Luna Bike: ಮತ್ತೆ ಬರುತ್ತಿದೆ ಲೂನಾ ಬೈಕ್- ಆದರೆ ಈ ಬಾರಿ ವೇಗ ಜಾಸ್ತಿ, ಬೆಲೆ ಕಡಿಮೆ, ವಿಶೇಷತೆ ಮಾತ್ರ ಜಾಸ್ತಿ- ಏನೆಲ್ಲಾ ಇರಲಿದೆ ಗೊತ್ತೇ?
Luna Bike: ಈಗ ಎಲ್ಲಾ ಕಡೆ ಎಲೆಕ್ಟ್ರಿಕ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಹುತೇಕ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಕೂಡ ತಮ್ಮದೇ ಸ್ಟೈಲ್ ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಲಿದೆ. ಈ ಹಿಂದೆ ಜನರಿಗೆ ಬಹಳ ಇಷ್ಟವಾಗಿ, ಸ್ಪರ್ಧೆಗಳಿಂದ ಹಿಂದೆ ಇದ್ದ ವಾಹನಗಳು ಸಹ ಈಗ ಎಲೆಕ್ಟ್ರಿಕ್ ರೂಪ ಪಡೆದು, ಮಾರ್ಕೆಟ್ ಗೆ ವಾಪಸ್ ಬರುತ್ತಿದೆ. ಇತ್ತೀಚೆಗೆ ಬಜಾಜ್ ಕಂಪನಿ ಚೇತಕ್ ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈಗ LML ಸಹ ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ. ಈ ವಾಹನಕ್ಕೆ ಯಾವುದೇ ಬೇರೆ ಕಂಪನಿಯ ವಾಹನ ಸ್ಪರ್ಧೆ ಕೊಡಲು ಸಾಧ್ಯ ಆಗಿಲ್ಲ..
ಇದರಲ್ಲಿ ಫ್ಯುಲ್ ಖಾಲಿ ಆದರೆ, ಸೈಕಲ್ ರೀತಿ ಓಡಿಸಬಹುದಿತ್ತು, ಹಾಗಾಗಿ ಈ ವಾಹನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಕೆಲವು ವರ್ಷಗಳಿಂದ ಬೈಕ್ ಗಳ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದೆ. ಹಾಗಾಗಿ ಲೂನಾ ಈ ಬದಲಾವಣೆಯಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಈಗ ಕೈನೆಟಿಕ್ ಲೂನಾಗೆ ಸಂಬಂಧಿಸಿದ ಹಾಗೆ ಒಂದು ಹೊಸ ವಿಚಾರ ಗೊತ್ತಾಗಿದೆ. ಲೂನಾ ಇನ್ನು ಕೆಲವೇ ಸಮಯದಲ್ಲಿ ಕೈನೆಟಿಕ್ ಇ ಲೂನಾ ಆಗಿ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಕೈನೆಟಿಕ್ ಗ್ರೀನ್ ಕಂಪನಿ ಪ್ರಕಟಿಸಿದೆ. ಮೊದಲಿದ್ದ ಲೂನಾ ಹಾಗೆ ಇದು ಕೂಡ ಅದ್ಭುತವಾಗಿರಲಿದೆಯಂತೆ. TVS XL 100 ಗೆ ಇದು ಕಾಂಪಿಟೇಶನ್ ಕೊಡುತ್ತದೆ ಎನ್ನಲಾಗಿದೆ.. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?
ಕೈನೆಟಿಕ್ ಇ ಲೂನಾ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಬೇರೆ ಎಲೆಕ್ಟ್ರಿಕ್ ವಾಹನಗಳ ಸ್ಪೀಡ್ ಸ್ಲೋ ಇರುತ್ತದೆ, ಆದರೆ ಕೈನೆಟಿಕ್ ಇ ಲೂನಾ 50ಕಿಮೀ ಇಂದ 100 ಕಿಮೀ ವೇಗದಲ್ಲಿ ಚಲಿಸುತ್ತದೆ, FAME2 ಸಬ್ಸಿಸಿಡಿ ಅರ್ಹತೆ ಪಡೆಯುತ್ತದೆ ಎಂದಿದ್ದಾರೆ. ಇಲೂನದಲ್ಲಿ ಬದಲಾಯಿಸಬಹುದಾದ ಬ್ಯಾಟರಿಗಳನ್ನು ಅಳವಡಿಸಲಾಗುತ್ತದೆ. ಫಾಸ್ಟ್ ಚಾರ್ಜಿಂಗ್ ಬ್ಯಾಟರಿಗಿಂತ ಇದು ವೇಗವಾಗಿ ಕೆಲಕ್ಸ ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಸರಕುಗಳನ್ನು ಸಾಗಿಸಲಿ ಇದು ಸೂಕ್ತವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ..ಇದು ಟಾಪ್ ಬಾಕೆ, ಕ್ಯಾರಿಯರ್ ಗಳು, ಕಿಸ್ ಬಾಕ್ಸ್ ಗಳನ್ನು ವ್ಯವಸ್ಥೆ ಮಾಡುವ ಸಾಮರ್ಥ್ಯ ಹೊಂದಿದೆ. 2023ರ ಜುಲೈ ವೇಳೆಗೆ ₹80,000 ಇಂದ ₹90,000 ವರೆಗಿನ ಬೆಲೆಯಲ್ಲಿ ಬಿಡುಗಡೆ ಆಗಲಿದೆ.
ಭಾರತದಲ್ಲಿ 50ಸಿಸಿ ಇಂಜಿನ್ ಹೊಂದಿರುವ ಮೊದಲ ಮೊಪೆಡ್ ಆಗಿದೆ ಲೂನಾ.. ಇದು ಮೊದಲು ಬಿಡುಗಡೆ ಆಗಿದ್ದು 1972ರಲ್ಲಿ, ಮಾರ್ಕೆಟ್ ಗೆ ಬಂದ ಕೆಲವೇ ಸಮಯದಲ್ಲಿ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಬಳಿಕ ಹಲವು ಮೊಪೆಡ್ ಗಳು ಬಂದರು ಸಹ ಲೂನಾ TFR, ಡಬಲ್ ಪ್ಲಸ್, ವಿಂಗ್ಸ್, ಮ್ಯಾಗ್ನಮ್ ಹಾಗೂ ಸೂಪರ್ ಎನ್ನುವ ಬೇರೆ ಬೇರೆ ರೂಪಾಂತರಗಳಲ್ಲಿ ಇದನ್ನು ಪರಿಚಯಿಸಲಾಯಿತು. ಲೂನಾ ಮೊದಲಿಗೆ ಮಾರ್ಕೆಟ್ ಗೆ ಬಂದಾಗ ಇದರ ಬಲೆ ₹2000 ಆಗಿತ್ತು. ಮೂರು ದಶಕಗಳ ಕಾಲ ಚಾಲ್ತಿಯಲ್ಲಿದ್ದ ಈ ಮೊಪೆಡ್ ತಯಾರಿಕೆಯನ್ನು 2000 ಇಸವಿಯಲ್ಲಿ ನಿಲ್ಲಿಸಲಾಯಿತು. ಇದನ್ನು ಓದಿ..Gold Rate Today: ಮುಂದುವರೆದ ಚಿನ್ನದ ಕುಸಿತ- ಕರ್ನಾಟಕದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ- ಅಂಗಡಿಗೆ ಮುಗಿಬೀಳುತ್ತಿರುವ ಬಡವರು. ಎಷ್ಟಾಗಿದೆ ಗೊತ್ತೆ?
Comments are closed.