Red Mi Prime 10: ಚೀನಾ ಮೊಬೈಲ್ ಆದರೂ ಜನ ಹೆಚ್ಚು ಖರೀದಿ ಮಾಡುವ ರೆಡ್ಮಿ 10 ಪ್ರೈಮ್ ಬೆಲೆ ಇಳಿಕೆ- ಖರೀದಿ ಮಾಡಿ, ಎಷ್ಟು ಅಂತೇ ಗೊತ್ತೇ??
Red Mi Prime 10: ಶಿಯೋಮಿ ಸಂಸ್ಥೆಯ ಹಲವಾರು ಬಜೆಟ್ ಬೆಲೆಯ ಫೋನ್ ಗಳ ಪೈಕಿ, ರೆಡ್ಮಿ 10 ಪ್ರೈಮ್ ಫೋನ್ ಸಹ ಒಂದಾಗಿದೆ. ಇನ್ನು ಈ ಫೋನ್ ಅನ್ನು ಇದೀಗ ಗ್ರಾಹಕರು ಅತ್ಯಂತ ಕಡಿಮೆ ದರದಲ್ಲಿ ಖರೀದಿಸ ಬಹುದಾಗಿದೆ. ಇದೀಗ ಈ ಫೋನ್ ಗೆ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಇದೀಗ ಈ ರೆಡ್ಮಿ 10 ಪ್ರೈಮ್ ಫೋನ್ ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಈ ಪ್ರಮುಖ ವೆಬ್ ಸೈಟ್ ಗಳಾದ ಅಮೆಜಾನ್ ನಲ್ಲಿ ಈ ರೆಡ್ಮಿ 10 ಫೋನ್ ಅನ್ನು ಪ್ರೈಮ್ ಗ್ರಾಹಕರಿಗೆ ಸುಮಾರು 23% ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಈ ರೆಡ್ಮಿ 10 ಫೋನ್ 4GB RAM, + 64 GB ಸ್ಟೋರೇಜ್ ಇರುವಂತಹ ಫೋನ್ ಸುಮಾರು 14,999 ರೂ, ಬೆಲೆಗೆ ಇದ್ದು, ಇನ್ನು ಇದೀಗ ಈ ಫೋನ್ ಅನ್ನು 11,499 ರೂ/- ಗಳಿಗೆ ಖರೀದಿಸಿ ಬಹುದಾಗಿದೆ. ಅಲ್ಲದೆ ಜೊತೆಗೆ ಕೆಲವು ಬ್ಯಾಂಕ್ ಗಳಿಂದ ಹೆಚ್ಚುವರಿಯಾಗಿ ರಿಯಾಯತಿ ಸಹ ನೀಡಲಾಗುತ್ತಿದೆ. ಇನ್ನು ಈ ರೆಡ್ಮಿ 10 ಸ್ಮಾರ್ಟ್ ಫೋನ್ ನ ಇನ್ನಿತರ ಫೀಚರ್ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿ.. ಇದನ್ನು ಓದಿ..Watch Movie: ಬಿಗ್ ನ್ಯೂಸ್: ಇನ್ನು ಮುಂದೆ ಸಿನಿಮಾ ಬಿಡುಗಡೆಯಾದ ದಿನವೇ ಮನೆಯಲ್ಲೂ ಕೂತು ನೋಡಬಹುದು. ಹೇಗೆ ಗೊತ್ತೇ??
ರೆಡ್ಮಿ 10 ಪ್ರೈಮ್ ಸ್ಮಾರ್ಟ್ ಫೋನ್, 1080 × 2400 ಪಿಕ್ಸೆಲ್ ಸ್ಕ್ರೀನ್ ಹೊಂದಿದ್ದು, 6.5 ಇಂಚಿನ ಫುಲ್ ಹೆಚ್ ಡಿ+ ಡಿಸ್ಪ್ಲೇ ಹೊಂದಿದೆ. ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಅಲ್ಲದೆ ಆಂಡ್ರಾಯ್ಡ್ 11 ನಲ್ಲಿ MIUI 12.5 ನೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. 6GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ. ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ 512GB ವರೆಗೆ ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೆಯೇ 2GB ವರೆಗಿನ RAM ವಿಸ್ತರಿಸಬಹುದಾಗಿದೆ.
ರೆಡ್ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಈ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್, ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಈ ಕ್ಯಾಮರಾ ಸೆಟಪ್ ಫುಲ್ ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಸಹ ಹೊಂದಿದೆ. ಇದನ್ನು ಓದಿ..ICICI Bank Jobs: ಮತ್ತೆ ಬೇರೆ ರಾಜ್ಯದವರ ಪಾಲು ಎನ್ನಬೇಡಿ, ಈಗಲೇ ಐಸಿಐಸಿಐ ಬ್ಯಾಂಕ್ ಉದ್ಯೋಗಕ್ಕೆ ಹೋಗಿ ಅರ್ಜಿ ಹಾಕಿ. SSLC ಆಗಿದ್ದರೂ ಸಾಕು.
Comments are closed.