Neer Dose Karnataka
Take a fresh look at your lifestyle.

Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??

204

Tirupati: ತಿರುಪತಿ ತಿಮ್ಮಪ್ಪ ನಮ್ಮ ದೇಶದಲ್ಲಿ ಅತಿ ಹೆಚ್ಚು ಭಕ್ರರನ್ನು ಹೊಂದಿರುವ ದೇವರು ಎಂದರೆ ತಪ್ಪಲ್ಲ. ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ದೇಶ ವಿದೇಶಗಳಿಂದ ಜನರು ತಿರುಪತಿಗೆ ಬರುತ್ತಾರೆ. ತಿರುಪತಿಗೆ ಬರುವ ಜನರು ದೇವರ ದರ್ಶನ ಪಡೆಯಲು ದಿನಗಟ್ಟಲೇ ಕಾಯಬೇಕಾಗುತ್ತದೆ ಎನ್ನುವ ವಿಷಯ ಗೊತ್ತೇ ಇದೆ. ಈಗಂತೂ ದರ್ಶನದ ಸಮಯ ಸುಮಾರು 48 ಗಂಟೆಗಳ ಸಮಯ ತಲುಪುತ್ತಿದೆ..

ಈ ಕಾರಣಕ್ಕೆ ಈಗ ಬೆಂಗಳೂರಿನಿಂದ ತಿರುಪತಿಗೆ ಹೋಗಿಬರಲು ಹೊಸ ವ್ಯವಸ್ಥೆಯನ್ನು ತರಲಾಗುತ್ತಿದೆ. ಫ್ಲೈಬ್ಲೇಡ್ ವೆಂಚರ್ಸ್ ಸಂಸ್ಥೆಯು ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡಲಿದೆ. ಈ ಸೇವೆಯ ಮೂಲಕ ನೀವು ಒಂದೇ ದಿನದಲ್ಲಿ ತಿರುಪತಿಗೆ ಹೋಗಿ ವಾಪಸ್ ಬೆಂಗಳೂರಿಗೆ ಬರಬಹುದು. ಸಾಮಾನ್ಯವಾಗಿ ತಿರುಪತಿಗೆ ಹೋಗಲು 5 ಗಂಟೆ ಸಮಯ ಬೇಕಾಗುತ್ತದೆ, ಹೆಲಿಕಾಪ್ಟರ್ ನಲ್ಲಿ ಒಂದೂವರೆ ಗಂಟೆಗಳಲ್ಲಿ ತಿರುಪತಿ ತಲುಪುತ್ತೀರಿ. ಇದನ್ನು ಓದಿ..Costly Headphones: ನಿಮ್ಮ ಮನೆ ಮಠ ಆಸ್ತಿ ಮಾರಿದರೂ ಈ ಹೆಡ್ ಫೋನ್ ಗಳನ್ನೂ ಖರೀದಿ ಮಾಡಲು ಆಗಲ್ಲ. ಅದೆಷ್ಟು ಲಕ್ಷ ಗೊತ್ತೇ? ಈ ಹೆಡ್ ಫೋನ್ ಗಳಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ??

ಬೆಂಗಳೂರು ಹಾಗೂ ತಿರುಪತಿ ವಿಮಾನ ನಿಲ್ದಾಣಗಳ ನಡುವೆ ಈ ಪ್ಲಾನ್ ಮಾಡಿಕೊಳ್ಳಲಾಗಿದೆ..ಫ್ಲೈಬ್ಲೆಸ್ ಇಂಡಿಯಾ, ಹಂಚ್ ವೆಂಚರ್ಸ್ ಹಾಗೂ ಬ್ಲೇಡ್ ಏರ್ ಮೊಬೈಲಿಟಿ ಜೊತೆಯಾಗಿ ಶುರು ಮಾಡಿರುವ ಕಂಪನಿ ಈ ಸೇವೆ ಒದಗಿಸಲಿದೆ..ಬೆಂಗಳೂರು ಹಾಗೂ ತಿರುಪತಿ ಏರ್ಪೋರ್ಟ್ ತಲುಪುವ ಸೇವೆ ಶುರುವಾಗಿದ್ದು, ಇದಕ್ಕೆ ನೀವು ₹3,50,000 ಪಾವತಿ ಮಾಡಬೇಕು. ಒಂದು ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣ ಮಾಡಬಹುದು. ಬೇಡಿಕೆಯ ಆಧಾರದ ಮೇಲೆ ಈ ಸೇವೆ ಸಿಗುತ್ತದೆ, ಇದು ಕ್ರೌಡ್ ಸೋರ್ಸ್ ಅಥವಾ ಚಾರ್ಟರ್ಡ್ ಆಗಿರುತ್ತದೆ.

ಇದರಲ್ಲಿ ಪ್ರಯಾಣಿಸುವವರಿಗೆ ಸುಲಭ ಸೌಲಭ್ಯ ಸಿಗುತ್ತದೆ. ಈ ಸೇವೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ ಎನ್ನಲಾಗಿದೆ.. ಬೆಂಗಳೂರು ಹಾಗೂ ಹತ್ತಿರದ ಊರುಗಳ ಭಕ್ತರು ಇದರ ಪ್ರಯೋಜನ ಪಡೆಯಬಹುದು. ಹೆಲಿಕಾಪ್ಟರ್ ಬೆಂಗಳೂರಿನಿಂದ 09:15 ಇಂದ 9:30ರ ಒಳಗೆ ಹೊರಾಡುತ್ತದೆ. ಕೆಲವೇ ಸಮಯದಲ್ಲಿ ತಿರುಪತಿ ತಲುಪುತ್ತಾರೆ, ಅಂದು ಸಂಜೆ 4:00 ಇಂದ 4:15ರ ವೇಳೆಗೆ ತಿರುಪತಿ ಇಂದ ವಾಪಸ್ ಹೊರಡಬೇಕಾಗುತ್ತದೆ. ಈ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದ ಒಳಗಡೆಯೇ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಭರವಸೆ ತಂದಿದೆ. ಇದನ್ನು ಓದಿ..Free Bus Pass: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಕೊಡುತ್ತಾರೆಯೇ? ರಾಮ ಲಿಂಗ ರೆಡ್ಡಿ ಯವರು ಹೇಳಿದ್ದೇನು ಗೊತ್ತೇ??

Leave A Reply

Your email address will not be published.