Neer Dose Karnataka
Take a fresh look at your lifestyle.

Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

Rules Change: ನಮ್ಮ ದೇಶದಲ್ಲಿ ಹಣದುಬ್ಬರದ ಬಿಸಿ ಬಡವರಿಗೆ ತಟ್ಟುವುದು ಗ್ಯಾರಂಟಿ ಆಗಿದೆ. ಜುಲೈ ತಿಂಗಳು ಶುರು ಆಗುತ್ತಿರುವುದಾಗಲೇ ಸಾಕಷ್ಟು ವಿಚಾರಗಳಲ್ಲಿ ಬದಲಾವಣೆ ಆಗಿ ಹೊಸ ರೂಲ್ಸ್ ಗಳು (Rules Change) ಬರುತ್ತಿದೆ. ಕಾನೂನು, ಆರ್ಥಿಕ ವಿಚಾರ, ಬ್ಯಾಂಕ್ ಹಾಗೂ ತೆರಿಗೆ ವಿಚಾರಗಳಲ್ಲಿ ನಿಯಮಗಳು ಬದಲಾಗುತ್ತಿದ್ದು (Rules Change) , ಇದು ನೇರವಾಗಿ ಜನರ ಹಣ ಕಟ್ ಆಗುವ ಸಾಧ್ಯತೆಯನ್ನೇ ತಿಳಿಸುತ್ತಿದೆ. ಇನ್ನುಮುಂದೆ ಬಡಜನರ ಹಾಗೂ ಮಧ್ಯಮ ವರ್ಗದ ಜನರ ಜೀವನ ಇನ್ನು ಕಷ್ಟವಾಗಲಿದೆ. ಹಾಗಿದ್ದರೆ ಯಾವೆಲ್ಲಾ ವಿಷಯಗಳಲ್ಲಿ ಬದಲಾವಣೆ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

rules change from july 1st
rules change from july 1st

ಪಾದರಕ್ಷೆಗಳ ವಿಷಯ :- ಇಂದಿನಿಂದ, ಅಂದರೆ ಜುಲೈ 1ರಿಂದ ನಮ್ಮ ದೇಶದಲ್ಲಿ ಕಳಪೆ ಗುಣಮಟ್ಟದ ಚಪ್ಪಲಿಗಳು ಹಾಗೂ ಶೂಗಳ ಮಾರಾಟವನ್ನು ನಿಷೇಧ ಮಾಡಲಾಗುತ್ತಿದೆ. ವಿಶ್ವ ವ್ಯಾಪಾರ ಸಂಸ್ಥೆಯ ನಿಯಮ ಬದಲಾವಣೆ ಇದಾಗಿದ್ದು, ನಮ್ಮ ಭಾರತ ದೇಶವು ಪಾದರಕ್ಷೆ ಘಟಕಗಳಿಗೆ ಗುಣಮಟ್ಟ ನಿಯಂತ್ರಣದ (QCO) ಆದೇಶವನ್ನು ಕಾರ್ಯರೂಪಕ್ಕೆ ತರಬೇಕು ಎಂದು ನಿರ್ಧಾರ ಮಾಡಿದೆ. ಇದರಲ್ಲಿ 27 ಪಾದರಕ್ಷೆಗಳನ್ನು ಸೇರಿಸಲಾಗಿದೆ. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.

ಎಲೆಕ್ಟ್ರಾನಿಕ್ ಉಪಕರಣಗಳು :- ಇಂದಿನಿಂದ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯಲ್ಲಿ ಇಳಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಎಲೆಕ್ಟ್ರಾನಿಕ್ಸ್ ಸಂಬಂಧಪಟ್ಟ ವಸ್ತುಗಳು ಕ್ಯಾಮೆರಾ ಮಾಡೆಲ್, ಸೆಮಿ ಕಂಡಕ್ಟರ್, ಸ್ಮಾರ್ಟ್ ಫೋನ್, ಟಿವಿ, ಫ್ರಿಡ್ಜ್ ಇದೆಲ್ಲದರ ಬೆಲೆಯಲ್ಲಿ ಇಳಿಕೆ ಕಾಣಬಹುದು.

ಟ್ರಾನ್ಸ್ಪೋರ್ಟ್ ನಿಯಮಗಳಲ್ಲಿ ಬದಲಾವಣೆ (Rules Change) :- ಜುಲೈ 2ರಿಂದ ಹೊಸ ನಿಯಮಗಳು ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಜಾರಿಗೆ ಬರಲಿದೆ.. ಅದೇನು ಎಂದರೆ, ಇನ್ನುಮುಂದೆ ಕಾರ್ ಗಳಲ್ಲಿ ಹಿಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವವರು ಕೂಡ ಸೀಟ್ ಬೆಲ್ಟ್ ಧರಿಸಬೇಕು, ಇದು ಕಡ್ಡಾಯ ನಿಯಮ ಬದಲಾವಣೆ ಆಗಿದೆ. ಇಡೀ ದೇಶದಲ್ಲಿ ಈ ನಿಯಮ ಅನ್ವಯಿಸುತ್ತದೆ. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

LPG ಗ್ಯಾಸ್ ಸಿಲಿಂಡರ್ ಬೆಲೆ :- ಸರ್ಕಾರದ ತೈಲ ಕಂಪನಿಗಳು ಪ್ರತಿದಿನ ಅಡುಗೆ ಅನಿಲದ ಬೆಲೆಯಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಜೂನ್ ನಲ್ಲಿ ಸಹ LPG ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಬದಲಾವಣೆ ಮಾಡಲಾಗಿತ್ತು, ಈ ತಿಂಗಳು ಕೂಡ LPG ಸಿಲಿಂಡರ್ ಗಳ ಬೆಲೆಯಲ್ಲಿ (Rules Change) ಮಾಡಲಾಗುತ್ತದೆ .

ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಅಪ್ಡೇಟ್ :- ಈ ಎರಡು ಕಾರ್ಡ್ ಗಳನ್ನು ಲಿಂಕ್ ಮಾಡಲು ನಿನ್ನೆ ಕೊನೆಯ ದಿನ ಆಗಿತ್ತು, ಇನ್ನು ಲಿಂಕ್ ಮಾಡದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಮಾಡಲಾಗುತ್ತದೆ. ಈಗ ನೀವು ITR ಫೈಲ್ ಮಾಡಲು ಸಾಧ್ಯವಿಲ್ಲ. ಹೀಗಾದರೆ ಬಾಕಿ ಉಳಿದಿರುವ ನಿಮ್ಮ ಪ್ರಕ್ರಿಯೆಗಳು ಮುಂದುವರೆಯುವುದಿಲ್ಲ. ಇದರಿಂದ ನೀವು ಕಟ್ಟುವ ಟ್ಯಾಕ್ಸ್ ಮೊತ್ತ ಕೂಡ ಜಾಸ್ತಿ ಇರುತ್ತದೆ (Rules Change) . ಇದನ್ನು ಓದಿ..Insta 360: ಸೋಶಿಯಲ್ ಮೀಡಿಯಾ ಗೆ ಅದ್ಭುತ ವಿಡಿಯೋ ಮಾಡಲು ಬಳಸುವ ಈ Insta360 ಕ್ಯಾಮೆರಾ ಬಗ್ಗೆ ಸಂಪೂರ್ಣ ವಿವರ- ಬೆಲೆ, ವಿಶೇಷತೆ ಎಲ್ಲಾ ತಿಳಿಯಿರಿ.

HDFC ವಿಲೀನ :- ಜುಲೈ 1ರಿಂದ ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆಯು ನಮ್ಮ ದೇಶದ ಖ್ಯಾತ HDFC ಬ್ಯಾಂಕ್ ಜೊತೆಗೆ ವಿಲೀನಗೊಳ್ಳುತ್ತಿದೆ. ವಿಲೀನವಾದ ಬಳಿಕ HDFC ಸೇವೆಗಳು, HDFC ಯ ಎಲ್ಲಾ ಬ್ರ್ಯಾಂಕ್ ಗಳಲ್ಲಿ ಸಿಗುತ್ತದೆ. ಇನ್ನುಮುಂದೆ ಸಾಲ, ಹಾಗೂ ಇನ್ನಿತರ ಎಲ್ಲಾ ಬ್ಯಾಂಕ್ ಸೌಲಭ್ಯಗಳು ಸಿಗುತ್ತದೆ.

Comments are closed.