Dk Shivakumar: ಜನರ ಪರವಾಗಿ ಧ್ವನಿ ಎತ್ತಿದ ಪ್ರತಾಪ್ ಸಿಂಹ ಗೆ ವ್ಯಂಗ್ಯವಾಡಿದ ಡಿಕೆಶಿ. ಹೇಳಿದ್ದೇನು ಗೊತ್ತೇ? DCM ಇವೆಲ್ಲ ಬೇಕಿತ್ತಾ ಎಂದ ನೆಟ್ಟಿಗರು.
Dk Shivakumar: ಕಾಂಗ್ರೆಸ್ ಪಕ್ಷ ಚುನಾವಣೆಗಿಂತ ಮೊದಲು ಜನರಿಗೆ ಕೆಲವು ಸೌಲಭ್ಯಗಳನ್ನು ಉಚಿತವಾಗಿ ಕೊಡುವ ಭರವಸೆ ನೀಡಿತ್ತು. ಇದರ ಬಗ್ಗೆ ಬಿಜೆಪಿ ಪಕ್ಷದ ಪ್ರತಾಪ್ ಸಿಂಹ ಅವರು ಮಾತನಾಡಿ, ಒಂದು ವೇಳೆ ಜೂನ್ 1ರಿಂದ ಉಚಿತ ಸೌಲಭ್ಯಗಳನ್ನು ಕೊಡದೆ ಹೋದರೆ, ಹೋರಾಟ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಅವರ ಪ್ರತಿಕ್ರಿಯೆ ಕೇಳಿದ ನೆಟ್ಟಿಗರು ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ.
ಪ್ರತಾಪ್ ಸಿಂಹ ಅವರ ಮಾತಿಗೆ ಉತ್ತರ ಕೊಟ್ಟಿ ಡಿಕೆಶಿ ಅವರು, “ಜೂನ್ 1ರ ವರೆಗು ಪ್ರತಿಭಟನೆ ಮಾಡೋಕೆ ಯಾಕೆ ಕಾಯಬೇಕು, ನಾಳೆನೇ ನಮ್ಮ ಮನೆ ಹತ್ತಿರ ಬಂದು ಮಲಗಲಿ..” ಎಂದು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.. ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ನಂಬಿ ಜನರು ವೋಟ್ ಹಾಕಿದ್ದಾರೆ, ಅವುಗಳಿಗೆ ಶರತ್ತು ವಿಧಿಸದೆ, ಎಲ್ಲರಿಗೂ ಉಚಿತ ಸೇವೆ ನೀಡಬೇಕು. ಜೂನ್ 1ರ ಸಮಯಕ್ಕೆ ಗ್ಯಾರೆಂಟಿಗಳನ್ನು ಈಡೇರಿಸಬೇಕು. ಇಲ್ಲದೆ ಹೋದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.
ಡಿಸಿಎಂ ಡಿಕೆಶಿ ಅವರು ದೆಹಲಿಗೆ ಹೋಗಿ ಅಲ್ಲಿಂದ ವಾಪಸ್ ಬಂದ ನಂತರ ಈ ವಿಷಯದ ಬಗ್ಗೆ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್ ಸಿಂಹ ಜೂನ್ ವರೆಗು ಕಾಯೋದು ಬೇಡ, ನಾಳೆಯಿಂದ ನಮ್ಮ ಮನೆ ಹತ್ತಿರ ಬಂದು ಮಲಗಲಿ ಎಂದು ಹೇಳಿದ್ದಾರೆ. ಡಿಕೆಶಿ ಅವರು ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿದ್ದು, ಒಂದು ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ, ಅದನ್ನು ಮುಗಿಸಿ ಮತ್ತೆ ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ.
ಇನ್ನು ಸಂಪುಟ ವಿಸ್ತರಣೆ ಬಗ್ಗೆ ಕೂಡ ಮಾತನಾಡಿದ ಡಿಕೆಶಿ ಅವರು, ಅದರ ಬಗ್ಗೆ ಇನ್ನೂ ಒಂದು ದಿನದಲ್ಲಿ ನಿಮಗೆಲ್ಲ ಪೂರ್ತಿ ಮಾಹಿತಿ ಕೊಡುತ್ತೇನೆ, ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಾಗಲಿದೆ, ಈಗ ಒಂದು ಖಾಸಗಿ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ.. ಅದನ್ನು ಮುಗಿಸಿಕೊಂಡು ತಕ್ಷಣವೇ ಹೋಗುತ್ತೇನೆ..” ಎಂದು ಹೇಳಿದ್ದಾರೆ. ಇದನ್ನು ಓದಿ..Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.
Comments are closed.