Personal Loans: ಅತಿ ಕಡಿಮೆ ಬಡ್ಡಿ ದರದಲ್ಲಿ ಅತಿ ಕಡಿಮೆ ಸಮಯದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತೇ? ಕಷ್ಟ ಎಂದರೆ ಇಲ್ಲಿ ತೆಗೆದುಕೊಳ್ಳಿ.
Personal Loans: ಈಗ ನೀವು ಬ್ಯಾಂಕ್ ಗಳ ಮೂಲಕ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಪರ್ಸನಲ್ ಲೋನ್ ಪಡೆಯಬಹುದು. ಇದನ್ನು ನೀವು ಯಾವುದೇ ಕಾರಣಕ್ಕೆ ಬೇಕಾದರೂ ಬಳಸಬಹುದು, ಮನೆ ಕಟ್ಟಲು, ಪ್ರಯಾಣ ಮಾಡಲು, ವಾಹನ ಖರೀದಿ ಈ ಥರದ ನಾನಾ ಕಾರಣಗಳಿಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು. ಈ ಲೋನ್ ಗೆ ಬಡ್ಡಿ ಹೆಚ್ಚಿರುತ್ತದೆ. ಆದರೆ ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿಯಲ್ಲಿ ಈ ಲೋನ್ ಕೊಡುತ್ತದೆ. ಅವು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಬ್ಯಾಂಕ್ ಆಫ್ ಮಹಾರಾಷ್ಟ್ರ :- ಇಲ್ಲಿ ನೀವು 20 ಲಕ್ಷದ ವರೆಗು ಪರ್ಸನಲ್ ಲೋನ್ ಪಡೆಯಬಹುದು. ಬಡ್ಡಿ 10% ಇಂದ ಶುರುವಾಗುತ್ತದೆ. ಸಾಲ ತೀರಿಸುವ ಅವಧಿ 84 ತಿಂಗಳುಗಳು.
ಬ್ಯಾಂಕ್ ಆಫ್ ಇಂಡಿಯಾ :- ಈ ಬ್ಯಾಂಕ್ ನಲ್ಲಿ ನೀವು 20 ಲಕ್ಷದ ವರೆಗು ಪರ್ಸನಲ್ ಲೋನ್ ಪಡೆಯಬಹುದು. ಬಡ್ಡಿ 10.25% ಇಂದ ಶುರುವಾಗುತ್ತದೆ. ಸಾಲ ತೀರಿಸುವ ಅವಧಿ 84 ತಿಂಗಳುಗಳು.
ಇಂಡಸ್ ಇಂಡ್ ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ 30 ಸಾವಿರದಿಂದ 50 ಲಕ್ಷದವರೆಗೂ ಪರ್ಸನಲ್ ಲೋನ್ ಪಡೆಯಬಹುದು. ಇದಕ್ಕೆ ಬಡ್ಡಿದರ 10% ಇಂದ 27% ವರೆಗು ಇರುತ್ತದೆ. ಸಾಲ ತೀರಿಸುವ ಸಮಯ 1 ರಿಂದ 6 ವರ್ಷಗಳು. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??
ಪಂಜಾಬ್ ನ್ಯಾಷನಲ್ ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ ನಿಮಗೆ 10.49% ಇಂದ ಬಡ್ಡಿದರ ಶುರುವಾಗುತ್ತದೆ. ಸಾಲ ತೀರಿಸಲು 60 ತಿಂಗಳುಗಳ ಕಾಲ ಪಾವತಿ ಮಾಡಬೇಕಾಗುತ್ತದೆ.
*ಆಕ್ಸಿಸ್ ಬ್ಯಾಂಕ್ :- ಇಲ್ಲಿ ಸಹ ಪರ್ಸನಲ್ ಲೋನ್ ಮೇಲೆ ಬಡ್ಡಿದರ 10.49% ಇಂದ ಶುರುವಾಗುತ್ತದೆ. 60 ತಿಂಗಳುಗಳಲ್ಲಿ ಹಣಪಾವತಿ ಮಾಡಬೇಕು.
IDFC ಫಸ್ಟ್ ಬ್ಯಾಂಕ್ :- ಇಲ್ಲಿ ಕೂಡ ಬಡ್ಡಿದರ ಶುರುವಾಗುವುದು 10.49% ಇಂದ, ಇಲ್ಲಿ ನಿಮಗೆ ಸ್ಪಾರ್ಧಾತ್ಮಕ ಬಡ್ಡಿ ಸೀರೀಸ್ ಸಿಗುತ್ತದೆ. 6 ತಿಂಗಳಿಂದ 5 ವರ್ಷಗಳಲ್ಲಿ ಸಾಲ ತೀರಿಸಬೇಕು. 1 ಕೋಟಿವರೆಗೂ ಸಾಲ ಪಡೆಯಬಹುದು.
HDFC ಬ್ಯಾಂಕ್ :- ಇಲ್ಲಿ ನೀವು 40ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. ಬಡ್ಡಿದರ 10.5% ಇಂದ 24%ವರೆಗು ಇರುತ್ತದೆ. ಸಾಲ ಪಾವತಿಸಲು 5 ವರ್ಷಗಳ ಸಮಯ ಕೊಡಲಾಗುತ್ತದೆ..
ಕರೂರ್ ವೈಶ್ಯ ಬ್ಯಾಂಕ್ :- ಇಲ್ಲಿ ನಿಮಗೆ 10 ಲಕ್ಷದವರೆಗೂ ಪರ್ಸನಲ್ ಲೋನ್ ಸಿಗುತ್ತದೆ. ಬಡ್ಡಿದರ 10.5 ಇಂದ 13.5%ವರೆಗು ಇರುತ್ತದೆ.
IDBI ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ 50 ಲಕ್ಷದವರೆಗು ಪರ್ಸನಲ್ ಲೋನ್ ಸಿಗುತ್ತದೆ. 10.5% ಇಂದ 15.5% ಬಡ್ಡಿದರ ಬೀಳುತ್ತದೆ. ಬಡ್ಡಿ ಪಾವತಿಸಲು 60 ತಿಂಗಳ ಸಮಯ ಸಿಗುತ್ತದೆ.
ICICI ಬ್ಯಾಂಕ್ :- ಇಲ್ಲಿ ನಿಮಗೆ 50 ಲಕ್ಷದವರೆಗೂ ಪರ್ಸನಲ್ ಲೋನ್ ಸಿಗುತ್ತದೆ. ಬಡ್ಡಿದರ 10.75% ಇಂದ 19%ವರೆಗು ಇರುತ್ತದೆ. 6 ವರ್ಷಗಳ ಸಮಯವನ್ನು ಸಾಲಪಾವತಿಗೆ ಕೊಡಲಾಗುತ್ತದೆ. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.
Comments are closed.