Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?
Kubera: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು ದೊಡ್ಡವರು ಸಾಮಾನ್ಯವಾಗಿ ಹೇಳುತ್ತಾರೆ. ಇದು ಮನುಷ್ಯರಿಗೆ ಹೇಳುವ ಮಾತು, ಏಕೆಂದರೆ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಎರಡು ಕೂಡ ಕಷ್ಟ, ಸಾಕಷ್ಟು ಹಣ ಖರ್ಚಾಗುತ್ತದೆ. ಹಲವರು ಸಾಲ ಪಡೆದು ಮನೆ ಕಟ್ಟುತ್ತಾರೆ ಅಥವಾ ಮದುವೆ ಆಗುತ್ತಾರೆ. ಹೀಗೆ ಸಾಲ ಪಡೆದು ಮದುವೆ ಆಗಿದ್ದು ಮನುಷ್ಯರು ಮಾತ್ರವಲ್ಲ ದೇವರು ಕೂಡ ಹೌದು. ಪುರಾಣಗಳಲ್ಲಿ ಹೇಳಿರುವ ಹಾಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಕೂಡ ಸಾಲ ಪಡೆದು ಮದುವೆಯಾದರು, ಅವರಿಗು ಈ ಋಣ ತಪ್ಪಿಲ್ಲ ಎಂದರೆ ನೀವು ನಂಬಲೇಬೇಕು. ಇದಕ್ಕಾಗಿ ವೆಂಕಟೇಶ್ವರ ಸ್ವಾಮಿ ಸಾಲಕ್ಕೆ ಪತ್ರವನ್ನು ಸಹ ಬರೆದುಕೊಟ್ಟಿದ್ದರು, ಆ ಪತ್ರ ಈಗ ಎಲ್ಲಿದೆ ಗೊತ್ತಾ?
ಶ್ರೀನಿವಾಸ ಋಣದಲ್ಲಿ ಇರುವುದಕ್ಕೆ ಒಂದು ಕಾರಣ ಇದೆ. ಹೆಣ್ಣಿನ ಕಡೆಯವರು ಅತ್ಯಂತ ಶ್ರೀಮಂತರಾಗಿದ್ದರು. ಆಕಾಶರಾಜನ ಜೊತೆಗೆ ಪ್ರೀತಿ, ರಾಜ ಎಲ್ಲೇ ಇದ್ದರೂ ರಾಜನೇ, ಹಣ ಇದ್ದರೆ ಮಾತ್ರ ರಾಜ ಅಲ್ಲ ಎನ್ನುವುದು ಅಮ್ಮನವರು ಹೇಳಿದ ಮಾತು. ಬ್ರಹ್ಮದೇವ, ಅವರ ಪತ್ನಿ, ಋಷಿಗಳು ಎಲ್ಲರೂ ಶ್ರೀನಿವಾಸನನ್ನು ಕಲ್ಯಾಣ ಮೂರ್ತಿಯ ರೂಪದಲ್ಲಿ ನೋಡಲು ಬೆಟ್ಟಕ್ಕೆ ಬಂದರು. ಮದುವೆಗೆ ಬಂದವರಿಗೆ ಆಹಾರ ವ್ಯವಸ್ಥೆ ಮಾಡಬೇಕು, ನಿಧಿ ವ್ಯವಸ್ಥೆ ಮಾಡಬೇಕಿತ್ತು. ಆಗ ಏನು ಮಾಡುವುದು ಎಂದು ಶ್ರೀನಿವಾಸ ಯೋಚಿಸುವಾಗ, ವರಾಹಸ್ವಾಮಿ ಪಕ್ಕಕ್ಕೆ ಕರೆದು ಕ್ಷೇತ್ರದಲ್ಲಿದ್ದ ರಾವಿ ಮರಕ್ಕೆ ಕರೆದುಕೊಂಡು ಹೋದರು. ಆಗ ಶಿವ, ನಿನ್ನ ಹತ್ತಿರ ಹಣವಿಲ್ಲ ಎಂದರೆ ಪರವಾಗಿಲ್ಲ, ನನಗೆ ಒಬ್ಬ ಸ್ನೇಹಿತ ಇದ್ದಾನೆ ಅವನ ಹತ್ತಿರ ತುಂಬಾ ಹಣವಿದೆ. ಅವನ ಬಳಿ ಸಾಲ ಪಡೆಯಬಹುದು ಎಂದು ಶಿವ ಸಲಹೆ ನೀಡಿದನು. ಇದನ್ನು ಓದಿ..Best Courses: ಕಡಿಮೆ ಓದಿದ್ದರೂ ಬೇಗ ಕೆಲಸ ಪಡೆಯಬೇಕು ಎಂದರೆ ಈ ಕೋರ್ಸ್ ಗಳನ್ನೂ ಮಾಡಿ.- ಕೈತುಂಬಾ ಸಂಬಳದ ಜೊತೆ ಲೈಫ್ ಸೆಟ್ಲ್ ಮಾಡಿಕೊಳ್ಳಿ.
ಈ ಸಲಹೆಯ ಮೇರೆಗೆ ಶ್ರೀನಿವಾಸ ಸ್ವಾಮಿ ವರಾಹ ಸ್ವಾಮಿ ಕ್ಷೇತ್ರದಲ್ಲಿ ಮರದ ಕೆಳಗೆ ನಿಂತು ಕುಬೇರನ ಹತ್ತಿರ ರಹಸ್ಯವಾಗಿ ಹಣ ಕೇಳಿದರು. ಆಗ ಕುಬೇರನು ಪತ್ರ ಬರೆದು ಕೊಟ್ಟರು. ನೂರಕ್ಕೆ 10ರ ಹಾಗೆ ಬಡ್ಡಿ ಕೊಡುತ್ತೇನೆ, ನಿಮ್ಮ ಋಣ ತೀರಿಸುತ್ತೇನೆ, ಇದಕ್ಕೆ ಬ್ರಹ್ಮದೇವ ಸಾಕ್ಷಿ ಎಂದು ಬರೆದಿದ್ದರಿ. ಈ ಪ್ರತಿಮೆ ಈಗ ಆದಿವರಾಹಸ್ವಾಮಿಯ ಪೀಠದ ಅಡಿಯಲ್ಲಿದೆ. ಈ ದಾಖಲೆಯನ್ನು ಒಂದು ಮ್ಯೂಸಿಯಂ ನಲ್ಲಿ ಇರಿಸಲಾಗಿದೆ. ಆ ಸ್ಥಳ ಪುರಾಣದ ಪ್ರಕಾರ, ಶ್ರೀನಿವಾಸ ದೇವನು ಪದ್ಮಾವತಿಯ ಜೊತೆಗೆ ಮದುವೆಯಾಗಲು ಕುಬೇರನಿಂದ 1 ಕೋಟಿ, 14 ಲಕ್ಷ ಚಿನ್ನದ ನಾಣ್ಯಗಳನ್ನು ಸಾಲ ಪಡೆದಿದ್ದರು. ಹಾಗೂ ಶೇಷಾದ್ರಿ ಬೆಟ್ಟದ ಮೇಲೆ ಸ್ವರ್ಗವನ್ನೇ ಸೃಷ್ಟಿಸಬೇಕು ಎಂದು ದೇವಶಿಲ್ಪಿ ವಿಶ್ವಕರ್ಮನಿಗೆ ಕೇಳಲಾಯಿತು. ಸಾಲವನ್ನು ಭಕ್ತರು ಕೊಡುವ ಹಣದಿಂದ ತೀರಿಸುತ್ತೇನೆ ಎಂದು ಹೇಳುತ್ತಾರೆ.
ಭಕ್ತರು ವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗದ ದೇವರು ಎಂದು ಹೇಳುತ್ತಾರೆ. ಪ್ರತಿದಿನ ಲಕ್ಷಾಂತರ ಭಕ್ತರು ಏಳು ಬೆಟ್ಟಗಳನ್ನು ಹತ್ತಿ ದೇವರ ದರ್ಶನ ಪಡೆಯುತ್ತಾರೆ. ತಿರುಮಲ ದೇವಸ್ಥಾನದಲ್ಲಿ ದೇವರ ಹುಂಡಿ ಯಾವಾಗಲೂ ಕಾಣಿಕೆಗಳಿಂದ ತುಂಬಿರುತ್ತದೆ. ಸಾಮಾನ್ಯ ಜನರಿಂದ ಹಿಡಿದು, ಶ್ರೀಮಂತ ಜನರ ವರೆಗು ಎಲ್ಲರು ಕೂಡ ದೇವಸ್ಥಾನಕ್ಕೆ ಬಂದು, ತಮ್ಮ ಕೈಲಾದ ಕಾಣಿಕೆಯನ್ನು ದೇವರಿಗೆ ಅರ್ಪಿಸುತ್ತಾರೆ. 17ನೇ ಶತಮಾನದಿಂದಲು ಇಲ್ಲಿಗೆ ಬಂದಿರುವ ಭಕ್ತರು ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಇತಿಹಾಸದ ಪ್ರಕಡೆಯ ತಿಳಿದುಬಂದಿದೆ. ಇದನ್ನು ಓದಿ..AI: AI ಬಂದಾಗಿದೆ- ಇನ್ನು ಹತ್ತು ವರ್ಷಗಳಲ್ಲಿ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಗೊತ್ತೇ? ತಿಳಿದರೇ ಮೈಂಡ್ ಬ್ಲಾಕ್ ಆಗುತ್ತದೆ.
Comments are closed.