Neer Dose Karnataka
Take a fresh look at your lifestyle.

RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?

RBI: ನಮ್ಮ ದೇಶದಲ್ಲಿ ಸಾಕಷ್ಟು ಬ್ಯಾಂಕ್ ಗಳಿವೆ. ಈ ಎಲ್ಲಾ ಬ್ಯಾಂಕ್ ಗಳಲ್ಲೂ ಕ್ಲೇಮ್ ಮಾಡದೆ ಠೇವಣಿ ರೂಪದಲ್ಲಿ ಹಾಗೆಯೇ ಉಳಿದು ಹೋಗಿರುವ ಹಣದ ಮೊತ್ತವನ್ನು ತಯಾರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದ ಕೆಲಸಗಳು ಕೂಡ ಈಗಾಗಲೇ ನಡೆಯುತ್ತಿದೆ. ಈ ಕೆಲಸಕ್ಕೆ ಆರ್.ಬಿ.ಐ ಒಂದು ದೊಡ್ಡ ಪ್ಲಾನ್ ಮಾಡಿಕೊಂಡಿದೆ, ಎಲ್ಲಾ ಜಿಲ್ಲೆಗಳಲ್ಲಿರುವ ಪ್ರತಿಯೊಂದು ಬ್ಯಾಂಕ್ ನಲ್ಲೂ, ಠೇವಣಿ ಕ್ಲೇಮ್ ಮಾಡದೆ ಇರುವ ಹಣದ ಮೊತ್ತವನ್ನು 100 ದಿನಗಳ ಒಳಗೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದೆ.

RBI ತಂದಿರುವ ಈ ಯೋಜನೆಗೆ ‘100 ದಿನ್ 100 ಪೇ’ ಎಂದು ಹೆಸರು ಇಡಲಾಗಿದೆ. ಇದರ ಅರ್ಥ 100 ದಿನ 100 ಪಾವತಿ ಎಂದು. ಇದರ ಮೂಲಕ, ಠೇವಣಿ ಕ್ಲೇಮ್ ಮಾಡದ ಹಣದ ಮಾಲೀಕರನ್ನು ಗುರುತಿಸಿ, ಅವರಿಗೆ ಹಣವನ್ನು ತಲುಪಿಸುವುದು ಈ ಯೋಜನೆಯ ಉದ್ದೇಶ ಆಗಿದೆ. ಈ ರೀತಿಯಾಗಿ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿ, ಕ್ಲೇಮ್ ಮಾಡದೆ ಇರುವ ಮೊತ್ತದ ಬಗ್ಗೆ ಇತ್ಯರ್ಥ ಆಗಲಿದೆ. ಈ ರೀತಿ ಮಾಡಿದರೆ ಕ್ಲೇಮ್ ಮಾಡದ ಠೇವಣಿ ಹಣ ಪ್ರಮಾಣ ಸಹ ಕಡಿಮೆ ಆಗುತ್ತದೆ. ಇದನ್ನು ಓದಿ..Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??

ಯಾವ ಬ್ಯಾಂಕ್ ಅಕೌಂಟ್ ಗಳಲ್ಲಿ 10 ವರ್ಷಗಳಿಂದ ಯಾವುದೇ ವಹಿವಾಟು ನಡೆದಿಲ್ಲವೋ ಅಂಥ ಖಾತೆಗಳನ್ನು ಕ್ಲೇಮ್ ಮಾಡದೆ ಇರುವ ಖಾತೆಗಳು ಎಂದು ಪರಿಗಣಿಸುತ್ತಾರೆ, ಈ ಅಕೌಂಟ್ ಗಳಲ್ಲಿರುವ ಹಣವನ್ನು ಕ್ಲೇಮ್ ಮಾಡದ ಹಣ ಎಂದು ಕರೆಯುತ್ತಾರೆ. ಈ ರೀತಿಯ ಸಾರ್ವಜನಿಕವಾಗಿ ಇರುವ ಬ್ಯಾಂಕ್ ಗಳು ಈಗಾಗಲೇ ಸುಮಾರು ₹35,000 ಕೋಟಿ ರೂಪಾಯಿಗಳನ್ನು RBIಗೆ ಈಗಾಗಲೇ ಹಸ್ತಾಂತರಿಸಿದೆ. ಪಿ.ಎಸ್.ಯು ಗಳ ಮೂಲಕ ಇಷ್ಟು ದೊಡ್ಡ ಮೊತ್ತದ ಹಣ ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ವರ್ಗಾವಣೆ ಆಗಿದೆ.

ಹೀಗೆ ಕ್ಲೇಮ್ ಮಾಡದೆ ಇರುವ ಹಣದ ಮೇಲೆ ಆರ್.ಬಿ.ಐ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಹಣವನ್ನು ಕಾನೂನಿನ ಅರ್ಹತೆಗಳಿಗೆ ಕೊಡಲಾಗುತ್ತಿದೆ. ಈ ಜಾಗೃತಿ ಶಿಬಿರಕ್ಕಿಂತ ಮೊದಲು, ಈ ಹಣವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ (DEAF) ಗೆ ಠೇವಣಿ ಮಾಡಲಾಗುತ್ತದೆ. ಹಣಕಾಸು ಸಚಿವರು ನೀಡುವ ಆದೇಶ ಮತ್ತು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಈ ಹಣದ ವಿಚಾರ ಇತ್ಯರ್ಥ ಆಗುತ್ತದೆ. ಇದನ್ನು ಓದಿ..2000 Notes: ನಿಮ್ಮ ಬಳಿ ಅಪ್ಪಿ ತಪ್ಪಿ 2000 ಸಾವಿರ ನೋಟು ಉಳಿದುಕೊಂಡಿದೆಯೇ?? ಹಾಗಿದ್ದರೆ ಕೂಡಲೇ ಈ ಸುದ್ದಿಯನ್ನು ನೋಡಿ. ಏನು ಮಾಡಬೇಕು ಗೊತ್ತೇ?

Comments are closed.