Neer Dose Karnataka
Take a fresh look at your lifestyle.

Kannada News: ಮೊದಲ ಬಾರಿ ಬಿಜೆಪಿ ನಾಯಕನ ಪರ ನಿಂತ ಚೇತನ್- ಸಿದ್ದು ಅಂಡ್ ಟೀಮ್ ಗೆ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??

Kannada News: ಫೆಬ್ರವರಿ 15ರಂದು ಎಲೆಕ್ಷನ್ ಪ್ರಚಾರದ ವೇಳೆ ಮಂಡ್ಯದಲ್ಲಿ ಅಶ್ವತ್ಥ್ ನಾರಾಯಣ್ ಅವರು ಪ್ರಚಾರದ ಭರದಲ್ಲಿ ಕೆಲವು ಮಾತುಗಳನ್ನು ಹೇಳಿದ್ದರು. ಮಂಡ್ಯ ಜನರು ಮನಸ್ಸು ಮಾಡಿದರೆ ಯಾವುದೇ ರೀತಿಯ ಬದಲಾವಣೆಗಳನ್ನು ತರುತ್ತಾರೆ, ಏನನ್ನು ಬೇಕಾದರೂ ಸಾಧಿಸುವ ಶಕ್ತಿ ಅವರಲ್ಲಿದೆ. ರಾಜಕೀಯದ ದಿಕ್ಸೂಚಿ ಇಲ್ಲಿಂದಲೇ ಕಾಣಬೇಕು. ಒಂದು ವೇಳೆ ನೀವು ಎಚ್ಚೆತ್ತುಕೊಳ್ಳದೆ ಹೋದರೆ ಟಿಪ್ಪು ಸುಲ್ತಾನ್ ಹಾಗೆ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾರೆ..

ನಿಮಗೆಲ್ಲ ಟಿಪ್ಪು ಸುಲ್ತಾನ್ ಆಳ್ವಿಕೆ ಬೇಕಾ ಅಥವಾ ಸಾವರ್ಕರ್ ಬೇಕಾ, ಒಂದು ವೇಳೆ ಟಿಪ್ಪು ಸುಲ್ತಾನ್ ಆಳ್ವಿಕೆ ಬೇಡ ಎಂದರೆ ಟಿಪ್ಪು ಅವರನ್ನು ವಾಪಸ್ ಕಳಿಸಿದ ಹಾಗೆ, ಹುರಿಗೌಡ ನಂಜೇಗೌಡ ಟಿಪ್ಪು ಅವರನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸರಲ್ಲಿ ದೂರು ನೀಡಿದೆ. ಇದನ್ನು ಓದಿ..Karnataka: BJP ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಹಿಂದೂ ಮಹಾಸಭಾ- ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಬಿಜೆಪಿ ಕಥೆ ಮುಗಿಯಿತೇ??

ಮೇ 24ರಂದು ಮೈಸೊರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ದೂರು ನೀಡಿ, FIR ದಾಖಲಾಗಿದೆ. ಈ ವಿಷಯದ ಬಗ್ಗೆ ಸ್ಯಾಂಡಲ್ ವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ನಟ ಚೇತನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಫೆಬ್ರುವರಿಯಲ್ಲಿ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು, ‘ಟಿಪ್ಪು ಸುಲ್ತಾನ್‌ನಂತೆ ಸಿದ್ದರಾಮಯ್ಯನವರನ್ನು ಮುಗಿಸಿ’ ಎಂದು ಬೆಂಕಿ ಹಚ್ಚುವ, ಸ್ವೀಕಾರಾರ್ಹವಲ್ಲದ ಹೇಳಿಕೆ ನೀಡಿದ್ದರು.

ನಂತರ ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರು ಇದೀಗ ಶಾಸಕರ ಹೇಳಿಕೆಗೆ ಕಾಂಗ್ರೆಸ್ ಎಫ್ ಐಆರ್ ದಾಖಲಿಸಿದೆ. ಇದು ಕ್ಷುಲ್ಲಕ ಮತ್ತು ಸೇಡಿನ ರಾಜಕಾರಣದಂತೆ ತೋರುತ್ತಿದೆ. ಕಾಂಗ್ರೆಸ್ ಭಾರಿ ಜನಾದೇಶವನ್ನು ಗೆದ್ದಿದೆ —ಈಗ ಅದು ತನ್ನ ಸ್ವಂತ ಅಹಂಕಾರಗಳನ್ನು ಪೂರೈಸುವ ಬದಲು ಕರ್ನಾಟಕದ ಜನರ ಸೇವೆ ಮಾಡಬೇಕು..” ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ನಟ ಚೇತನ್ ಬಿಜೆಪಿ ನಾಯಕರನ್ನು ಸಪೋರ್ಟ್ ಮಾಡಿದ್ದಾರೆ. ಇದನ್ನು ಓದಿ..Kannada News: ಒಂದು ಕಡೆ ಪ್ರಶಂಸೆ, ಒಂದು ಕಡೆ ಕಾಗೆ ಎಂದು ಟ್ರೊಲ್ ಮಾಡುತ್ತಿದ್ದರೂ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಶ್ವರ್ ಏನು ಮಾಡಲು ಹೊರಟಿದ್ದಾರೆ ಗೊತ್ತೇ??

Comments are closed.