Neer Dose Karnataka
Take a fresh look at your lifestyle.

Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.

Law: ಕೆಲವು ಕೇಸ್ ಗಳಲ್ಲಿ ಹೆಣ್ಣುಮಕ್ಕಳು ಕಾನೂನನ್ನು (Law) ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, IPC ಸೆಕ್ಷನ್ 498A ದುರ್ಬಳಕೆ ಮಾಡಿಕೊಂಡಿರುವ ಹಾಗೆ ಒಡಿಶಾ (Odisha) ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ಕೇಸ್ ವಿಚಾರಣೆ ಸಮಯದಲ್ಲಿ ಈ ಮಹತ್ವದ ತೀರ್ಪು ನೀಡಿದೆ. ಅಷ್ಟಕ್ಕೂ ನಡೆದಿರುವುದು ಏನು ಎಂದರೆ, ಒಬ್ಬ ಮಹಿಳೆ ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಗಂಡನಿಂದ ದೌರ್ಜನ್ಯ ಆಗುತ್ತಿದೆ ಎಂದಿದ್ದಾರೆ. ಆದರೆ ವಿಚಾರಣೆ ನಡೆಸಿದಾಗ, ಆಕೆ ಆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ ಎಂದು ಗೊತ್ತಾಗಿದೆ.

indian law case updates against husbands
indian law case updates against husbands

ಕೋರ್ಟ್ ಗೆ ಈ ವಿಚಾರ ಗೊತ್ತಾದ ಬಳಿಕ ಈ ಕೇಸ್ ಅನ್ನು ವಜಾ ಗೊಳಿಸಿದೆ. ಇದು ಮಾತ್ರವಲ್ಲ ಅನೇಕ ಸಾರಿ ಮಹಿಳೆಯರು ತಮ್ಮ ಗಂಡಂದಿರ ಮೇಲೆ ಮನೆಯವರ ಮೆಲೆ ಒತ್ತಡ ಹಾಕುವುದಕ್ಕಾಗಿ ಕಾನೂನಿನ (Law) ದುರ್ಬಳಕೆ ಮಾಡುತ್ತಿದ್ದಾರೆ, 498A ಪ್ರಕರಣದಲ್ಲಿ ದೂರು ದಾಖಲಿಸಿ, ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ತಿಳಿಸಿದೆ. ಸೆಕ್ಷನ್ 498A ಅಂದರೆ ಏನು ಎಂದು ಮೊದಲು ತಿಳಿಯಬೇಕು.. ಮದುವೆ ಆಗಿರುವ ಹೆಣ್ಣುಮಕ್ಕಳು, ಗಂಡನಿಂದ ಅಥವಾ ಗಂಡನ ಮನೆಯವರಿಂದ ತೊಂದರೆ ಆಗುತ್ತಿದ್ದರೆ, ಅದು ಕಾನೂನಿನ (Law) ಪ್ರಕಾರ IPC ಸೆಕ್ಷನ್ 498A ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

ದೌರ್ಜನ್ಯ ತೊಂದರೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಎರಡು ರೀತಿಯಲ್ಲಿ ಇರಬಹುದು. ಆದರೆ ಅದು ದೈಹಿಕ ದೌರ್ಜನ್ಯ ತೊಂದರೆ ಎಂದೇ ಪರಿಗಣಿಸಲಾಗುತ್ತದೆ. ಇನ್ನು ಮಾನಸಿಕ ತೊಂದರೆ ಎಂದರೆ, ಕಿರುಕುಳ ಅಪಹಾಸ್ಯ ಕಿರುಕುಳ ಇಂಥ ನಡವಳಿಕೆ ಎನ್ನಲಾಗುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಅಪರಾಧವಾಗಿದೆ ಎನ್ನುವುದು ಸಾಬೀತಾದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತಾರೆ. ಹಾಗೆಯೇ ದಂಡ ಕೂಡ ಹಾಕುತ್ತಾರೆ.

ಈ ಕೇಸ್ ನ ಅಂಕಿ ಅಂಶ ಏನು ಹೇಳುತ್ತದೆ ಎಂದು ನೋಡುವುದಾದರೆ.. ನಮ್ಮ ದೇಶದ ಕಾನೂನಿನಲ್ಲಿ (Law) ಐಪಿಸಿ ಸೆಕ್ಷನ್ 498A ಅಡಿಯಲ್ಲಿ ದಾಖಲಾಗುತ್ತಿರುವ ಕೇಸ್ ಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ 30% ಗಿಂತ ಹೆಚ್ಚು ಮಹಿಳೆಯರು ಈ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸುತ್ತಿದ್ದಾರೆ. ರಾಷ್ಟ್ರ ಅಪರಾಧ ದಾಖಲೆಗಳ ಬ್ಯುರೋ (NCRB) ನೀಡಿರುವ ವರದಿಯ ಪ್ರಕಾರ… ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

ಭಾರತದಲ್ಲಿ 2021 ರಲ್ಲಿ ಈ ಸೆಕ್ಷನ್ ಅಡಿಯಲ್ಲಿ 1.36ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದೆ. 2020ರಲ್ಲಿ 1.11 ಲಕ್ಷ ಕೇಸ್ ಗಳು ದಾಖಲಾಗಿದ್ದವು. ಇಷ್ಟು ಕೇಸ್ ಗಳು ದಾಖಲಾಗಿದ್ದು, ಇವುಗಳ ಪೈಕಿ 100 ಕೇಸ್ ಗಳಲ್ಲಿ 17 ಕೇಸ್ ಗಳಲ್ಲಿ ಮಾತ್ರ ತಪ್ಪು ಮಾಡಿರುವವರಿಗೆ ಶಿಕ್ಷೆ ಸಿಕ್ಕಿದೆ. 2021ರಲ್ಲಿ ಕೋರ್ಟ್ ನಲ್ಲಿ 25,158 ಕೇಸ್ ಗಳ ವಿಚಾರಣೆ ನಡೆದಿದ್ದು, ಅದರಲ್ಲಿ 4,145 ಕೇಸ್ ಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

Comments are closed.