News: ತಾಯಂದಿರ ದಿನವೇ ಮತ್ತೊಂದು ದಾರುಣ- ನಿನಗೆ ಕೈ ಗಳು ಹೇಗೆ ಬಂದವು ತಾಯಿ…
News: ನಿನ್ನೆ ಇಡೀ ವಿಶ್ವದಲ್ಲಿ ತಾಯಂದಿರ ದಿನಾಚರಣೆ ನಡೆದಿದೆ. ಈ ದಿನದಂದು ಎಲ್ಲರೂ ತಮ್ಮ ತಾಯಿಗೆ ವಿಶ್ ಮಾಡಿ, ಅವರೊಡನೆ ಸೆಲೆಬ್ರೇಟ್ ಮಾಡಿದ್ದಾರೆ. ಅಮ್ಮ ಎಂದರೆ ಮಕ್ಕಳಿಗೋಸ್ಕರ ಏನನ್ನಾದರೂ ಮಾಡಲು ತಯಾರಾಗಿರುವ ಒಂದೇ ಜೀವ. ಮಕ್ಕಳೆಂದರೆ ಪ್ರಾಣ ಬಿಡುವ ಜೀವ ತಾಯಿ. ಆದರೆ ತಾಯಂದಿರ ದಿನದಂದೇ ಈ ತಾಯಿ ಮಾಡಿರುವ ಕೆಲಸಕ್ಕೆ ಕುಟುಂಬವೇ ಪಶ್ಚಾತ್ತಾಪ ಪಡುವ ಹಾಗೆ ಆಗಿದೆ. ನಿಜಕ್ಕೂ ಏನಾಗಿದೆ ಗೊತ್ತಾ?

ಘಟನೆ ಏನು ಎಂದರೆ.. ರಂಗಾರೆಡ್ಡಿ ಜಿಲ್ಲೆಯ ಮದ್ಗುಲಾ ಮಂಡಲದ ಕುಬ್ಯ ತಾಂಡಾದಲ್ಲಿ ಶ್ರೀನಿವಾಸ್ ಮತ್ತು ಭಾರತಿ ಹೆಸರಿನ ಗಂಡ ಹೆಂಡತಿ ಇದ್ದರು, ಇವರಿಗೆ 2020ರಲ್ಲಿ ಮದುವೆ ಆಯಿತು. ಇತ್ತೀಚೆಗೆ ಇವರು ಮೀರ್ ಪೇಟ್ ನ ಪಿಎಸ್ ವ್ಯಾಪ್ತಿಗೆ ಬರುವ ಜಿಲ್ಲೆಲಗುಡಾದಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದಾರೆ. ಇವರಿಗೆ ವಿಕ್ಕಿ ಹೆಸರಿನ 18 ತಿಂಗಳ ಮಗು, ಲಕ್ಕಿ ಎನ್ನುವ 8 ತಿಂಗಳ ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲವೂ ಚೆನ್ನಾಗಿಯೇ ಸಾಗುತ್ತಿದ್ದಾಗ, ಸಣ್ಣ ವಿಷಯಕ್ಕೆ ಇವರಿಬ್ಬರ ನಡುವೆ ಜಗಳ ಶುರುವಾಗಿದೆ. ಇದನ್ನು ಓದಿ..Kannada: ವಯಸ್ಸಿನ ಆಸೆ ತಡೆದುಕೊಳ್ಳಲಾರದೆ ಅಣ್ಣನ ಮಗಳು ಎಂಬುದನ್ನು ನೋಡದೆ, ಆತ ಮಾಡಿದ್ದೇನು ಗೊತ್ತೇ?? ಕೊನೆಗೆ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?
ಭಾನುವಾರ ಬೆಳಗ್ಗೆ ಭಾರತಿಯ ತಂದೆ ತಾಯಿ ಕೂಡ ಮನೆಗೆ ಬಂದಿದ್ದಾರೆ. ನಂತರವೂ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಜಗಳ ನಡೆಯುತ್ತಿದ್ದ ಹಾಗೆಯೇ ಶ್ರೀನಿವಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ನಡೆದ ಜಗಳದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಭಾರತಿ, ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಒಂದು ಬಕೆಟ್ ಒಳಗಿನ ನೀರಿನಲ್ಲಿ ಮುಳುಗಿಸಿ, ಅವರ ಕಥೆಯನ್ನೇ ಮುಗಿಸಿದ್ದಾರೆ. ನಂತರ ಆಕೆ ಕೂಡ ಉಸಿರು ನಿಲ್ಲಿಸಿಕೊಂಡಿದ್ದಾಳೆ. ಅದಕ್ಕಿಂತ ಮೊದಲು ಶ್ರೀನಿವಾಸ್ ಗೆ ಕಾಲ್ ಮಾಡಿ ತಾನು ಈ ರೀತಿ ಮಾಡುವುದಾಗಿ ತಿಳಿಸಿದ್ದಾಳೆ.
ಈ ಮಾತು ಕೇಳಿ ತಕ್ಷಣವೇ ಮನೆಗೆ ಬಂದು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದಾರೆ. ಡಾಕ್ಟರ್ ಮಕ್ಕಳನ್ನು ಪರೀಕ್ಷಿಸಿ ಮಕ್ಕಳು ಅದಾಗಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಭಾರತಿ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಉಸ್ಮಾನಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೀಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಾಯಂದಿರ ದಿನದಂದು ಮಕ್ಕಳನ್ನೇ ಮುಗಿದು, ತಾನು ಹೀಗೆ ಮಾಡಿಕೊಂಡಿರುವ ಈ ತಾಯಿಯ ಘಟನೆ ಭಾರಿ ಸಂಚಲನ ಸೃಷ್ಟಿಸಿದೆ. ಇದನ್ನು ಓದಿ..Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.
Comments are closed.