Neer Dose Karnataka
Take a fresh look at your lifestyle.

Maruthi Suzuki eVx: ಮೊದಲ ಎಲೆಕ್ಟ್ರಿಕ್ SUV ಯನ್ನು ಅನಾವರಣಗೊಳಿಸಿದ ಮಾರುತಿ ಸುಜುಕಿ- ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

Maruthi Suzuki eVx: 2023ರ ಮಾರುತಿ ಆಟೋ ಎಕ್ಸ್ಪೋ ನಿನ್ನೆಯಿಂದ ಭಾರತದಲ್ಲಿ ಶುರುವಾಗಿದೆ.. ಈ ವೇಳೆ ಮಾರುತಿ ಸಂಸ್ಥೆ ತಮ್ಮ ಮೊದಲ ಎಲೆಕ್ಟ್ರಿಕ್ SUV ಕಾರ್ ಅನ್ನು ರಿವೀಲ್ ಮಾಡಿದೆ.. ಈಗ ವಿಶ್ವದಲ್ಲಿ ಎಲೆಕ್ಟ್ರಿಕ್ ಕಾರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಮಾರುತಿ ಸಂಸ್ಥೆ ಕೂಡ, ಭಾರತದಲ್ಲಿ ಅತ್ಯುತ್ತಮ ಕ್ವಾಲಿಟಿಯ ಎಲೆಕ್ಟ್ರಿಕ್ ಕಾರ್ ನೀಡಬೇಕು ಎಂದು ಹೊಸ ಎಲೆಕ್ಟ್ರಿಕ್ SUV ಅನ್ನು ರಿವೀಲ್ ಮಾಡಿದೆ. ಇದರಲ್ಲಿ ಸಾಕಷ್ಟು ವಿಶೇಷತೆ ಇದೆ. ಎಮೋಷನಲ್ ವರ್ಸಾಟೈಲ್ ಕ್ರುಸರ್ ಕಾನ್ಸೆಪ್ಟ್ ನ ಹೊಸ EVX ಎಲೆಕ್ಟ್ರಿಕ್ ಕಾರ್ (Maruthi Suzuki eVx) ಇದಾಗಿದೆ.

ಇದರ ಪ್ರಮುಖ ವಿಶೇಷತೆ ಏನು ಎಂದರೆ, 6kWh ಬ್ಯಾಟರಿ ಜೊತೆಗೇ 550ಕಿಮೀ ರೇಂಜ್ ಹೊಂದಿರುವ ಕಾರ್ ಆಗಿದೆ. ಮಾರುತಿ ಸುಜುಕಿ ಸಂಸ್ಥೆಯ ಈ ಹೊಸ Maruti Suzuki eVX ಕಾರ್ ಮಿಡ್ಲ್ ಲೆವೆಲ್ ಸೈಜ್ ನ SUV ಆಗಿದೆ. 4.2 ಮೀಟರ್ ಗಿಂತ ಜಾಸ್ತಿ ಅಳತೆ, L×H×W 4,300mm×1800mm×1600mm ಮೆಶರ್ಮೆಂಟ್ ಇದೆ..
Maruti Suzuki eVX SUV ನಲ್ಲಿ ಏರೋ ಡೈನಮೈಟ್ ವಿನ್ಯಾಸ ಇದ್ದು, ಈ ಕಾರ್ ನೋಡಲು ಹುಂಡೈ ಕ್ರೆಟಾ ಎಲೆಕ್ಟ್ರಿಕ್ SUV ಥರವೇ ಕಾಣುತ್ತದೆ. Maruti Suzuki eVX ಕಾರ್ ನಲ್ಲಿ 2700mm ಉದ್ದ ಇರುವ ವೀಲ್ ಬೇಸ್ ಇದೆ.. ಇದನ್ನು ಓದಿ..Harley Davidson X440: ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಹಾರ್ಲೆ ಡೇವಿಡ್ ಸನ್- ಗ್ರಾಹಕರು ಇದರಿಂದ ಆಶಿಸುತ್ತಿರುವುದು, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಹಾಗಾಗಿ ಇದು ಕ್ರೆಟಾ ಕಾರ್ ನ ದೊಡ್ಡದಾಗಿ ಕಾಣುತ್ತಿದೆ ಎಂದು ಕೂಡ ಹೇಳಬಹುದು.. Maruti Suzuki eVX SUV ಕಾನ್ಸೆಪ್ಟ್ ಹೇಗಿದೆ ಎಂದರೆ, ಟೊಯೊಟಾ ಸಂಸ್ಥೆಯ 40PL ಗ್ಲೋಬಲ್ ಆರ್ಕಿಟೆಕ್ಚರ್ ಇರುವ 27Pl SUV ಕಾರ್ ನಂತೆ ಇದೆ. Maruti Suzuki eVXSUV ಹೊರಭಾಗದಲ್ಲಿ ಮನಸೆಳೆಯುವ ಗ್ರಿಲ್ ಹಾಗೂ LED DRL ಹೆಡ್ ಲ್ಯಾಮ್ಪ್ ಗಳು ಕೂಡ ಇದೆ.. ವೀಲ್ ಅರ್ಚಾರ್, ಅಲಾಯ್ ವೀಲ್, ಕೂಪ್ ರೀತಿಯ ರೂಫ್ ಡಿಸೈನ್, ಓವರ್‌ ಹ್ಯಾಂಗ್‌ ಥರದ ಹಿಂಭಾಗ ಇದೆಲ್ಲವೂ ಜನರನ್ನು ಆಕರ್ಷಿಸಿದೆ. Maruti Suzuki eVX SUV ಯ ಒಳಗಿನ ವಿನ್ಯಾಸ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಆದರೆ ಈ ಕಾರ್ ನ ಒಳಗೆ ಕ್ಯಾಬಿನ್ ಸೌಲಭ್ಯ, ಅನುಕೂಲಕರ ವಿಶೇಷತೆಗಳು ಇರುತ್ತದೆ ಎಂದು ತಿಳಿದುಬಂದಿದೆ..ಈ ಕಾರ್ ಪ್ರಮುಖ ವಿಶೇಷತೆ ಬಗ್ಗೆ ಈಗಾಗಲೇ ತಿಳಿಸಿದ್ದು, Maruti Suzuki eVX SUV ಎಲೆಕ್ಟ್ರಿಕ್ ಕಾರ್ 60kWh ಬ್ಯಾಟರಿ ಜೊತೆಗೆ ಬರುತ್ತದೆ. 550 ಕಿಮೀ ರೇಂಜ್ ಕೂಡ ಹೊಂದಿದೆ. ಈ Maruti Suzuki eVX SUV ಒಳಗೆ ಇರುವ ಲೀಥಿಯಂ ಫಾಸ್ಫೆಟ್ ಬ್ಲೇಡ್ ಸೆಲ್ ಬ್ಯಾಟರಿ ಗಳನ್ನು ಚೀನಾ ಮೂಲವಾಗಿರುವ, BYD ಸಂಸ್ಥೆಯಿಂದ ಪಡೆಯಲಾಗಿದೆ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

Maruti Suzuki eVX SUV ನಲ್ಲಿ ವ್ಯಾಗನ್ ಆರ್ ಫ್ಲೆಕ್ಸ್ ಫ್ಯುಲ್ ಪ್ರೊಟೊಟೈಪ್, ಬ್ರೆಝಾ S CNG ಹಾಗೂ ಗ್ರ್ಯಾಂಡ್ ವಿಟಾರ ಇಂಟಲಿಜೆನ್ಟ್ ಎಲೆಕ್ಟ್ರಿಕ್ ಹೈಬ್ರಿಡ್ ಥರದ ಸಾಮರ್ಥ್ಯ ಇರುವ ವಿನ್ಯಾಸ ಮಾಡಲಾಗಿದೆ. Maruti Suzuki eVX SUV ಎಲೆಕ್ಟ್ರಿಕ್ ಕಾರ್ 2025ರಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದು ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

Comments are closed.