Kannada Actress: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿರುವ ಈ ಸುಂದರಿ ಯಾರು ಗೊತ್ತೇ?? ನಿಜಕ್ಕೂ ನಿಜ ಜೀವನದಲ್ಲಿ ಮಾಡುವ ಕೆಲಸ ಏನು ಗೊತ್ತೇ??
Kannada Actress: ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮಿ ಬಾರಮ್ಮ ಧಾರವಾಹಿ ಎಲ್ಲರ ಮೆಚ್ಚಿನ ಧಾರವಾಹಿಗಳಲ್ಲಿ ಒಂದು. ಈ ಧಾರವಾಹಿ ಶುರುವಾದ ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿದೆ. ವೈಷ್ಣವ್ ಮತ್ತು ಲಕ್ಷ್ಮಿಯ ಪ್ರೀತಿಯನ್ನು ಜನರು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ವೈಷ್ಣವ್ ತಂಗಿ ವಿಧಿ ಪಾತ್ರ ಎಲ್ಲರಿಗೂ ಗೊತ್ತಿದೆ. ಈ ಪಾತ್ರದಲ್ಲಿ ನಟಿಸಿರುವವರು ನಿಜಕ್ಕೂ ಯಾರು ಗೊತ್ತಾ?
ವೈಷ್ಣವ್ ತಂಗಿ ವಿಧಿ ಶ್ರೀಮಂತ ಮನೆಯಲ್ಲಿ ಮುದ್ದಾಗಿ ಬೆಳೆದ ದುರಹಂಕಾರಿ ಹುಡುಗಿ. ಅಣ್ಣನ ಹೆಂಡತಿ ಲಕ್ಷ್ಮಿ ಬಡವರ ಮನೆ ಹುಡುಗಿ, ಅವಳಿವೆ ಏನು ಗೊತ್ತಾಗೋದಿಲ್ಲ ಎಂದು ವಿಧಿಗೆ ಅತ್ತಿಗೆಯನ್ನು ಕಂಡರೆ ಆಗೋದಿಲ್ಲ. ಈ ವಿಧಿ ಪತ್ರವನ್ನು ನೋಡಿದ ಜನರಿಗೆ ಆಕೆಯ ಮೇಲೆ ಕೋಪ ಬರುವುದಂತೂ ಖಂಡಿತ. ಇಂಥ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿ ನಿಜಕ್ಕೂ ಯಾರು ಗೊತ್ತಾ? ಇದನ್ನು ಓದಿ..Ram Charan: ರಾಮ್ ಚರಣ್ ರವರ ಪತ್ನಿ ಉಪಾಸನಾ ರವರ ಶ್ರೀಮಂತ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತೇ?? ಕೊನೆ ಕ್ಷಣದಲಿ ಪಾಪ ಏನಾಗಿದೆ ಗೊತ್ತೇ??
ವಿಧಿ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ಹೆಸರು ಡಾ.ಲಾವಣ್ಯ ಹಿರೇಮಠ್. ಇವರು ಮೂಲತಃ ರಾಯಚೂರಿನವರು. ಇವರು ವೃತ್ತಿಯಲ್ಲಿ ಡೆಂಟಿಸ್ಟ್ ಆಗಿದ್ದಾರೆ. ಲಾವಣ್ಯ ಅವರು ಮೊದಲಿಗೆ ಬಾಗಲಕೋಟೆಯಲ್ಲಿ ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಬೆಂಗಳೂರಿನ ಕೋರಮಂಗಲದಲ್ಲಿ ಡೆಂಟಿಸ್ಟ್ ಆಗಿ ಕೆಲಸ ಮಾಡುವುದರ ಜೊತೆಗೆ ನಟನೆಯಲ್ಲಿ ಕೂಡ ಕೆರಿಯರ್ ಬಿಲ್ಡ್ ಮಾಡುತ್ತಿದ್ದಾರೆ.
ಲಾವಣ್ಯ ಅವರಿಗೆ ಲಕ್ಷ್ಮಿ ಬಾರಮ್ಮ ಮೊದಲ ಧಾರವಾಹಿ ಅಲ್ಲ, ಈ ಮೊದಲೇ ನನ್ನರಸಿ ರಾಧೆ ಧಾರವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಹಾಗೆಯೇ ಮಜಾ ಟಾಕೀಸ್ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಮಾತ್ರವಲ್ಲದೆ, ಬೆಳ್ಳಿತೆರೆಗು ಕಾಲಿಟ್ಟಿರುವ ಲಾವಣ್ಯ, ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ನಟಿಸಿದ್ದು, ಚಿತ್ರರಂಗದಿಂದ ಒಳ್ಳೆಯ ಆಫರ್ ಗಳು ಬಂದರೆ ನಟಿಸುವ ಆಸಕ್ತಿ ಇಟ್ಟುಕೊಂಡಿದ್ದಾರೆ ಲಾವಣ್ಯ. ಇದನ್ನು ಓದಿ..Adah Sharma: ಕೇರಳ ಸ್ಟೋರಿ ನಟಿ ಆಧಾ ಶರ್ಮ ರವರಿಗೆ ರಸ್ತೆ ಅಪಘಾತ- ನಿಜಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?
Comments are closed.