Neer Dose Karnataka
Take a fresh look at your lifestyle.

Adipurush: ಆದಿಪುರುಷ್ ಟ್ರೊಲ್ ಆಗುತ್ತಿರುವಾಗ ಪ್ರಭಾಸ್ ಎಲ್ಲೂ ಕಾಣಿಸಿಕೊನಿಲ್ಲ, ಯಾಕೆ ಇದುವರೆಗೂ ಸೈಲೆಂಟ್ ಗೊತ್ತೇ?

267

Adipurush: ಬಾಹುಬಲಿ ಸಿನಿಮಾ ಇಂದ ಗ್ಲೋಬಲ್ ಲೆವೆಲ್ ನಲ್ಲಿ ಗುರಿತಿಸಿಕೊಂಡಿದ್ದ ನಟ ಪ್ರಭಾಸ್ ಅವರು ನಂತರ ತೆರೆಕಂಡ ಸಿನಿಮಾಗಳಲ್ಲಿ ಸೋಲನ್ನೇ ಕಾಣುತ್ತಿದ್ದಾರೆ. ಪ್ರಭಾಸ್ ಅವರು ನಟಿಸಿದ ಸಲಾರ್ ಹಾಗೂ ರಾಧೆ ಶ್ಯಾಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಈ ಎರಡು ಸಿನಿಮಾಗಳ ನಂತರ ತೆರೆಕಂಡಿದ್ದು ಆದಿಪುರುಷ್. ರಾಮಾಯಣ ಆಧಾರಿತ ಕಥೆಯನ್ನು ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದರು.

ಜೂನ್ 16ರಂದು ಪ್ರಭಾಸ್ ಅವರ ಆದಿಪುರುಷ್ ಸಿನಿಮಾ ಬಿಡುಗಡೆ ಆಯಿತು. ಆದರೆ ಬಿಡುಗಡೆ ಆದ ನಂತರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿದವರು ರಾಮಾಯಣದ ಕಥೆಯನ್ನು ಬೇರೆ ರೀತಿಯಲ್ಲೇ ತೋರಿಸಲಾಗಿದೆ. ಪಾತ್ರಗಳ ರಚನೆಯೇ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವಾಗ ನಟ ಪ್ರಭಾಸ್ ಅವರು ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

ಸಿನಿಮಾ ಪ್ರಚಾರಕ್ಕೂ ಸಹ ಪ್ರಭಾಸ್ ಅವರು ಬಂದಿಲ್ಲ, ಸರಿಯಾಗಿ ಪ್ರಚಾರಕ್ಕೂ ಬರದ ಪ್ರಭಾಸ್ ಅವರು ಸಿನಿಮಾ ಬಿಡುಗಡೆ ಆಗುತ್ತಿದ್ದ ಹಾಗೆ ಗಾಯಬ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿವ್ಯೂ ನೋಡಿದ ಮೇಲೆ ಪ್ರಭಾಸ್ ಅವರಿಗೆ ಬೇಸರವಾಗಿ ಅಮರಿಕಾಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಅವರು ಈಗ ಒಂದು ಗೆಲುವಿಗಾಗಿ ಕಷ್ಟಪಡುತ್ತಿದ್ದಾರೆ. ಹಿಂದಿನ ಸಿನಿಮಾಗಳ ಫ್ಲಾಪ್ ಲಿಸ್ಟ್ ಗೆ ಆದಿಪುರುಷ್ ಸಹ ಸೇರ್ಪಡೆಯಾಗುವ ಎಲ್ಲಾ ಲಕ್ಷಣವಿದೆ.

ಪ್ರಭಾಸ್ ಅವರ ಅಭಿಮಾನಿಗಳು ಬೇಸರವಾಗಿದ್ದು, ಡಾರ್ಲಿಂಗ್ ಇವರನ್ನೆಲ್ಲಾ ನಂಬಿ ಮೋಸ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಿರ್ದೇಶಕ ಓಂ ರಾವತ್ ಮೇಲೆ ಹಾಗೂ ಆದಿಪುರುಷ್ ತಂಡದ ಮೇಲೆ ಪ್ರಭಾಸ್ ಅವರು ಕೋಪಗೊಂಡಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಈಗ ಚಿತ್ರೀಕರಣದಿಂದ ಬ್ರೇಕ್ ಪಡೆದು, ಅಮೆರಿಕಾಗೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನು ಓದಿ..Protest: ಸಿದ್ದು ಸರ್ಕಾರಕ್ಕೆ ಬಿಗ್ ಶಾಕ್- ಮೊದಲ ಬಾರಿಗೆ ಸರ್ಕಾದ ವಿರುದ್ಧ ತೊಡೆತಟ್ಟಿದವರು ಯಾರ್ಯಾರು ಗೊತ್ತೇ?? ಅದು ಯಾಕೆ ಗೊತ್ತೇ?

Leave A Reply

Your email address will not be published.