Sarath Babu: ಶರತ್ ಬಾಬು ರವರು ಮದುವೆಯಾಗಿದ್ದು ಒಮ್ಮೆ ಅಲ್ಲ, ಮತ್ತೆಷ್ಟು ಬಾರಿ ಗೊತ್ತೇ?? ಆದರೂ ಕೊನೆಯಲ್ಲಿ ಬದುಕಿದ್ದು ಹೇಗೆ ಗೊತ್ತೇ??
Sarath Babu: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಶರತ್ ಬಾಬು (Sarath Babu) ಅವರು ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ್ದಾರೆ..ಶರತ್ ಬಾಬು ಅವರು ಕನ್ನಡದ ಆಲ್ ಟೈಮ್ ಹಿಟ್ ಅಮೃತವರ್ಷಿಣಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್ (Hyderabad) ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ವಿಧಿವಶರಾಗಿದ್ದಾರೆ. ಖ್ಯಾತ ನಟ ಆಗಿದ್ದ ಇವರು ಕೊನೆ ಸಮಯದವರೆಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದರು.
ಶರತ್ ಬಾಬು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, 1974ರಲ್ಲಿ ಇವರು ಖ್ಯಾತ ನಟಿ ರಮಾ ಪ್ರಭಾ (Rama Prabhu) ಅವರ ಜೊತೆಯಲ್ಲಿ ಮದುವೆಯಾದರು, ಇವರಿಬ್ಬರು ಬೇರೆ ಆಗುವುದಕ್ಕಿಂತ ಮೊದಲು 10 ವರ್ಷಕ್ಕಿಂತ ಹೆಚ್ಚಿನ ಸಮಯ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದರು. ಇವರಿಬ್ಬರು ಬೇರೆ ಆಗಿದ್ದಾದರು ಯಾಕೆ ಎಂದು ಇನ್ನು ಕಾರಣ ತಿಳಿದುಬಂದಿಲ್ಲ. ಆದರೆ ಇಬ್ಬರು ಕೂಡ ಒಬ್ಬರ ಮೇಲೆ ಒಬ್ಬರು ಆರೋಪ ಗಳನ್ನು ಮಾಡುತ್ತಿದ್ದರು. ಒಮ್ಮೆ ರಮಾ ಪ್ರಭಾ ಅವರು ಶರತ್ ಬಾಬು ಅವರು ತಮ್ಮೊಡನೆ ಮದುವೆ ಆಗಿದ್ದು ಬೇರೆ ಉದ್ದೇಶದಿಂದ ಎಂದು ಹೇಳಿಕೊಂಡಿದ್ದರು.. ಇದನ್ನು ಓದಿ..Naresh Pavithra: ಮತ್ತೆ ಮದುವೆಯಾಗಿಲ್ಲ, ಆದರೆ ಒಂದೇ ಮನೆಯಲ್ಲಿ ಒಟ್ಟಿಗೆ ಬಾಳುತ್ತೇವೆ- ಅಧಿಕೃತವಾಗಿ ಒಪ್ಪಿಕೊಂಡು ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೆ??
ರಮಾ ಪ್ರಭಾ ಅವರು ನಟನೆ ಶುರು ಮಾಡಿದ್ದು ಶರತ್ ಬಾಬು ಅವರು ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷಗಳ ನಂತರ, ಕಾಮನ್ ಫ್ರೆಂಡ್ಸ್ ಮೂಲಕ ಇಬ್ಬರ ಭೇಟಿಯಾಗಿ, ಇಬ್ಬರು ಪ್ರೀತಿಸಿದರು. ನಂತರ ಲಿವಿನ್ ರಿಲೇಶನ್ಷಿಪ್ ಶುರು ಮಾಡಿದರು. ಬಳಿಕ 1974ರಲ್ಲಿ ಮದುವೆಯಾಗಿ ಸುಮಾರು 10 ರಿಂದ 15 ವರ್ಷಗಳ ಕಾಲ ಜೊತೆಯಾಗಿಯೇ ಇದ್ದರು, ಬಳಿಕ ವಿಚ್ಛೇದನ ಪಡೆದರು. ಬಳಿಕ ಶರತ್ ಬಾಬು ಅವರು 1990ರಲ್ಲಿ ಸ್ನೇಹ ನಂಬಿಯಾರ್ (Sneha Nambiar) ಅವರ ಜೊತೆಗೆ ಮದುವೆಯಾದರು.
ಇವರಿಬ್ಬರು ಸುಮಾರು 21 ವರ್ಷಗಳ ಕಾಲ ಜೊತೆಯಾಗಿದ್ದರು. 2011ರಲ್ಲಿ ಇಬ್ಬರು ಬೇರೆಯಾದರು. ಆದರೆ ಇದುವರೆಗೂ ಶರತ್ ಬಾಬು ಅವರು ಮತ್ತು ರಮಾ ಅವರು ಬೇರೆಯಾಗಿದ್ದು ಯಾಕೆ ಎಂದು ತಿಳಿದುಬಂದಿಲ್ಲ..ಒಂದು ಸಂದರ್ಶನದಲ್ಲಿ ರಮಾ ಅವರು ಶರತ್ ಬಾಬು ತಮ್ಮನ್ನು ಮದುವೆಯಾಗಿದ್ದು ಆಸ್ತಿಗೋಸ್ಕರ ಎಂದು ಹೇಳಿಕೊಂಡಿದ್ದರು. ಅದಕ್ಕೆ ಶರತ್ ಬಾಬು ಅವರು ಉತ್ತರ ನೀಡಿ, ನಾನು ಜನಿಸಿದ್ದು ಬೆಳ್ಳಿ ಸ್ಪೂನ್ ಜೊತೆಗೆ, ಅವರ ಆಸ್ತಿಗಾಗಿ ಲೆಂಜ್ ಮದುವೆಯಾಗಿರಲಿಲ್ಲ.. ಎಂದು ಹೇಳಿದ್ದರು. ಒಟ್ಟಿನಲ್ಲಿ ಮದುವೆ ವಿಷಯಕ್ಕೆ ಈ ಕಾಂಟ್ರವರ್ಸಿ ಗಳಿಂದ ಶರತ್ ಬಾಬು ಅವರು ಒಂಟಿಯಾಗಿಯೇ ಉಳಿದಿದ್ದರು. ಇದನ್ನು ಓದಿ..Tamannaah: ವಯಸ್ಸು ಹೆಚ್ಚಾಗುತ್ತಿದ್ದರೂ, ತಮನ್ನಾ ರವರಿಗೆ ಇಷ್ಟೊಂದು ಡಿಮ್ಯಾಂಡ್ ಇದೆಯೇ? ಇದೇಗೆ ಸಾಧ್ಯ?? ಶಾಕ್ ನಲ್ಲಿ ನೆಟ್ಟಿಗರು. ಏನಾಗಿದೆ ಗೊತ್ತೇ?
Comments are closed.