Neer Dose Karnataka
Take a fresh look at your lifestyle.

Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

Business Idea: ಹೆಣ್ಣುಮಕ್ಕಳು ಮದುವೆ ಆಗುವುದಕ್ಕಿಂತ ಮೊದಲು ಕೆಲಸ ಮಾಡುತ್ತಾರೆ, ಅವರಿಗೆ ಸ್ವಾತಂತ್ರ್ಯ ಇರುತ್ತದೆ. ಆದರೆ ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಕೆಲಸ ಮಾಡಲು ಎಲ್ಲಾ ಕುಟುಂಬಗಳಲ್ಲಿಯೂ ಅವಕಾಶ ಕೊಡುವುದಿಲ್ಲ. ಕುಟುಂಬವನ್ನು ನೋಡಿಕೊಳ್ಳುವುದರಲ್ಲೇ ಹೆಚ್ಚಿನ ಸಮಯ ಕಳೆದುಹೋಗುತ್ತದೆ. ಹಾಗೆಯೇ ಎಲ್ಲಾ ಅತ್ತೆಯರು ಸೊಸೆ ಹೊರಗಡೆ ಹೋಗಿ ಕೆಲಸ ಮಾಡುವುದನ್ನು ಒಪ್ಪುವುದಿಲ್ಲ. ಮನೆಯಲ್ಲಿ ಇದ್ದು ಅಡುಗೆ ಮಾಡಲಿ ಎಂದು ಹೇಳುತ್ತಾರೆ.

ಈ ರೀತಿ ಮನೆಯಲ್ಲಿರುವ ಹೊರಗಡೆ ಬರಲು ಸಾಧ್ಯವಾಗದ ಹೆಣ್ಣುಮಕ್ಕಳು ಮನೆಯಲ್ಲೇ ಕುಳಿತು ಒಂದಷ್ಟು ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಈ ರೀತಿ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬೇಕು ಎಂದುಕೊಂಡಿರುವ ಹೆಣ್ಣುಮಕ್ಕಳಿಗಾಗಿ ಒಂದು ಒಳ್ಳೆಯ ಐಡಿಯಾ ತಿಳಿಸುತ್ತೇವೆ. ಇದು ನೀವು ಮನೆಯಲ್ಲಿ ಶುರು ಮಾಡಬಹುದಾದ ಒಂದು ವ್ಯವಹಾರ ಆಗಿದೆ. ಇದೊಂದು ಪ್ರೀತಿಯಿಂದ ಮಾಡುವ ಕೆಲಸ ಆಗಿದೆ. ಈಗ ಸಿಟಿಗಳಲ್ಲಿ ವಾಸ ಮಾಡುವವರು, ತಂದೆ ತಾಯಿ ಇಬ್ಬರು ಕೂಡ ಕೆಲಸ ಮಾಡುತ್ತಾರೆ. ಇದನ್ನು ಓದಿ..Buying New Home: ಟೋಪಿ ಹಾಕುವ ಈ ಜಗತ್ತಿನಲ್ಲಿ, ಹೊಸ ಮನೆ ಖರೀದಿ ಮಾಡುವ ಮುನ್ನ ಈ ಚಿಕ್ಕ ವಿಷಯಗಳನ್ನು ತಿಳಿದುಕೊಂಡು ಲಕ್ಷ ಲಕ್ಷ ಉಳಿಸಿ. ಏನು ಗೊತ್ತೇ?

ಅವರಿಗೆ ಮಕ್ಕಳನ್ನು ಬೆಳೆಸುವುದು ಅವರಿಗೆ ಕಷ್ಟ ಆಗುತ್ತದೆ. ಈ ರೀತಿ ಇರುವವರು ತಮ್ಮ ಮಕ್ಕಳನ್ನು ಡೇ ಕೇರ್ ಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ನೀವು ಈ ರೀತಿ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ಶುರು ಮಾಡಬಹುದು. ತಂದೆ ತಾಯಿ ಕೆಲಸಕ್ಕೆ ಹೋದಾಗ, ನೀವು ನಿಮ್ಮ ಮನೆಯಲ್ಲಿ ಮಕ್ಕಳಿಗೆ ಬೇಕಾದ ಆಟದ ವಸ್ತುಗಳನ್ನು ಇಟ್ಟು ಮಕ್ಕಳನ್ನು ನೋಡಿಕೊಳ್ಳಬಹುದು.

ನೀವು ಶುರು ಮಾಡುವ ಡೇ ಕೇರ್ ಸೆಂಟರ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಬೇಕು ಎಂದರೆ, ಜನರಿಗೆ ನಿಮ್ಮ ಮೇಲೆ ವಿಶ್ವಾಸ ಬರಬೇಕು. ತಂದೆ ತಾಯಿ ಬರುವವರೆಗೂ ಮಕ್ಕಳನ್ನು ನೋಡಿಕೊಳ್ಳಬೇಕು. ಹಾಗೆಯೇ ಅವರಿಗೆ ಇಷ್ಟ ಅಗುವಂಥ ತಿಂಡಿಗಳನ್ನು ಮಾಡಿ ತಿನ್ನಿಸಬೇಕು. ಹೀಗೆ ಬೇಬಿ ಡೇ ಕೇರ್ ಸೆಂಟರ್ ಗಳನ್ನು ಶುರು ಮಾಡಲು ಹೆಚ್ಚಿನ ಖರ್ಚು ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿ ಒಂದು ರೂಮ್ ಹಾಗೂ ಕೆಲವು ಆಟಿಕೆಗಳು ಸಹ ಬೇಕು. ಡೇ ಕೇರ್ ಸೆಂಟರ್ ಶುರು ಮಾಡುವುದಕ್ಕೆ ₹50,000 ಇಂದ ₹1 ಲಕ್ಷ ರೂಪಾಯಿವರೆಗು ಹಣ ಗಳಿಸಬಹುದು. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

Comments are closed.