಜವಾಬ್ದಾರಿ ಅವರ ತಂದೆ ಮೇಲಿತ್ತು, ಆದರೆ ಅನುಪಮಾ ಅವರ ತಂದೆ ಈ ಜವಾಬ್ದಾರಿಗಳನ್ನು ತೆಗೆದುಕೊಳ್ಳದೆ ಯಾವಾಗಲೂ ಕುಡಿದಿರುತ್ತಿದ್ದರು.
ಹೆಂಡತಿ ಮಕ್ಕಳ ಮೇಲೆ ಅವರಿಗೆ ಗಮನವೇ ಇರಲಿಲ್ಲ. ಇಡೀ ಮನೆಯ ಜವಾಬ್ದಾರಿ ಅನುಪಮ ಅವರ ತಾಯಿ ಮೇಲೆಯೇ ಇತ್ತು. ಹೀಗಿದ್ದಾಗ ಅನುಪಮಾ ಅವರು ತಾಯಿ ಜೊತೆ ನಿಂತರು, ಅನುಪಮಾ ಅವರು ಕೂಡ ಮನೆಕೆಲಸಕ್ಕೂ ಹೋಗಿದ್ದಾರೆ. ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದಾಗ, ಅನುಪಮಾ ಅವರು 6ನೇ ತರಗತಿ ನಂತರ ಓದುವುದನ್ನು ಮುಂದುವರೆಸುವುದಕ್ಕೂ ಕೂಡ ಸಾಧ್ಯವಾಗಲಿಲ್ಲ. ಚಿಕ್ಕ ವಯಸ್ಸಿನಲ್ಲಿ ನಟ ದರ್ಶನ್ (Darshan) ಅವರ ಲಂಕೇಶ್ ಪತ್ರಿಕೆ (Lankesh Patrike) ಸಿನಿಮಾದಲ್ಲಿ, ಬಾಲನಟಿಯಾಗಿ ಅವಕಾಶ ಪಡೆದರು.
ಬಳಿಕ ಸಣ್ಣಪುಟ್ಟ ಅವಕಾಶಗಳನ್ನು ಪಡೆದುಕೊಂಡರು. ಬಳಿಕ ಅಕ್ಕ ಧಾರವಾಹಿ ಮೂಲಕ ನಟಿಯಾಗಿ ಒಳ್ಳೆಯ ಅವಕಾಶ ಪಡೆದುಕೊಂಡರು. ತಂದೆ ಕಷ್ಟದಲ್ಲಿದ್ದಾಗ, ಅನುಪಮಾ ಅವರೇ ಸಹಾಯ ಮಾಡಿದರು. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ ಅನಪಮಾ ಗೌಡ ಅವರು ಇಂದು ಒಳ್ಳೆಯ ಹಂತಕ್ಕೆ ಬಂದು, ತಂದೆ ತಾಯಿ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರ ಕಥೆ ನಿಜಕ್ಕೂ ಹಲವು ಹೆಣ್ಣುಮಕ್ಕಳಿಗೆ ಸ್ಫೂರ್ತಿ ಆಗಿದ್ದಾರೆ.