RaviChandran: ರವಿಚಂದ್ರನ್ ರವರು ಯಾರಿಗೂ ಕಾಯುತ್ತಿರಲಿಲ್ಲ, ಆದರೆ ಆ ನಟಿಗೆ ಮಾತ್ರ ಕಾಯ್ದು, ಸಿನಿಮಾ ಮಾಡಿದ್ದರು, ಆ ನಟಿ ಯಾರು ಗೊತ್ತೇ??
Ravichandran: ನಮ್ಮ ಚಂದನವನದ ಶೋಮ್ಯಾನ್ ಕನಸುಗಾರ ರವಿಚಂದ್ರನ್ ಅವರ ಸಿನಿಮಾಗಳು ಎಷ್ಟು ಕಲರ್ ಫುಲ್ ಆಗಿರುತ್ತದೆ ಎಂದು ನಮಗೆಲ್ಲ ಗೊತ್ತಿದೆ. ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ದೃಶ್ಯ ಕಾವ್ಯ ಎಂದು ಹೇಳಬಹುದು. ರವಿಚಂದ್ರನ್ ಅವರು ಯಾವತ್ತಿಗೂ ಪ್ರೇಕ್ಷಕರಿಗೆ ಅತ್ಯುತ್ತಮವಾದ ಫೀಲ್ ಕೊಡಬೇಕು ಎಂದು ಕೆಲಸ ಮಾಡುತ್ತಿದ್ದರು. ಒಂದು ವೇಳೆ ತಾವು ಶೂಟಿಂಗ್ ಮಾಡಿದ ದೃಶ್ಯ ಇಷ್ಟವಾಗದೆ ಹೋದರೆ, ಎಷ್ಟೇ ದುಡ್ಡು ಖರ್ಚಾಗಿದ್ದರು ಯೋಚನೆ ಮಾಡದೆ, ರೀಶೂಟ್ ಮಾಡುತ್ತಿದ್ದರು.

ಸಿನಿಮಾದಲ್ಲಿ ಯಾವ ಸ್ಟಾರ್ ಹೀರೋ ಅಥವಾ ಸ್ಟಾರ್ ಹೀರೋಯಿನ್ ಇದ್ದರು ತಲೆಕೆಡಿಸಿಕೊಳ್ಳದೆ ಮತ್ತೆ ಶೂಟಿಂಗ್ ಮಾಡುತ್ತಿದ್ದರು. ಯಾವುದೇ ಸಮಯದಲ್ಲೂ ಯಾರಿಗೂ ಕಾಯದ ರವಿಚಂದ್ರನ್ ಅವರು ತಮ್ಮ ಸಿನಿಮಾ ಒಂದರ ರೀಶೂಟ್ ಗಾಗಿ ಈ ಒಬ್ಬ ಹೀರೋಯಿನ್ ಗೋಸ್ಕರ ತಿಂಗಳುಗಟ್ಟಲೇ ಕಾದಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಚಂದನವನದ ಬಂಗಾರದ ಬೊಂಬೆ ನಟಿ ಸೌಂದರ್ಯ. ಇವರು ಕನ್ನಡದ ಹುಡುಗಿಯಾಗಿ ಕನ್ನಡದಲ್ಲಿ ನಟಿಸಿದ್ದು ಕಡಿಮೆ, ಆದರೆ ನಟಿಸಿರುವ ಎಲ್ಲಾ ಸಿನಿಮಾಗಳು ಒಳ್ಳೆಯ ಹೆಸರು ಪಡೆದಿದೆ. ಇದನ್ನು ಓದಿ..Anjali: ನಿರ್ದೇಶಕರು ಮುಂಬೈ ನಟಿಯರ ಹಿಂದೆ ಬೀಳುವುದು ಇದಕ್ಕೇನಾ?? ನಟಿ ಅಂಜಲಿ, ಮುಂಬೈ ನಟಿಯರ ಕಮಿಟೆಮೆಂಟ್ ಬಗ್ಗೆ ಹೇಳಿದ್ದೇನು ಗೊತ್ತೇ? ಒಹ್ ಇದೆಲ್ಲ ನಡೆಯುತ್ತಾ.
ರವಿಚಂದ್ರನ್ ಹಾಗೂ ಸೌಂದರ್ಯ ಅವರು ಜೊತೆಯಾಗಿ ನಟಿಸಿದ ಸಿನಿಮಾ ಸಿಪಾಯಿ, ಈ ಸಿನಿಮಾದ ಬಹಳ ಫೇಮಸ್ ಹಾಡು ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ಹಾಡು, ಸಿನಿಮಾ ಪೂರ್ತಿ ಮುಗಿದ ಮೇಲೆ ರವಿಚಂದ್ರನ್ ಅವರು ಕೂತು ಸಿನಿಮಾ ನೋಡುವಾಗ, ಈ ಹಾಡಿನ ಕೆಲವು ಪೋರ್ಶನ್ ಗಳು ಖುದ್ದು ರವಿಚಂದ್ರನ್ ಅವರಿಗೆ ಇಷ್ಟವಾಗಲಿಲ್ಲ. ತಕ್ಷಣವೇ ಸೌಂದರ್ಯ ಅವರಿಗೆ ಕರೆಮಾಡಿ ರೀಶೂಟ್ ಮಾಡಬೇಕು, ಅದಕ್ಕಾಗಿ ಕೆಲವು ದಿನಗಳ ಡೇಟ್ಸ್ ಬೇಕು ಎಂದು ಕೇಳಿದರಂತೆ. ಆದರೆ ಆ ವೇಳೆ ಸೌಂದರ್ಯ ಅವರು..
ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲಿ ನಟಿಸುತ್ತಾ ಬ್ಯುಸಿ ಇದ್ದ ಸ್ಟಾರ್ ನಟಿ. ತಕ್ಷಣಕ್ಕೆ ಡೇಟ್ಸ್ ಇಲ್ಲ ಎಂದು ಸೌಂದರ್ಯ ಅವರು ತುಂಬಾ ಬೇಸರ ಮಾಡಿಕೊಂಡಿದ್ದರಂತೆ. ಆಗ ರವಿಚಂದ್ರನ್ ಅವರು ಬೇರೆ ದಾರಿ ಇಲ್ಲದೆ, ರವಿಚಂದ್ರನ್ ಅವರು ತಿಂಗಳುಗಟ್ಟಲೆ ಸೌಂದರ್ಯ ಅವರ ಡೇಟ್ಸ್ ಗಾಗಿ ಕಾಯಬೇಕಾಯಿತು. ಕೊನೆಗೆ ಸೌಂದರ್ಯ ಅವರ ಡೇಟ್ಸ್ ಸಿಕ್ಕಿ, ಬಂಗಾರದ ಬೊಂಬೆ ಹಾಡನ್ನು ಮತ್ತೆ ಶೂಟ್ ಮಾಡಲಾಯಿತು. ಇಂದಿಗೂ ಕೂಡ ಈ ಹಾಡು ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??