Neer Dose Karnataka
Take a fresh look at your lifestyle.

Railway Rules: ರೈಲಿನಲ್ಲಿ ಯಾವುದೇ ವಸ್ತುಗಳು ಎಂಆರ್ಪಿ(MRP) ದರಕ್ಕಿಂತ ಹೆಚ್ಚು ಮಾರಾಟ ಮಾಡಿದರೇ, ದೂರು ನೀಡಿ ಪರಿಹಾರ ಪಡೆಯುವುದು ಹೇಗೆ ಗೊತ್ತೇ??

Railway Rules: ಪ್ರತಿದಿನ ರೈಲಿನಲ್ಲಿ ಓಡಾಡುವ ಅನೇಕ ಜನರಿದ್ದಾರೆ. ವಿಶ್ವದಲ್ಲಿ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಗಳಲ್ಲಿ ನಮ್ಮ ಭಾರತ ಕೂಡ ಒಂದು. ಟ್ರೇನ್ ಗಳಲ್ಲಿ ದೂರದ ಪ್ರಯಾಣ ಮಾಡುವವರು ಹೆಚ್ಚಾಗಿ ಕಂಡುಬರುತ್ತಾರೆ. ಹಾಗೆ ದೂರದ ಊರುಗಳಿಗೆ ಪ್ರಯಾಣ ಮಾಡುವಾಗ, ಜನರಿಗೆ ಹಸಿವಾಗಿ ಏನಾದರೂ ತಿನ್ನಬೇಕು ಎಂದು ಅನ್ನಿಸುವುದು ಸಹಜ. ನಮ್ಮ ಭಾರತದ ರೈಲ್ವೆ ಸಂಸ್ಥೆಯಲ್ಲಿ ಕಡಿಮೆ ಬೆಲೆಗೆ, ಆರಾಮದಾಯಕ ಪ್ರಯಾಣ ಒದಗಿಸುತ್ತದೆ.

ಆದರೆ ರೈಲ್ವೆ ಇಲಾಖೆಯಲ್ಲಿ ಆಹಾರ ಮಾರಾಟ ಮಾಡುವ ಕೆಲವರು ತಮ್ಮ ಮನಸ್ಸಿಗೆ ಬಂದ ಹಾಗೆ ಎಂ.ಆರ್.ಪಿ ಗಿಂತ ಹೆಚ್ಚಿನ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರು ನೀಡಿದ್ದಾರೆ. ಈ ರೀತಿ MRP ಗಿಂತ ಹೆಚ್ಚು ದರದಲ್ಲಿ ವ್ಯಾಪಾರ ಮಾಡುವುದು ಕಾನೂನಿನ ಪ್ರಕಾರ ತಪ್ಪಾಗಿದ್ದು, ಹೀಗೆ ನಡೆದರೆ ನೀವು ಕೂಡಲೇ ಅವರ ವಿರುದ್ಧ ದೂರು ನೀಡಬಹುದು. ಈ ದೂರು ನೀಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ನಿಜಕ್ಕೂ ಸಾವನ್ನಪ್ಪಿದ್ದು ಹೇಗೆ ಗೊತ್ತೇ?? ಹೀಗೆ ಹಾಗಲೂ ಅಸಲಿ ಕಾರಣವೇನು ಗೊತ್ತೆ??

ರೈಲು ನಿಲ್ದಾಣಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು ಇರುತ್ತದೆ. ಅಂಥ ಅಂಗಡಿಗಳಲ್ಲಿ ಖರೀದಿ ಮಾಡುವಾಗ ಜನರು ಸಾಮಾನ್ಯವಾಗಿ ಅವುಗಳ ಬೆಲೆಯನ್ನು ಚೆಕ್ ಮಾಡುವುದಿಲ್ಲ, ಅಂಗಡಿಯವರು ಕೂಡ ಹೆಚ್ಚಿನ ಹಣವನ್ನೇ ಕೇಳಿರುತ್ತಾರೆ. ಒಂದು ವೇಳೆ ಹೆಚ್ಚು ಹಣ ಪಡೆದರೆ, ನೀವು ರೈಲ್ವೆ ಸಹಾಯವಾಣಿ 139 ಗೆ ಕರೆ ಮಾಡಿ ದೂರು ನೀಡಬಹುದು. ಅಥವಾ ರೈಲ್ವೆ ಅಧಿಕಾರಿಗಳ ಬಳಿ ನೇರವಾಗಿ ದೂರು ನೀಡಬಹುದು. ಅಥವಾ ರೈಲ್ವೆ ಆಪ್ ಮೂಲಕ ಕೂಡ ದೂರು ನೀಡಬಹುದು.

ಈ ದೂರು ನೀಡುವುದಕ್ಕಿಂತ ಮೊದಲು ನೀವು ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು. ಸ್ಟಾಲ್ ನಂಬರ್, ಅಂಗಡಿ ಓನರ್ ಹೆಸರು, ಪ್ಲಾಟ್ ಫಾರ್ಮ್ ನಂಬರ್ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ತಿಳಿದುಕೊಂಡಿದ್ದು ನಂತರ ದೂರು ನೀಡಬೇಕು. ನೀವು ಆಹಾರ ಖರೀದಿ ಮಾಡಿದ್ದು ಯಾವಾಗ ಎನ್ನುವುದು ಕೂಡ ನಿಮ್ಮ ನೆನಪಿನಲ್ಲಿ ಇರಬೇಕು. ಇದೆಲ್ಲವನ್ನು ಮರೆಯದೇ ನಂತರ ದೂರು ನೀಡಿ. ಇದನ್ನು ಓದಿ..Bajaj Chetak: ದೇಶವೇ ಮೆಚ್ಚುವಂತೆ ಇರುವ ಚೇತಕ್ ಎಲೆಕ್ಟರ್ ಸ್ಕೂಟರ್; ಇದರ ವಿಶೇಷತೆ ಬೆಲೆ ಕೇಳಿದರೆ, ಇಂದೇ ಖರೀದಿ ಮಾಡುತ್ತೀರಿ.

Comments are closed.