Neer Dose Karnataka
Take a fresh look at your lifestyle.

Kannada News: ಡಿಕೆಶಿ ಡಿಸಿಎಂ ಆದರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಯತ್ನಾಳ್- ಬಹಿರಂಗವಾಗಿಯೇ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಇದಪ್ಪ ಗತ್ತು ಅಂದ್ರೆ ಅಂದ್ರು ಜನ

Kannada News: ಈಗಾಗಲೇ ಕಾಂಗ್ರೆಸ್ (Congress) ಸರ್ಕಾರದ ರಚನೆ ನಡೆದು, ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿ, ಡಿಕೆ ಶಿವಕುಮಾರ್ (DK Shivakumar) ಅವರು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಬಿಜೆಪಿ ಸರ್ಕಾರದ ಕೇಸರೀಕರಣದ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಡಿಕೆ ಶಿವಕುಮಾರ್ ಅವರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ (Basavanagowda Patil Yatnal) ಅವರು ಟಾಂಗ್ ಕೊಟ್ಟಿದ್ದು, ಪೊಲೀಸ್ ಸ್ಟೇಶನ್ ಗಳನ್ನು ಹಸರೀಕರಣ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಯತ್ನಾಳ್ ಅವರು ಮಾಧ್ಯಮದ ಎದುರು ಮಾತನಾಡಿ, “ನಮ್ಮ ದೇಶವನ್ನ ಪಾಕಿಸ್ತಾನ್ (Pakistan) ಮಾಡುತ್ತಾರಾ? ಕೇಸರಿ ನಮ್ಮ ಧರ್ಮದ ಸಂಕೇತ, ಪೊಲೀಸರು ಕೇಸರಿ ಶಾಲ್ ಹಾಕೊಳ್ಳೋದರಲ್ಲಿ ತಪ್ಪೇನು?” ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೇಸರಿ ಬಣ್ಣವನ್ನ ವಿರೋಧ ಮಾಡಿದರೆ ಉಳಿಗಾಲ ಇರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ (BJP) ಪಕ್ಷ ಮುಗಿದಿಲ್ಲ, ನಮ್ಮ ಹೋರಾಟ ಯಾವಾಗಲೂ ಇರುತ್ತದೆ. ವಿರೋಧ ಪಕ್ಷದಲ್ಲಿ 66 ಜನರಿದ್ದೇವೆ. ಅವರು ಮಾಡುವುದೆಲ್ಲ ನಡೆಯೋದಿಲ್ಲ..” ಎಂದಿದ್ದಾರೆ. ಇದನ್ನು ಓದಿ..Karnataka: BJP ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಹಿಂದೂ ಮಹಾಸಭಾ- ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಬಿಜೆಪಿ ಕಥೆ ಮುಗಿಯಿತೇ??

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತದ ದೇಹದ್ರೋಹದ ಚಟುವಟಿಕೆ ಜಾಸ್ತಿಯಾಗುತ್ತದೆ. ನಮ್ಮ ಪಕ್ಷ ಕೂಡ ರಾಜ್ಯದ ಆಡಳಿತ ನಡೆಸಿದೆ. ಇಲ್ಲಿ ಏನು ಬೇಕಾದರೂ ಆಗುತ್ತದೆ, 135 ಅಲ್ಲ 200 ಸೀಟ್ ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ (Maharashtra) ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಪಕ್ಷದವರ ದುರಹಂಕಾರ, ಭ್ರಷ್ಟಾಚಾರ, ಗೂಂಡಾಗಿರಿ ಇದೆಲ್ಲದರ ವಾರಂಟಿ ಲೋಕಸಭೆವರೆಗು ಮಾತ್ರ ಇರುತ್ತೆ. ನಂತರ ಅದೆಲ್ಲವು ಮುಗಿದು ಹೋಗುತ್ತೆ.. ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಗಳನ್ನು ಆರಿಸಿಕೊಂಡು ಬಂದಿದೆ. ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. ಇದೆಲ್ಲ ಬೇಗ ಮುಗಿದು ಹೋಗುತ್ತೆ, ಮುಂದಿನ ವರ್ಷ ಮತ್ತೆ ಮೋದಿ (Narendra Modi) ಅವರೇ ಪ್ರಧಾನಿ ಆಗುತ್ತಾರೆ. ನಮ್ಮ ದೇಶ ಹಿಂದೂ ದೇಶ ಆಗುತ್ತದೆ. ಡಿಕೆ ಶಿವಕುಮಾರ್ ಅವರಂಥ ನೂರು ಜನ ಬಂದರು ಏನು ಮಾಡೋಕಾಗಲ್ಲ. ಶಿವಕುಮಾರ್ ಅವರು ಮೇಕೆದಾಟು ವಿಷಯದಲ್ಲಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ? ಕಾಂಗ್ರೆಸ್ ಅವರು ಸಾಚಾ ಆಗಿದ್ದಾರಾ? ಪೊಲೀಸ್ ಸ್ಟೇಶನ್ ಗಳು ಹೇಗೆ ಕೆಲಸ ಮಾಡುತ್ತದೆ ನೋಡೋಣ..”ಎಂದು ಡಿಕೆ ಶಿವಕುಮಾರ್ ಅವರ ವಿರುದ್ಧ ಬ್ಯಾಟಿಂಗ್ ಮಾಡಿದ್ದಾರೆ.. ಇದನ್ನು ಓದಿ..Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.

Comments are closed.