Neer Dose Karnataka
Take a fresh look at your lifestyle.

News: ಬಿಗ್ ಬ್ರೇಕಿಂಗ್; ಮಿಸ್ ಆಗಿ ಆಗಿಲ್ಲ ಒರಿಸ್ಸಾ ಘಟನೆ- CBI ತನಿಖೆಗೆ ವಹಿಸಿರುವುದೇ ಅದಕ್ಕೆ. ಅನುಮಾನ ವಾಸನೆ ಬಂದು ಕೊನೆಗೂ ತಿಳಿದಿದ್ದು ಏನು ಗೊತ್ತೇ?

938

News: ಜೂನ್ 2ರಂದು ಒಡಿಶಾದಲ್ಲಿ ನಡೆದ ಮೂರು ಟ್ರೇನ್ ಗಳ ಆಕ್ಸಿಡೆಂಟ್ ದಾರುಣವಾದ ಘಟನೆ ಇಂದಿಗೂ ಎಲ್ಲರಿಗೂ ಭಯ ತರಿಸುವಂಥದ್ದು. ಈ ಆಕ್ಸಿಡೆಂಟ್ ನಲ್ಲಿ 200ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ಇಂಥದ್ದೊಂದು ಘಟನೆಗೆ ಇಡೀ ಭಾರತ ಮರುಗಿತು. ಆಕ್ಸಿಡೆಂಟ್ ಆದ ಕೆಲವೇ ಗಂಟೆಗಳಲ್ಲಿ ಪಿಎಮ್ ನರೇಂದ್ರ ಮೋದಿ ಅವರು ಸ್ಥಳಕ್ಕೆ ಅಗಮಿಸಿ ಎಲ್ಲವನ್ನು ಪರಿಶೀಲಿಸಿದರು.

ಈ ಘಟನೆಗೆ ಬೇರೆಯದೇ ತಿರುವು ಸಿಕ್ಕಿದೆ. ಇದನ್ನು ಆಕಸ್ಮಿಕ ಅಪಘಾತ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈಗ ಈ ಆಕ್ಸಿಡೆಂಟ್ ಗಳ ಹಿಂದೆ ಬೇರೆ ಕೈವಾಡ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣದಿಂದಲೇ ಈ ಕೇಸ್ ಅನ್ನು CBI ಗೆ ವರ್ಗಾವಣೆ ಮಾಡಲಾಗಿದೆ. ತನಿಖೆಗಳು ನಡೆಯುತ್ತಿದ್ದು ಆದಷ್ಟು ರಿಪೋರ್ಟ್ ಬಂದು, ತಪ್ಪು ಮಾಡಿರುವವರು ಆಚೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Karnataka BJP: ಕರ್ನಾಟಕದಲ್ಲಿ BJP ಹೀನಾಯ ಸೋಲಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಮೊದಲ ನಾಯಕ. ಈ ಕುರಿತು ಹೇಳಿದ್ದೇನು ಗೊತ್ತೇ??

ರೈಲ್ವೆ ಇಲಾಖೆಯ ಮಿನಿಸ್ಟರ್ ಆದ ಅಶ್ವಿನಿ ವೈಷ್ಣವ್ ಅವರು ಹೇಳಿರುವ ಮಾತು ದೊಡ್ಡ ಸಂಚಲನ ಸೃಷ್ಟಿಸಿದೆ. “ಇದೆಲ್ಲ ಆಗಿದ್ದು ಯಾವ ಕಾರಣಕ್ಕೆ ಯಾರಿಂದ ಎಂದು ಗೊತ್ತಾಗಿದೆ. ಆದರೆ ಈಗ ನಾನು ಹೆಚ್ಚಿನ ವಿವರಗಳನ್ನು ಹೇಳಲು ಆಗೋದಿಲ್ಲ. ತನಿಖೆ ನಡೆದು ರಿಪೋರ್ಟ್ ಬರಲಿ. ಆಗ ಎಲ್ಲಾ ಸತ್ಯ ಬಹಿರಂಗವಾಗಿ ಗೊತ್ತಾಗುತ್ತದೆ..” ಎಂದು ಹೇಳಿದ್ದಾರೆ. ಈ ಮಾತುಗಳು ಈಗ ಹೊಸ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಈ ಥರ ಆಗಿದೆ ಎಂದು ಹೇಳಲಾಗುತ್ತಿದೆ. ಹೌರಾ ಚೆನ್ನೈ ಎಕ್ಸ್ಪ್ರೆಸ್ ಸರಿಯಾದ ಟ್ರ್ಯಾಕ್ ಕಡೆಗೆ ಹೋಗದೆ, ಗೂಡ್ಸ್ ಟ್ರೇನ್ ಗೆ ಗುದ್ದಿ ಡಿಕ್ಕಿ ಹೊಡೆದಿದ್ದು, ಎರಡು ಭೋಗಿಗಳು ಬೇರೆಡೆಗೆ ಬಿದ್ದವು, ಬಳಿಕ ಆ ಮತ್ತೊಂದು ಟ್ರ್ಯಾಕ್ ನಲ್ಲಿ ಬರಬೇಕಿದ್ದ ಬೆಂಗಳೂರು ಹೌರಾ ಎಕ್ಸ್ಪ್ರೆಸ್ ರೈಲು ಕೂಡ ಇದೇ ರೀತಿ ಆಗಿದೆ. ಇದರಿಂದ ಸಾವಿರಾರು ಕುಟುಂಬಕ್ಕೆ ಹಾನಿ ಆಗಿದ್ದು, ಪ್ರಧಾನಿಗಳು ಕೂಡ ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಇದನ್ನು ಓದಿ..BEL Jobs: ಕೆಲಸ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎನ್ನುವ ಮುನ್ನ, ಮೊದಲು BEL ನಲ್ಲಿ ಅರ್ಜಿ ಹಾಕಿ. ತಿಂಗಳಿಗೆ 50 ಸಾವಿರ ಸಂಬಳ. ಏನು ಮಾಡಬೇಕು ಗೊತ್ತೇ?

Leave A Reply

Your email address will not be published.