Karnataka BJP: ಕರ್ನಾಟಕದಲ್ಲಿ BJP ಹೀನಾಯ ಸೋಲಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಮೊದಲ ನಾಯಕ. ಈ ಕುರಿತು ಹೇಳಿದ್ದೇನು ಗೊತ್ತೇ??
Karnataka BJP: ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹೀನಾಯವಾಗಿ ಸೋತಿದೆ. ಈ ಸೋಲಿನ ಬಳಿಕ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಿನ್ನೆಯಷ್ಟೇ ಬೆಳಗಾವಿಯಲ್ಲಿ ಬಿಜೆಪಿ ಮುಖಂಡರ ಸಭೆ ನಡೆದಿದ್ದು ಬೊಮ್ಮಾಯಿ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆ ಮುಗಿದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದರು.
ಬಿಜೆಪಿ ಪಕ್ಷದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. “ಎಲೆಕ್ಷನ್ ನಲ್ಲಿ ಬಿಜೆಪಿ ಪಕ್ಷಕ್ಕೆ ಈ ಥರದ ಫಲಿತಾಂಶ ಬರಲು ಕಾರಣ ಆಂತರಿಕ ಸಮಸ್ಯೆಗಳ ಕಾರಣವೇ ಅಥವಾ ಏನು ಎಂದು ಮೀಟಿಂಗ್ ನಲ್ಲಿ ಚರ್ಚೆ ನಡೆಯಿತು..” ಎಂದು ಹೇಳಿರುವ ಬೊಮ್ಮಾಯಿ ಅವರು.. ಮುಂದುವರೆದು ಮಾತನಾಡಿ, “ಎಲೆಕ್ಷನ್ ಕ್ಯಾಂಡಿಡೇಟ್ ಗಳನ್ನು ತಡವಾಗಿ ಅನೌನ್ಸ್ ಮಾಡಿದೆವು.. ಇದನ್ನು ಓದಿ..Railway Jobs: ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಕರೆದ ರೈಲ್ವೆ- ಈ ಬಾರಿ 10 ನೇ ತರಗತಿ, 12 ನೇ ತರಗತಿ ಪಾಸ್ ಆಗಿದ್ದರೂ ಅರ್ಜಿ ಹಾಕಿ. ಉದ್ಯೋಗ ಗಿಟ್ಟಿಸಿ. ಏನು ಮಾಡಬೇಕು ಗೊತ್ತೇ?
ಹೊಸ ಮುಖಗಳಿಗೆ ಎಲೆಕ್ಷನ್ ಟಿಕೆಟ್ ಕೊಟ್ಟಿದ್ದು ಕೆಲಸ ಮಾಡಲಿಲ್ಲ. ಆಂತರಿಕ ವಿಚಾರಗಳು ಕೂಡ ಎಲೆಕ್ಷನ್ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ.. ಈಗಾಗಲೇ ನಾನು ಸಿಎಂ ಅವರಿಗೆ ಪತ್ರ ಬರೆದು ವಿವೇಕ ಪ್ರಾಜೆಕ್ಟ್ ನಿಲ್ಲಬಾರದು ಎಂದು ಮನವಿ ಮಾಡಿಕೊಂಡಿದ್ದೇನೆ. ಇದು ಬಿಜೆಪಿ ಪಕ್ಷದ ಯೋಜನೆ ಅಲ್ಲ. 8000 ಬೋಧನಾ ಕೊಠಡಿಗಳ ನಿರ್ಮಾಣದ ಕೆಲಸ ಶುರುವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಇದರ ಬಗ್ಗೆ ಯಾವ ನಿರ್ಧಾರ ತೆವೆದುಕೊಳ್ಳುತ್ತಾರೆ ಎಂದು ಕಾದು ನೋಡಿ, ಅದಕ್ಕೆ ಅನುಸಾರವಾಗಿ ನಾನು ಉತ್ತರ ಕೊಡುತ್ತೇನೆ..ಸಿದ್ದರಾಮಯ್ಯ ಅವರು 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡಲು funds ಹೇಗೆ ತರುತ್ತಾರೆ ಎಂದು ತಿಳಿಸಿಲ್ಲ.. ಇದು ಜನರಲ್ಲಿ ಕೆಲವು ಅನುಮಾನ ಮೂಡುವ ಹಾಗೆ ಮಾಡಿದೆ..” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇದನ್ನು ಓದಿ..Ather Scooty: ಬಡವರಿಗೆ ಉಪಯೋಗವಾಗುವಂತೆ ಕಡಿಮೆ ಚಿಲ್ಲರೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದ ಅಥೇರ್ – ಸ್ಕೂಟರ್ ಸ್ಕಿಟೋರ್ ಬೆಲೆ, ವಿಶೇಷತೆ ಏನು ಗೊತ್ತೇ?
Comments are closed.