Neer Dose Karnataka
Take a fresh look at your lifestyle.

Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.

Naresh Pavithra: ಟಾಲಿವುಡ್ ನಲ್ಲಿ ಈಗ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕಳೆದ ವರ್ಷದಿಂದ ಜೋರಾಗಿಯೇ ಸದ್ದು ಮಾಡಿತ್ತು. ಮೈಸೂರಿನಲ್ಲಿ ಹೈಡ್ರಾಮ ಕೂಡ ನಡೆದಿತ್ತು. ನರೇಶ್ ಅವರಿಗೆ ಅದಾಗಲೇ ಮೂರು ಮದುವೆಯಾಗಿ ಇದು ನಾಲ್ಕನೇ ಮದುವೆ ಎಂದು ಎಲ್ಲೆಡೆ ವೈರಲ್ ಆಗಿತ್ತು.

ನಟ ನರೇಶ್ 60ರ ಆಸುಪಾಸು, ಪವಿತ್ರಾ ಲೋಕೇಶ್ ಅವರು 50 ವರ್ಷದ ಬಳಿಕ ಇಬ್ಬರು ಮದುವೆಯಾಗುತ್ತಾರೆ ಎಂದು ಬೇರೆ ತರದಲ್ಲೇ ಮಾತನಾಡುವುದಕ್ಕೆ ಶುರು ಮಾಡಿದ್ದರು ಜನರು. ಇನ್ನು ಈ ಜೋಡಿ ಈಗ ಮಲ್ಲಿ ಪೆಲ್ಲಿ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರುತ್ತಿದೆ. ಇಬ್ಬರು ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದು, ಸ್ಟೇಜ್ ಮೇಲೆ ಹಗ್ ಕಿಸ್ ಮಾಡುವುದು ಎಲ್ಲವೂ ನಡೆಯುತ್ತಿದೆ. ಇದನ್ನು ಓದಿ..Naresh Pavithra: ಪವಿತ್ರ ರೂಪದಲ್ಲಿ ಮತ್ತೆ ನನಗೆ ಮತ್ತೊಬ್ಬರು ಅಮ್ಮ ಸಿಕ್ಕಿದ್ದರೆ ಎಂದ ನರೇಶ್- ವಾವ್ ಇದೇನ್ ಪ್ರೀತಿ ಎಂದು ದೇಶವೇ ಎದ್ದು ನಿಲ್ಲುವಂತೆ ಹೇಳಿದ್ದೇನು ಗೊತ್ತೇ??

ಇಬ್ಬರ ಬಗ್ಗೆ ನೆಗಟಿವ್ ಕಮೆಂಟ್ಸ್ ಗಳು ಹೆಚ್ಚಾಗಿ ಬರುತ್ತಿದ್ದರು ಸಹ ತಲೆಕೆಡಿಸಿಕೊಳ್ಳದೆ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರೆಸ್ ಮೀಟ್ ನಲ್ಲಿ ಇಬ್ಬರು ಇದ್ದಾಗ, ಮಾಧ್ಯಮದವರು ಒಂದು ಶಾಕಿಂಗ್ ಪ್ರಶ್ನೆ ಕೇಳಿದ್ದು, ನರೇಶ್ ಅವರು ಕೊಟ್ಟ ಉತ್ತರ ವೈರಲ್ ಆಗಿದೆ. ನೀವಿಬ್ಬರು ಮದುವೆಯಾಗಿ, ಮಕ್ಕಳನ್ನು ಪಡೆಯುತ್ತೀರಾ ಎಂದು ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ನರೇಶ್ ಅವರು ಉತ್ತರ ಕೊಟ್ಟಿದ್ದು ಹೀಗೆ..

“ಆದಷ್ಟು ಬೇಗ ಮದುವೆ ಆಗಬೇಕು ಎಂದು ಅಂದುಕೊಂಡಿದ್ದೇವೆ. ಮಕ್ಕಳ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಮದುವೆ ನಂತರ ಪ್ಲಾನ್ ಮಾಡಬೇಕು ಎಂದು ಹೇಳಿದ್ದಾರೆ. ಶುದ್ಧವಾದ ಪ್ರೀತಿಗೆ ವಯಸ್ಸಿನ ಸಂಬಂಧ ಇಲ್ಲ, ಮಕ್ಕಳ ವಿಷಯಕ್ಕೂ ಇದೇ ನಿಯಮ ಅನ್ವಯಿಸುತ್ತದೆ..” ಎಂದು ನಟ ನರೇಶ್ ಅವರು ಹೇಳಿದ್ದು, ಪವಿತ್ರಾ ಲೋಕೇಶ್ ಅವರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಇದನ್ನು ಓದಿ..Mahesh Babu: ಎಲ್ಲರಿಗಿಂತ ಆಕೆಯೇ ಸುಂದರವಾಗಿ ಇರುತ್ತಾಳೆ ಎಂದ ಮಹೇಶ್ ಬಾಬು- ಆಯ್ಕೆ ಮಾಡಿದ ತುಪ್ಪದಂತಹ ನಟಿ ಯಾರು ಗೊತ್ತೇ? ಮೈ ಎಲ್ಲ ಜುಮ್ ಅನ್ನುತ್ತದೆ.

Comments are closed.