Neer Dose Karnataka
Take a fresh look at your lifestyle.

Tech News: ಬ್ಯಾನ್ ಅಗಿದು 74 ಕ್ಕೂ ಹೆಚ್ಚು ವಾಟ್ಸಪ್ಪ್ ಖಾತೆಗಳು- ಮೆಟಾ ಸಂಸ್ಥೆ ಯಾಕೆ ವಾಟ್ಸಪ್ಪ್ ಖಾತೆಗಳನ್ನು ಮುಚ್ಚುತ್ತಿದೆ ಗೊತ್ತೇ? ನೀವು ಈ ತಪ್ಪು ಮಾಡಬೇಡಿ.

Tech News: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಸಹ ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿರುತ್ತಾರೆ. ಇನ್ನು ಮೆಟಾ ಒಡೆತನದ ವಾಟ್ಯಾಪ್ ನೀಡಿರುವ ಹೇಳಿಕೆಯ ಪ್ರಕಾರ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸುಮಾರು 74.52 ಲಕ್ಷ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎನ್ನುವ ವಿಚಾರ ಇದೀಗ ಹೊರ ಬಿದ್ದಿದೆ. 2021 ರ ತಂತ್ರಜ್ಞಾನ ನಿಯಮಗಳ ಅನುಸಾರವಾಗಿ ಪ್ರತಿ ತಿಂಗಳ ಮೊದಲ ದಿನದಂದು ಸಾಮಾಜಿಕ ಜಾಲತಾಣವೂ ವರದಿಗಳನ್ನು ಪ್ರಕಟಿಸುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದ ಬಳಕೆದಾರರ ಹೇಳಿಕೆ ಹಾಗೂ ಅವರ ನೀಡಿರುವ ದೂರುಗಳ ಆಧಾರದ ಮೇಲೆ ವಾಟ್ಸಾಪ್ ಲಕ್ಷಾಂತರ ಖಾತೆಗಳನ್ನು ಡಿಲೀಟ್ ಮಾಡಿದೆ. ಮೆಟಾ ಮಾಲೀಕತ್ವದ ದೊಡ್ಡ ಮೆಸೇಜಿಂಗ್ ಪ್ಲಾಟ್ ಫ್ಲಾರ್ಮ್ ಗಳಲ್ಲಿ ವಾಟ್ಸಾಪ್ ಸಹ ಒಂದಾಗಿದ್ದು. ಅಪಾಯಕಾರಿ ಚಟುವಟಿಕೆಗಳನ್ನು ತಡೆಯಲು ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮೊದಲೇ ತಯಾರಿ ಮಾಡಿಕೊಂಡಿರಲಾಗುತ್ತದೆ. ಈ ರೀತಿಯ ಅಪಾಯಕಾರಿ ಚಟುವಟಿಕೆಗಳನ್ನು ಪತ್ತೆ ಹಚ್ಚುವುದಕ್ಕಿಂತ ಅದನ್ನು ಮೊದಲೇ ನಿಯಂತ್ರಿಸಿವುದು ಉತ್ತಮ ಎನ್ನುವುದು ಕಂಪನಿಯವರ ಭಾವನೆ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??

ವಾಟ್ಸಾಪ್ ಬಳಕೆದಾರರ ಸುರಕ್ಷತೆಗೆ ಅನುಗುಣವಾಗಿ ಮೊದಲೇ ವಾಟ್ಸಾಪ್ ನಲ್ಲಿ ಅದಕ್ಕೆ ಬೇಕಾದ ಪ್ರೋಗ್ರಾಂ ಅನ್ನು ಮಾಡಲಾಗಿರುತ್ತದೆ. ವಾಟ್ಸಾಪ್ ಬಳಕೆದಾರರು ತಮಗೆ ಯಾವುದಾದರೂ ಅಪಾಯಕಾರಿ ಅಥವಾ ತಮ್ಮ ಕುರಿತು ನಿಂದಿಸುವಂತಹ ಕಾರ್ಯಗಳು ನಡೆದಲ್ಲಿ ಅದನ್ನು ರಿಪೋರ್ಟ್ ಮಾಡುವ ಮೂಲಕ ಅವರನ್ನು ಮೇಲೆ ದೂರು ದಾಖಲಿಸುತ್ತಾರೆ. ಈ ದೂರುಗಳು ಬ್ಲಾಕ್ ಗಳ ರೂಪದಲ್ಲಿ ಅವರಿಗೆ ಸಿಗಲಿದ್ದು, ಇನ್ನು ಈ ಬಗ್ಗೆ ಸಂಪೂರ್ಣವಾಗಿ ತನಿಕೆ ನಡೆಸಿ ನಂತರ ಆ ಖಾತೆಗಳನ್ನು ನಿಷೇದ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಏಪ್ರಿಲ್ ತಿಂಗಳಿನಲ್ಲಿ ಸುಮಾರು 7.4 ಮಿಲಿಯನ್ ಖಾತೆಗಳನ್ನು ಇಂತಹ ಕಾರಣಗಳಿಗೆ ಡಿಲೀಟ್ ಮಾಡಲಾಗಿದ್ದು, ಇನ್ನು ಬಳಕೆದಾರರಿಂದ ವರದಿ ಪಡೆಯದೆ ಸುಮಾರು 2.4 ಮಿಲಿಯನ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. ಜೂನ್ 1 ರಂದು ವಾಟ್ಸಾಪ್ ತನ್ನ ಹೊಸ ಗ್ಲೋಬಲ್ ಸೆಕ್ಯುರಿಟಿ ಸೆಂಟರ್ ಅನ್ನು ಅನಾವರಣ ಮಾಡಿದ್ದು, ಇದರಲ್ಲಿ ಅನ್ವಾಂಟೆಡ್ ಮೆಸೇಜ್ ಅಲ್ಲದೆ ಸ್ಕ್ಯಾಮರ್ ಗಳಿಂದ ಯಾವ ರೀತಿ ಹೆಚ್ಚರಿಕೆಯಾಗಿರಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಇದು ಕೇವೆಲ ಇಂಗ್ಲೀಷ್ ನಲ್ಲಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಸುಮಾರು 10 ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ

Comments are closed.