Pushpa 2: ಪುಷ್ಪ 2 ಸಿನೆಮಾದ ಬಜೆಟ್ ಕೇಳಿದರೆ, ನಿಂತಲ್ಲೇ ನೀರು ಕುಡಿದು ಮಲಗಿಕೊಳ್ತಿರ. ಯಪ್ಪಾ ಈ ಸಿನಿಮಾಗಾಗಿ ಇಷ್ಟೊಂದಾ??
Pushpa 2: ಪುಷ್ಪ ಸಿನಿಮಾ 2021ರ ಕೊನೆಯಲ್ಲಿ ಬಿಡುಗಡೆಯಾಗಿ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿ ಆಯಿತು ಎನ್ನುವ ವಿಷಯ ಗೊತ್ತೇ ಇದೆ. ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಇದು ಬಿಗ್ ಬಜೆಟ್ ಸಿನಿಮಾ ಹಾಗೂ ಅತಿಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸುಕುಮಾರ್ ಹಾಗೂ ಅಲ್ಲು ಅರ್ಜುನ ಅವರ ಕಾಂಬಿನೇಷನ್ ನ ಪುಷ್ಪ ಸಿನಿಮಾದ ಸಕ್ಸಸ್ ನಂತರ ಈಗ ಪುಷ್ಪ2 ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಸಿನಿಮಾ ಇನ್ನು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎನ್ನುವ ಭರವಸೆ ಎಲ್ಲರಲ್ಲು ಇದೆ.
ಇನ್ನು ಪುಷ್ಪ2 ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಅದ್ಧೂರಿಯಾಗಿ ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ ಥ್ರಿಲ್ ನೀಡುವ ಆಕ್ಷನ್ ಸೀಕ್ವೆನ್ಸ್ ಸಹ ಪುಷ್ಪ2 ಸಿನಿಮಾದಲ್ಲಿ ಇರಲಿದೆ. ಇತ್ತೀಚೆಗೆ ಪುಷ್ಪ2 ಫಸ್ಟ್ ಲುಕ್ ಬಿಡುಗಡೆಯಾಗಿ ದೊಡ್ಡದಾಗಿಯೇ ಸದ್ದು ಮಾಡಿತ್ತು. ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಅವರು ಗಂಗಮ್ಮ ಜಾತ್ರೆಯ ಕಾಳಿಕಾದೇವಿ ಗೆಟಪ್ ನಲ್ಲಿ ಮಿಂಚಿದ್ದರು. ಈ ದೃಷ್ಯ ದೊಡ್ಡದೊಂದು ಆಕ್ಷನ್ ಸೀಕ್ವೆನ್ಸ್ ನ ಭಾಗ ಎಂದು ಹೇಳಲಾಗಿದೆ. ಇದನ್ನು ಓದಿ..Nagma Life Story: ಹಣದ ಆಸೆಗಾಗಿ ಮದುವೆಯಾಗದೆ ಉಳಿದಿರುವ ಖ್ಯಾತ ನಟಿ ನಗ್ಮಾ ರವರಿಗೆ ಅಪ್ಪ ಅಮ್ಮ ಇಂಜೆಕ್ಷನ್ ಕೊಟ್ಟಿದ್ದು ಯಾಕೆ ಗೊತ್ತೇ?
ಈಗಾಗಲೇ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಬ್ಯುಸಿನೆಸ್ ದೊಡ್ಡದಾಗಿಯೇ ನಡೆದಿದೆ. ಪುಷ್ಪ2 ಸಿನಿಮಾದ ಮ್ಯೂಸಿಕ್ ರೈಟ್ಸ್ ಅನ್ನು ಭೂಷಣ್ ಕುಮಾರ್ ಅವರ ಒಡೆತನದ ಟಿಸೀರೀಸ್ ಸಂಸ್ಥೆ ಖರೀದಿ ಮಾಡಿದೆ. ಪುಷ್ಪ2 ಹಿಂದಿ ವರ್ಷನ್ ಡಬ್ಬಿಂಗ್ ರೈಟ್ಸ್ ಅನ್ನು ಕೂಡ ಭೂಷಣ್ ಕುಮಾರ್ ಅವರೇ ಪಡೆದಿದ್ದು, ಟಿಸೀರೀಸ್ ಸಂಸ್ಥೆಯ ಕೈ ಸೇರಿದೆ. ಮ್ಯೂಸಿಕ್ ಮತ್ತು ಸ್ಯಾಟಿಲೈಟ್ ರೈಟ್ಸ್ ಎರಡು ಸೇರಿ 60ಕೋಟಿಗೆ ಒಪ್ಪಿಕೊಂಡಿದ್ದಾರಂತೆ. ಇದುವರೆಗಿನ ಭಾರತೀಯ ಸಿನಿಮಾಗಳ ಮ್ಯೂಸಿಕ್ ಗೆ ಸಿಕ್ಕಿರುವ ಅತಿದೊಡ್ಡ ಮೊತ್ತ ಇದು ಎನ್ನಲಾಗಿದೆ.
ಪುಷ್ಪ1 ಸಿನಿಮಾದ ಹಾಡುಗಳು ವಿಶ್ವಾದ್ಯಂತ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಎನ್ನುವ ವಿಷಯ ಗೊತ್ತೇ ಇದೆ. ಪುಷ್ಪ ಹಾಡುಗಳನ್ನು ಈಗಲೂ ಎಲ್ಲರೂ ಕೇಳುತ್ತಾರೆ. ವಿಶ್ವ ಮಟ್ಟದಲ್ಲಿ ಟಾಪ್ 10 ಟ್ರೆಂಡಿಂಗ್ ಹಾಡುಗಳ ಸಾಲಿನಲ್ಲಿ ಪುಷ್ಪ ಸಿನಿಮಾದ ಹಾಡು ಇತ್ತು ಎನ್ನುವುದು ಮತ್ತೊಂದು ವಿಶೇಷತೆ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಾಡುಗಳು ಸುದ್ದಿಯಾಗಲು ಕಾರಣ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು. ಇದೇ ರೀತಿ ಪುಷ್ಪ2 ಗು ದೇವಿಶ್ರೀ ಪ್ರಸಾದ್ ಅವರು ಅದ್ಭುತವಾದ ಸಂಗೀತ ನೀಡಲಿದ್ದಾರೆ. ಹಾಗಾಗಿ ಭೂಷಣ್ ಕುಮಾರ್ ಅವರು ಅಷ್ಟು ದೊಡ್ಡ ಮೊತ್ತ ನೀಡಿ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.. ಇದನ್ನು ಓದಿ.. Ravichandran: ರವಿ ಚಂದ್ರನ್ ಸೋಲಲು ಕಾರಣವೇನು ಗೊತ್ತೇ?? ನಿಜಕ್ಕೂ ಟಾಪ್ ನಟನಿಗೆ ಈ ಪರಿಸ್ಥಿತಿ ಬರಲು ಕಾರಣವಾಗಿದ್ದು ಯಾರು ಗೊತ್ತೇ??
Comments are closed.