Neer Dose Karnataka
Take a fresh look at your lifestyle.

Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

Driving Tricks: ವಾಹನಗಳನ್ನು ಚಲಿಸುವುದು ಸುಲಭವಂತು ಅಲ್ಲಾ, ಇದನ್ನು ಸುಲಭವಾಗಿ ತೆಗೆದುಕೊಳ್ಳೋದಕ್ಕೂ ಆಗೋದಿಲ್ಲ. ಅದರಲ್ಲೂ ಹೆದ್ದಾರಿಗಳಲ್ಲಿ ಡ್ರೈವ್ ಮಾಡುವಾಗ ರೈಡ್ ಮಾಡುವಾಗ ಬಹಳ ಹುಷಾರಾಗಿರಬೇಕು, ಎಲ್ಲಾ ಟ್ರಾಫಿಕ್ ರೂಲ್ಸ್ (Traffic Rules) ಗಳನ್ನು ಫಾಲೋ ಮಾಡಬೇಕು, ಇಲ್ಲದೆ ಹೋದರೆ ಅದರಿಂದ ನಿಮಹೇ ತೊಂದರೆಯಾಗವುದು ಮಾತ್ರವಲ್ಲದೆ ನಿಮ್ಮ ಅಕ್ಕಪಕ್ಕ ಇರುವವರ ಜೀವಕ್ಕೆ ತೊಂದರೆ ಆಗಬಹುದು. ಈ ಥರ ತೊಂದರೆಗಳು ಆಗಬಾರದು ಎಂದರೆ ನೀವು ಕೆಲವು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಇಂದು ನಿಮಗೆ ಸುರಕ್ಷಿತ ಸಲಹೆಗಳನ್ನು ನೀಡುತ್ತೇವೆ..

ಟರ್ನ್ ಗಳಲ್ಲಿ ಓವರ್ ಟೇಕ್ ಮಾಡಬೇಡಿ :- ಯಾವುದೇ ಹೆದ್ದಾರಿಗಳಲ್ಲಿ ಹೋಗುವಾಗ, ತಿರುವುಗಳು ಕಂಡುಬಂದಾಗ ಓವರ್ ಟೇಕ್ ಮಾಡಬಾರದು, ಒಂದಷ್ಟು ದೂರ ಹೋಗಿ ರೋಡ್ ಸೇಫ್ ಆಗಿದೆ ಎಂದು ಖಚಿತವಾದ ಮೇಲೆ ಸ್ಪೀಡ್ ಮಾಡಿ. ನಮ್ಮಲ್ಲಿ ಹಲವು ರೋಡ್ ಗಳಲ್ಲಿ ವಿಭಜಕಗಳಿಲ್ಲ ಹಾಗಾಗಿ ನೀವು ಹುಷಾರಾಗಿರಬೇಕು. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

ನೈಟ್ ಡ್ರೈವ್ ನಲ್ಲಿ ಲೋಬೀಮ್ :- ರಾತ್ರಿ ಸಮಯದಲ್ಲಿ ವಾಹನ ಓಡಿಸುವಾಗ ಹಲವು ಜನರು ಹೈಬೀಮ್ ನಲ್ಲಿ ಓಡಿಸುತ್ತಾರೆ, ಈ ರೀತಿ ಮಾಡಿದರೆ, ಎದುರಲ್ಲಿ ಬರುತ್ತಿರುವವರಿಗೆ ನಿಮ್ಮ ವಾಹನ ಬರುವುದು ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಇದು ಅಪಾಯ ತರುವ ಸಂಭವ ತಂದರು ತರಬಹುದು. ಹಾಗಾಗಿ ಎದುರಲ್ಲಿ ಗಾಡಿ ಓಡಿಸುತ್ತಿರುವವರಿಗೆ ನೀವು ಬರುತ್ತಿರುವ ಅಂತರ ಗೊತ್ತಾಗಬೇಕು ಎಂದರೆ, ರಾತ್ರಿ ವೇಳೆ ಲೋಬೀಮ್ ನಲ್ಲಿ ವಾಹನ ಓಡಿಸಿ..

ದಿಢೀರ್ ಎಂದು ಸ್ಪೀಡ್ ಜಾಸ್ತಿ ಮಾಡಬೇಡಿ :- ನೈಟ್ ಡ್ರೈವ್ ಮಾಡುವಾಗ, ನಗರ ಪ್ರದೇಶವನ್ನು ಬಿಟ್ಟು, ಹೆದ್ದಾರಿಗೆ ಹೋದ ತಕ್ಷಣವೇ ವಾಹನ ಚಲಿಸುವ ಸ್ಪೀಡ್ ಹೆಚ್ಚಿಸಬೇಡಿ. ಆ ತಕ್ಷಣಕ್ಕೆ ನಿಮ್ಮ ದೇಹ ಇದಕ್ಕೆ ಸಿದ್ಧವಿರುವುದಿಲ್ಲ. ಇದರಿಂದ ಅಪಘಾತ ಸಂಭವಿಸಬಹುದು. ಹಾಗಾಗಿ ಹುಷಾರಾಗಿರಿ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

ಮೂರನೇ ಬಲ ಲೇನ್ ಇರುವಾಗ ಸ್ಲೋ ಬೇಡ :- ಥರ್ಡ್ ರೈಟ್ ಲೇನ್, ಇಲ್ಲಿ ನೀವು ಬಹಳ ಹುಷಾರಾಗಿ ಡ್ರೈವ್ ಮಾಡಬೇಕು. ಇದು ಓವರ್ ಟೇಕ್ ಮಾಡುವ, ಸ್ಪೀಡ್ ಆಗಿ ಹೋಗುವ ಲೇನ್ ಆಗಿದೆ. ಈ ಲೇನ್ ನಲ್ಲಿ ನೀವು ಬಹಳ ನಿಧಾನವಾಗಿ ಹೋದರೆ, ಓವರ್ ಟೇಕ್ ಮಾಡುವ ಮತ್ತೊಬ್ಬರು ಲೆಫ್ಟ್ ಸೈಡ್ ಇಂದ ಬರಬಹುದು, ಇದು ಕೂಡ ಅಪಘಾತಕ್ಕೆ ಕಾರಣ ಆಗಬಹುದು. ಹಾಗಾಗಿ ಈ ಲೇನ್ ನಲ್ಲಿ ಹುಷಾರಾಗಿರಿ.

Blind Spot ಗಳಲ್ಲಿ ಹೆಚ್ಚು ಸಮಯ ಇರಬೇಡಿ :- ಈ ಜಾಗದಲ್ಲಿ ಹೆಚ್ಚು ಸಮಯ ಇರುವುದು ಒಳ್ಳೆಯದಲ್ಲ, ಈ ಜಾಗದಲ್ಲಿ ನಿಂತರೆ ಡ್ರೈವ್ ಮಾಡುವವರಿಗೆ ಎಲ್ಲಾ ವಾಹನಗಳನ್ನು ನೋಡಲು ಆಗುವುದಿಲ್ಲ. ಹಾಗಾಗಿ ಡ್ರೈವರ್ ಯಾವಾಗ ಬೇಕಾದರು ಓವರ್ ಟೇಕ್ ಮಾಡುವ ಸಾಧ್ಯತೆ ಇದೆ. ದೊಡ್ಡ ವಾಹನಗಳ Blind Spot ಹೆಚ್ಚು ಸಮಯ ಇರಬೇಡಿ. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?

ಸುರಕ್ಷಿತ ಅಂತರ :- ಬಸ್ ಟ್ರಕ್, ಈ ಥರದ ವಾಹನಗಳಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದೇ ಒಳ್ಳೆಯದು. ಇದು ಸುರಕ್ಷತೆಗಾಗಿ ಆಗಿದೆ. ಕೆಲವು ಸಾರಿ ಸಡನ್ ಬ್ರೇಕ್ ಹಾಕುವಂಥ ಸಂದರ್ಭ ಬಂದರು ಬರಬಹುದು, ಹಾಗಾಗಿ ನೀವು ಅಂತರ ಕಾಪಾಡುವುದು ಒಳ್ಳೆಯದು.

Comments are closed.