Naresh Pavitra: ಮದುವೆಯಾಗಿಲ್ಲ, ಆದರೆ ಸುಪ್ರೀಂ ಕೋರ್ಟ್ ಹೇಳಿದಂತೆ ಬದುಕುತ್ತಿದ್ದೇವೆ, ಕಾನೂನು ಬಳಸಿಕೊಂಡು ನರೇಶ್ – ಪವಿತ್ರ ಬಾಳುತ್ತಿರುವುದು ಹೇಗೆ ಗೊತ್ತೇ??
Naresh Pavitra: ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ಮತ್ತು ಸಂಬಂಧದ ವಿಷಯ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಇವರಿಬ್ಬರು ಲಿವಿನ್ ಟುಗೆದರ್ ರಿಲೇಶನ್ಷಿಪ್ ನಲ್ಲಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಜೋಡಿ ಈಗ ಮಲ್ಲಿ ಪೆಲ್ಲಿ ಸಿನಿಮಾ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಸಿನಿಮಾ ಕುರಿತಂತೆ ಈ ಜೋಡಿ ಬೆಂಗಳೂರಿಗೆ ಬಂದು ಪ್ರೆಸ್ ಮೀಟ್ ನಡೆಸಿದ್ದಾರೆ..

ಅಲ್ಲಿ ನರೇಶ್ ಅವರಿಗೆ ಪತ್ರಕರ್ತರೊಬ್ಬರು, ಈಗಾಗಲೇ 3 ಮದುವೆ ಆಗಿದ್ದೀರಾ, ಪವಿತ್ರ ಅವರೊಡನೆ 4ನೇ ಮದುವೆ ಆಗ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನರೇಶ್ ಅವರು, “ರಾಜರಿಗೆ ಮತ್ತು ದೇವರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರು ಇದ್ದರು. ಆದರೆ ಈಗ ನಾವು ಮದುವೆಯನ್ನು ಗೌರವಿಸುತ್ತೇವೆ, ಲಿವಿನ್ ಟುಗೆದರ್ ಒಪ್ಪಿಕೊಳ್ಳುತ್ತೇನೆ, ಕಾನೂನನ್ನು ನಮ್ಮ ಬದುಕಿಗೆ ಫಿಕ್ಸ್ ಮಾಡಿಕೊಳ್ಳೋಕೆ ಆಗಲ್ಲ. ಈಗ ಬಹುಪತ್ನಿತ್ವ ಒಪ್ಪಿಕೊಳ್ಳಲು ಆಗುವುದಿಲ್ಲ. ಆದರೆ ಜನರಿಗೆ ತಮ್ಮಿಷ್ಟದ ಹಾಗೆ ಬದುಕುವ ಸ್ವಾತಂತ್ರ್ಯ ಇದೆ. ಇದನ್ನು ಓದಿ..Kannada News: ದಿಡೀರ್ ಎಂದು ಸೌರವ್ ಗಂಗೂಲಿಗೆ ಬಿಗಿ ಭದ್ರತೆ- ‘Z’ ಕೆಟಗರಿ ಅಲ್ಲಿ ಭದ್ರತೆ ನೀಡಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗಿದೆ ಗೊತ್ತೇ?
ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ತೀರ್ಪು ಕೊಟ್ಟಿದೆ. ನಾನು ಈಗ ಸಿಂಗಲ್ ಆಗಿದ್ದೇನೆ ಅಂತ ಆಯ್ಕೆ ಅಂದುಕೊಳ್ತೀರಾ. ನಾವಿಬ್ಬರು ಸಹಜೀವನ ನಡೆಸುತ್ತಿದ್ದೇವೆ, ಬಹಳ ಖುಷಿಯಾಗಿದ್ದೇನೆ ಎಂದು ಪವಿತ್ರಾ ಲೋಕೇಶ್ ಅವರ ಕೈಯನ್ನು ಹಿಡಿದು ಹೇಳಿದ್ದಾರೆ ನಟ ನರೇಶ್. ಈ ಸಿನಿಮಾದಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ತೋರಿಸಿದ್ದೇವೆ. ಸುಮಾರು 50% ದಂಪತಿಗಳು ಸಮಾಜಕ್ಕೆ ಬಲವಂತವಾಗಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಬಹಳಷ್ಟು ಜನರು ಕಿರುಕುಳ ನಡುವೆ ಕೂಡ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ ಜನರು ಜೀವನ ನಡೆಸುವ ತೀರ್ಪು ನೀಡಿದೆ..
ಇರೋದು ಒಂದು ಜೀವನ ಅದನ್ನು ಖುಷಿಯಾಗಿ ಕಳೆಯಬೇಕು. ನಿಮ್ಮ ಜೊತೆಗೆ ಇರುವವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ನಮ್ಮನ್ನು ಕೆಲವರು ಮದುವೆ ಆಗಿದ್ದೀರಾ ಅಂತ ಪ್ರಶ್ನೆ ಮಾಡಿದ್ರು.. ಆಗ ನಾನು ಹೇಳಿದೆ, ಮದುವೆ ಅಂದ್ರೆ ಏನು ? ತಾಳಿ ಕಟ್ಟುವುದು, ಉಂಗುರ ಹಾಕೋದು ಮದುವೇನಾ ? ನಮ್ಮ ಸಂಸ್ಕೃತಿಯ ಒಂದು ಸಂಕೇತ ಇದು..ಅಷ್ಟೇ. ಎರಡು ಹೃದಯಗಳು ಒಂದಾಗುವುದು ಮದುವೆ. ನಮ್ಮ ಹೃದಯಕ್ಕೆ ಮದುವೆ ಆಗಿದೆ. ನಾವು ಸಂತೋಷವಾಗಿದ್ದೇವೆ. ಮದುವೆ ಎನ್ನುವ ವ್ಯವಸ್ಥೆ ಮೇಲೆ ನಮಗೆ ಗೌರವ ಇದೆ. ಸಿನಿಮಾದಲ್ಲಿ ಇದನ್ನೇ ಹೇಳಿದ್ದೇವೆ. ಲಿವಿಂಗ್ ಟುಗೆದರ್ ಮದುವೆಗೆ ಸಮಾನವಾದದ್ದು..” ಎಂದು ಹೇಳಿದ್ದಾರೆ ನಟ ನರೇಶ್. ಇದನ್ನು ಓದಿ..Adah Sharma: ಕೇರಳ ಸ್ಟೋರಿ ನಟಿ ಆಧಾ ಶರ್ಮ ರವರಿಗೆ ರಸ್ತೆ ಅಪಘಾತ- ನಿಜಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?