Kannada News:ಕ್ರಿಶ್ಚಿಯನ್ ಮಷಿನರಿಯಲ್ಲಿ ಸನ್ಯಾಸಿಯಾಗಲು ಹುಡುಗಿ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತೇ?? ತಿಳಿದರೆ ಮೈಂಡ್ ಬ್ಲಾಕ್
Kannada News: ಈಗಿನ ಕಾಲದ ಯುವಕ ಯುವತಿಯರು ಎಂಥೆಂಥ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅದರಿಂದ ತಂದೆ ತಾಯಿಗೆ ಏನೆಲ್ಲಾ ತೊಂದರೆ ಆಗುತ್ತದೆ ಎಂದು ಊಹೆ ಮಾಡುವುದಕ್ಕೂ ಆಗುವುದಿಲ್ಲ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಮ್ಮ ರಾಜ್ಯದ ಶಿವಮೊಗ್ಗದಲ್ಲಿ ನಡೆದಿದೆ. ಕ್ರಿಶ್ಚಿಯನ್ ಮಿಶಿನರಿಯಲ್ಲಿ ಸನ್ಯಾಸಿನಿ ಆಗಬೇಕು ಎಂದು ಈ ಹುಡುಗಿ ಏನು ಮಾಡಿದ್ದಾಳೆ ಗೊತ್ತಾ? ತಂದೆಗೆ ಹೇಗೆ ಮಾಡಿದ್ದಾಳೆ ಎಂದು ತಿಳಿಸುತ್ತೇವೆ ನೋಡಿ..
ಈ ಹುಡುಗಿಯ ಹೆಸರು ರಂಜಿತಾ, ಈಕೆಯ ವಯಸ್ಸು 20 ವರ್ಷ, ಶಿವಮೊಗ್ಗದಲ್ಲಿ ಪ್ರೈವೇಟ್ ನರ್ಸಿಂಗ್ ಕಾಲೇಜಿನಲ್ಲಿ ಈ ಹುಡುಗಿ ಫಿಸಿಯೋಥೆರಪಿ ಓದುತ್ತಿದ್ದಳು. ಕ್ರಿಶ್ಚಿಯನ್ ಮಿಷಿನರಿಯಲ್ಲಿ ಹೋಗಿ ಕೆಲಸ ಮಾಡಬೇಕು ಎಂದು ಈಕೆಗೆ ಆಸೆ ಶುರುವಾಗಿದೆ. ಆದರೆ ತಂದೆ ಇದಕ್ಕೆ ಒಪ್ಪುವುದಿಲ್ಲ ಹಣ ಕೊಡುವುದಿಲ್ಲ ಎಂದು, ಒಂದು ಮಾಸ್ಟರ್ ಪ್ಲಾನ್ ಅನ್ನೇ ಮಾಡಿದ್ದಾಳೆ. ಅದೇನೆಂದರೆ, ತಾನು ಕಿಡ್ನ್ಯಾಪ್ ಆಗಿರುವುದಾಗಿ.. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.
ತನ್ನ ತಂದೆಗೆ ತನ್ನ ಮೊಬೈಲ್ ಇಂದಲೇ ಮೆಸೇಜ್ ಮಾಡಿದ್ದಾಳೆ. ತಾನು ಕಿಡ್ನ್ಯಾಪ್ ಆಗಿದ್ದು, 20 ಲಕ್ಷ ಹಣ ಕೊಡಬೇಕು ಎಂದು ಆಕೆಯ ತಂದೆಗೆ ಮೆಸೇಜ್ ಮಾಡಿದ್ದಾಳೆ. ತಕ್ಷಣವೇ ಆಕೆಯ ತಂದೆಗೆ ಗಾಬರಿಯಾಗಿ ಅವರು ಶಿವಮೊಗ್ಗದ ಜಯನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೊಬೈಲ್ ನಂಬರ್ ಅನ್ನು ಟ್ರೇಸ್ ಮಾಡಿ ಪತ್ತೆ ಹಚ್ಚಿದಾಗ, ಇದು ರಂಜಿತ ಮಾಡಿರುವ ಕೆಲಸ ಎಂದು ಗೊತ್ತಾಗಿದೆ.
ಆಕೆ ಹುಬ್ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡಿದ್ದಳು, ಪೊಲೀಸರು ಆಕೆಯನ್ನು ಹುಡುಕಿ, ವಿಚಾರಿಸಿದಾಗ, ತಾನು ಕ್ರಿಶ್ಚಿಯನ್ ಮಿಷಿನರಿಯಲ್ಲಿ ಕೆಲಸ ಮಾಡಿ, ಕಷ್ಟದಲ್ಲಿ ಇರುವವರ ಸೇವೆ ಮಾಡಬೇಕು ಎಂದು ಆಸೆ ಇತ್ತು, ಅದರಿಂದಲೇ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾಳೆ. ಒಟ್ಟಿನಲ್ಲಿ ಈ ಹುಡುಗಿ ಇಂಥ ಕೆಲಸ ಮಾಡಿರುವ ಘಟನೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಓದಿ..Traffic Police: ಟ್ರಾಫಿಕ್ ಪೊಲೀಸ್ ಫೋಟೋ ತೆಗೆದು ನೋಟೀಸ್ ಕಳುಹಿಸಿದ- ಆ ಒಂದು ಫೋಟೋ ಇಂದ ಸಂಸಾರ ಉಡೀಸ್. ಫೈನ್ ಹಾಕಲು ಹೋದ ಪೊಲೀಸ್, ಮಾಡಿದ ಎಡವಟ್ಟೇನು ಗೊತ್ತೇ?
Comments are closed.