Neer Dose Karnataka
Take a fresh look at your lifestyle.

Kannada News: ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟಂಟ್ ಅಳವಡಿಸಿಕೊಳ್ಳಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ?? ಹೀಗೆ ಮಾಡಿ ಸಾಕು.

Kannada News: ನೀವು ಬಡವರಾಗಿದ್ದು ಹೃದಯ ಸಂಬಂಧಿ ಸಮಸ್ಯೆ ಇದ್ದು, ಸ್ಟಂಟ್ ಅಳವಡಿಸಿಕೊಳ್ಳಲು ಸಾಧ್ಯವಾಗದೆ ಹೋಗಿದ್ದರೆ, ನಮ್ಮ ರಾಜ್ಯದ ಖ್ಯಾತ ಸಂಸ್ಥೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ನಿಮಗೆ ಒಂದು ಸುವರ್ಣಾವಕಾಶ ನೀಡುತ್ತಿದೆ. ಇಲ್ಲಿ ಉಚಿತವಾಗಿ ಅಂಜಿಯೋಪ್ಲಾಸ್ಟಿ ಕಾರ್ಯಗಾರ ನಡೆಯಲಿದ್ದು, ಬಡತನದಲ್ಲಿ ಕಷ್ಟದಲ್ಲಿ ಇರುವ 200 ಜನರಿಗೆ ಉಚಿತವಾಗಿ ಸ್ಟಂಟ್ ಅಳವಡಿಸಲಾಗುತ್ತದೆ..

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಕ್ಟ್ರಾನಿಕ್ಸ್, ಅಮೆರಿಕ ಮತ್ತು ಡಾ.ಗೋವಿ೦ದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ವಿಸ್ಕಿನ್​ ಸನ್, ಅಮೆರಿಕ ಈ ಸಂಸ್ಥೆಗಳ ಸಹಯೋಗದಲ್ಲಿ 200 ಬಡ ರೋಗಿಗಳಿಗೆ ಈ ಸೌಭಾಗ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ಕಾರ್ಯಾಗಾರ ಜೂನ್ 12 ರಿಂದ 18ರ ವರೆಗು ನಡೆಯಲಿದೆ ಎಂದು ಜಯದೇವ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಇದನ್ನು ಓದಿ..Kannada News: ಡಿಕೆಶಿ ಡಿಸಿಎಂ ಆದರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಯತ್ನಾಳ್- ಬಹಿರಂಗವಾಗಿಯೇ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಇದಪ್ಪ ಗತ್ತು ಅಂದ್ರೆ ಅಂದ್ರು ಜನ

ಈ ವರ್ಕ್ ಶಾಪ್ ನಲ್ಲಿ ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ, ಈಗಾಗಲೇ ಆಂಜಿಯೋಗ್ರಾಮ್ ಮಾಡಿಸಿರುವವರಿಗು ಕೂಡ ಉತ್ತಮ ಗುಣಮಟ್ಟದ ಮೆಡಿಕೇಟೆಡ್ ಸ್ಟಂಟ್ ಅಳವಡಿಸಲಾಗುತ್ತದೆ. ಇದಕ್ಕಾಗಿ ರೋಗಿಗಳು ಜೂನ್ 8ರ ಒಳಗೆ ದಾಖಲಿಸಿಕೊಳ್ಳಬೇಕು. ಹಾಗೆಯೇ ರಿಜಿಸ್ಟರ್ ಮಾಡುವಾಗ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತಂದಿರಬೇಕು.

ವರ್ಕ್ ಶಾಪ್ ಶುರುವಾಗುವುದು ಜೂನ್ 12ರಿಂದ, ಜೂನ್ 12 ರಿಂದ 14ರವರೆಗೂ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ವರ್ಕ್ ಶಾಪ್ ನಡೆಯಲಿದೆ, ಜೂನ್ 15 ಮತ್ತು 16ರಂದು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ನಡೆಯಲಿದೆ. ಜೂನ್ 17 ಮತ್ತು 18ರಂದು ಕಲಬುರ್ಗಿ ಶಾಖೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿ ಪಡೆಯಲು ಆಫೀಸ್ ನಂಬರ್ ಗೆ ನೀವು ಕಾಲ್ ಮಾಡಬಹುದು. ಬೆಂಗಳೂರು ಜಯದೇವ ಆಫೀಸ್ ನಂಬರ್ 9480827888 ಅಥವಾ 080-26944874. ಮೈಸೂರು ಜಯದೇವ ಆಫೀಸ್ ನಂಬರ್ 8660105492 ಅಥವಾ 0821-2263255. ಕಲಬುರಗಿ ಜಯದೇವ ಆಫೀಸ್ ನಂಬರ್ 9482114611 ಅಥವಾ 08472-230511. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?

Comments are closed.