Priyank Kharge: ತಗೋಳಪ್ಪಾ- ಇದು ಅಧಿಕಾರಕ್ಕೆ ಏರುವ ಮುನ್ನವೇ ಪ್ರಿಯಾಂಕಾ ಖರ್ಗೆ ಮಾಡಿದ್ದೇನು ಗೊತ್ತೇ?? ಈಗಲೇ ಇಂಗಾದರೆ ಮುಂದೆ ಇನ್ನೆಗೆ??
Priyank Kharge: ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇದೀಗ ಕಲಬುರಗಿ ಪೊಲೀಸ್ ಕಮಿಷನರ್ ಹಾಗೂ ಎಸ್ಪಿ ಗಳಿಗೆ ಟಾಸ್ಕ್ ಒಂದನ್ನು ನೀಡಿದ್ದು, ಖಾತೆ ಹಂಚಿಕೆ ಆಗುವುದಕ್ಕಿಂತ ಮೊದಲೇ ಕೆಲಸ ಶುರು ಮಾಡಿಕೊಂಡಿದ್ದಾರೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ನಿಲ್ಲಿಸಬೇಕು ಎಂದು ಈ ಟಾಸ್ಕ್ ನೀಡಲಾಗಿದೆ.

ಅಕ್ರಮವಾಗಿ ನಡೆಯುವ ಜೂಜು, ಹಾಗೂ ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಬೇಕು ಎಂದು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವಾದ ಮರಳು ದಂಧೆ ಹಾಗೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ನಡೆಯುವ, ಡ್ರಗ್, ಗಾಂಜಾ, ಅಫೀಮ್ ಅಂಥ ದಂಧೆಗಳನ್ನು ನಿಲ್ಲಿಸಬೇಕು ಎಂದು ಆದೇಶ ನೀಡಲಾಗಿದೆ. ಇದನ್ನು ಓದಿ..Kannada News: ಕನ್ನಡಿಗ ಪ್ರವೀಣ್ ಸೂದ್ CBI ನಿದೇಶಕ- ಆಯ್ಕೆಯಾದ ತಕ್ಷಣ ಡಿಕೆಶಿ ಫ್ಯಾನ್ಸ್ ನಿರಾಸೆ ಗೊಂಡಿರುವುದು ಯಾಕೆ ಗೊತ್ತೇ?? ಏನೆಲ್ಲಾ ನಡೆದಿದೆ ಗೊತ್ತೇ?
ಹಾಗೆಯೇ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಪರಾಜಿತ ಅಭ್ಯರ್ಥಿ ರೌಡಿಶೀಟರ್ ಮಣಿಕಂಠ ರಾಥೋಡ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಆದೇಶ ನೀಡಲಾಗಿದ್ದು, ದ್ವೇಷಭಾಷಣ ಮಾಡುವ ವ್ಯಕ್ತಿಗಳನ್ನು ನಿಯಂತ್ರಣ ಮಾಡುವಂತೆ ಆದೇಶಗಳನ್ನು ನೀಡಿದ್ದಾರೆ. ಹಾಗೆಯೇ ಜನರಿಗೆ ಪೊಲೀಸರು ಅಗತ್ಯವಿಲ್ಲದೆ ತೊಂದರೆ ಕೊಡುವುದನ್ನು ಕೂಡ ನಿಲ್ಲಿಸಬೇಕು ಎಂದಿದ್ದಾರೆ.
ಪೊಲೀಸ್ ಕಮಿಷನರ್ ಆರ್.ಚೇತನ್, ಎಸ್ಪಿ ಇಷಾ ಪಂತ್ ಅವರಿಗೆ ಪ್ರಿಯಾಂಕ್ ಖರ್ಗೆ ಅವರೇ ಕರೆ ಮಾಡಿ, ಸೂಚಿಸಿ ಕ್ರಮಗಳನ್ನು ಖುದ್ದಾಗಿ ಅವರೇ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಕೂಡ ಈ ವಿಷಯ ಹರಿದಾಡುತ್ತಿದೆ. ಈ ಎಲ್ಲಾ ನಿರ್ಧಾರಗಳು ಪ್ರಿಯಾಂಕ್ ಖರ್ಗೆ ಅವರು ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ. ಖಾತೆ ಹಂಚಿಕೆ ಆಗುವುದಕ್ಕಿಂತ ಮೊದಲೇ ಪೊಲೀಸರನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಇದನ್ನು ಓದಿ..Vijayendra: ಮತ್ತೆ ಶುರು ಆಯಿತು ಸೋಮಣ್ಣ vs ವಿಜಯೇಂದ್ರ- ಬಹಿರಂಗವಾಗಿಯೇ ಸೋಮಣ್ಣ ಹೇಳಿದ್ದೇನು ಗೊತ್ತೇ?? ಬಿಜೆಪಿ ಪಕ್ಷಕ್ಕೆ ಮತ್ತೊಂದು ಶಾಕ್.