Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
Business Idea: ಒಂದು ವೇಳೆ ನೀವು ಬ್ಯುಸಿನೆಸ್ ಮಾಡಿ ಉತ್ತಮ ಮಟ್ಟದಲ್ಲಿ ಹಣ ಸಂಪಾದನೆ ಮಾಡಬೇಕು ಎಂದುಕೊಂಡಿದ್ದರೆ, ಇಂದು ನಾವು ನಿಮಗೆ ಒಂದು ಒಳ್ಳೆಯ ಐಡಿಯಾ ಕೊಡಲಿದ್ದೇವೆ. ಈ ಐಡಿಯಾ ಇಂದ ನೀವು ನಿಮ್ಮ ಮನೆಯಲ್ಲೇ ಕೂತು ಬ್ಯುಸಿನೆಸ್ ಶುರು ಮಾಡಿ, ಉತ್ತಮವಾಗಿ ಹಣ ಸಂಪಾದನೆ ಮಾಡಬಹುದು. ಆ ಬ್ಯುಸಿನೆಸ್ ಐಡಿಯಾಗಳು ಯಾವುವು ಎಂದು ತಿಳಿಸುತ್ತೇವೆ.
*ಸೋಲಾರ್ ಪ್ಲಾಂಟ್ :- ಈಗ ಸೋಲಾರ್ ಎನರ್ಜಿ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡುತ್ತಿದೆ. ಸರ್ಕಾರ ಕೂಡ ಇದನ್ನು ಬೆಂಬಲಿಸುತ್ತಿದೆ. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ನೀವು ಸೋಲಾರ್ ಪ್ಲಾಂಟ್ ಅಳವಡಿಸಬಹುದು. ಇದರಿಂದ ಕರೆಂಟ್ ಬಿಲ್ ಉಳಿಯುತ್ತದೆ ಹಾಗೂ ಲಲ್ಲೆಯ ಆದಾಯ ಗಳಿಸುತ್ತೀರಿ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ವಿದ್ಯುತ್ ಮಂಡಳಿಗೆ ಭೇಟಿ ನೀಡಿ, ನಿಮ್ಮ ಮನೆಯಲ್ಲಿ ಸೋಲಾರ್ ಪ್ಲಾಂಟ್ ಹಾಕಿಸಿ, ಇದರಿಂದ ಜೆನೆರೆಟ್ ಆಗುವ ಕರೆಂಟ್ ಗಾಗಿ ಮನೆಯಲ್ಲಿ ಮೀಟರ್ ಅಳವಡಿಸುತ್ತಾರೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಯೂನಿಟ್ ಗೆ 5.30 ರೂಪಾಯಿ ಕೊಡಲಾಗುತ್ತದೆ. ಈ ಸೋಲಾರ್ ಪ್ಲಾಂಟ್ ನ ಒಂದು ಕಿಲೋ ವ್ಯಾಟ್ 70 ರಿಂದ 80 ಸಾವಿರ ಹಣ ಖರ್ಚು ಮಾಡಿ, 25 ವರ್ಷಗಳವರೆಗು ಆದಾಯ ಪಡೆಯಬಹುದು. ಇದನ್ನು ಓದಿ..LIC Policy: ಹೆಚ್ಚು ಹಣ ಹೂಡಿಕೆ ಮಾಡಲು ಸಾಧ್ಯ ಆಗಲ್ಲ ಅನ್ನುವವರಿಗೆ, ಈ ಕಡಿಮೆ ಮೊತ್ತ ಪಾಲಿಸಿ ಹಾಕಿ, ಅಧಿಕ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಎಷ್ಟು ಲಾಭ ಗೊತ್ತೆ?
*ಟೆರೇಸ್ ಫಾರ್ಮಿಂಗ್ :- ಈಗ ಇದು ಟ್ರೆಂಡಿಂಗ್ ನಲ್ಲಿರುವ ಬ್ಯುಸಿನೆಸ್, ಉತ್ತಮ ಆದಾಯ ಕೊಡುತ್ತದೆ. ಈ ಬ್ಯುಸಿನೆಸ್ ಗಾಗಿ ನೀವು ನಿಮ್ಮ ಟೆರೇಸ್ ನಲ್ಲಿ ಗ್ರೀನ್ ಹೌಸ್ ನಿರ್ಮಿಸಿ, ಪಾಲಿಬ್ಯಾಗ್ ಗಳಲ್ಲಿ ಕೃಷಿ ಮಾಡಬಹುದು. ಕೋಕೋಪೀಟ್ ಯೂಸ್ ಮಾಡುವ ಮೂಲಕ, ಸಾವಯವ ಗೊಬ್ಬರ ಬಳಸುವ ಮೂಲಕ ಗಿಡಗಳನ್ನು ಚೆನ್ನಾಗಿ ಬೆಳೆಸಬಹುದು. ಹೀಗೆ ನೀವು ತರಕಾರಿ ಹಣ್ಣುಗಳನ್ನು ಬೆಳೆದು, ಅಕ್ಕಪಕ್ಕದವರ ಸಹಾಯದ ಮೂಲಕ ಮಾರ್ಕೆಟಿಂಗ್ ಮಾಡಿದರೆ, ಜನರು ನೀವು ಬೆಳೆದ ತರಕಾರಿಗಳನ್ನು ಕೊಂಡುಕೊಳ್ಳಲು ಶುರು ಮಾಡುತ್ತಾರೆ. ನಂತರ ಡೆಲಿವರಿಗಾಗಿ ಕೆಲಸಗಾರರನ್ನು ನೇಮಿಸಿಕೊಳ್ಳಬಹುದು..
*ಮೊಬೈಲ್ ಟವರ್ :- ಒಂದು ವೇಳೆ ನಿಮ್ಮ ಮನೆಯ ಟೆರೇಸ್ ಖಾಲಿ ಇದ್ದು, ನೀವು ಅದನ್ನು ಹೆಚ್ಚು ಬಳಸುತ್ತಿಲ್ಲ ಎನ್ನುವುದಾದರೆ, ಅದನ್ನು ಟೆಲಿಕಾಂ ಕಂಪೆನಿಗಳಿಗೆ ಟವರ್ ನಿರ್ಮಿಸಲು ಬಾಡಿಗೆಗೆ ಕೊಡಬಹುದು. ಇದರಿಂದ ಪ್ರತಿ ತಿಂಗಳು ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಆದರೆ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ನಿಮ್ಮ ಅಕ್ಕಪಕ್ಕದವರಿಂದ ನಿರಾಕ್ಷೇಪಣಾ ಪ್ರಮಾಣಪತ್ರ ವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಇಂದಲೂ ಅನುಮತಿ ಪಡೆಯಬೇಕು. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
*ನಿಮ್ಮ ಮನೆಯ ಬಿಲ್ಡಿಂಗ್ ನಗರದ ಮುಖ್ಯ ಸ್ಥಳದಲ್ಲಿದ್ದರೆ ಅಥವಾ ಮೇನ್ ರೋಡ್ ಗಳಿಗೆ ಕನೆಕ್ಟ್ ಆಗುವ ಹಾಗಿದ್ದರೆ, ನಿಮ್ಮ ಮನೆಯ ಛಾವಣಿಯ ಮೇಲೆ ಹೋರ್ಡಿಂಗ್ ಹಾಕುವುದಕ್ಕೆ ಜಾಗ ಕೊಡಬಹುದು. ಈ ರೀತಿ ಕೆಲಸ ಮಾಡುವ ಸಾಕಷ್ಟು ಆಡ್ ಏಜೆನ್ಸಿಗಳಿವೆ, ಅವುಗಳು ಈ ಥರದ ಕೆಲಸ ಮಾಡುತ್ತದೆ. ನೀವು ಹೋರ್ಡಿಂಗ್ ಗೆ ಜಾಗ ಕೊಡುವ ಮೂಲಕ ಉತ್ತಮವಾಗಿ ಹಣಗಳಿಸಬಹುದು. ಆದರೆ ಈ ರೀತಿ ಮಾಡುವುದಕ್ಕೆ ಸರ್ಕಾರ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎನ್ನುವುದು ಗಮನದಲ್ಲಿ ಇರಲಿ.
*ಬ್ಯಾಂಕ್ ಲೋನ್ :- ಒಂದು ವೇಳೆ ಬ್ಯುಸಿನೆಸ್ ಶುರು ಮಾಡಲು ಹೂಡಿಕೆಗೆ ಹಣವಿಲ್ಲ ಎಂದರೆ, ಮನೆಯ ಮೇಲ್ಚಾವಣಿಯಲ್ಲಿ ಬ್ಯುಸಿನೆಸ್ ಕಂಪೆನಿಗಳಲ್ಲಿ ಕೆಲಸ ಮಾಡಲು ಹಲವು ಬ್ಯಾಂಕ್ ಗಳು ಲೋನ್ ಕೊಡುತ್ತದೆ. ಹೀಗೆ ಲೋನ್ ಪಡೆದು, ಕೃಷಿ, ರಿಯಲ್ ಎಸ್ಟೇಟ್ ಹೀಗೆ ಹಲವು ರೀತಿಯ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನು ಓದಿ..Railway Jobs: ಪರರಾಜ್ಯದವರು ಕಾದು ಕುಳಿತಿದ್ದ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇಂದೇ ಅರ್ಜಿ ಹಾಕಿ, ತಡಮಾಡಿದವರಿಗೆ ಬೇರೆಯವರಿಗೆ ಹೋಗುತ್ತದೆ.
Comments are closed.