Anna Bhagya: ದಿಡೀರ್ ಎಂದು ರಾತ್ರೋ ರಾತ್ರಿ ಮತ್ತೆರಡು ಷರತ್ತು ವಿಧಿಸಿದ ಸಿದ್ದರಾಮಯ್ಯ- ಅನ್ನಭಾಗ್ಯದ ಯೋಜನೆಯಲ್ಲಿ ಟ್ವಿಸ್ಟ್.
Anna Bhagya: ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ಮೊದಲೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು, ಆದರೆ ಆ ಯೋಜನೆಗಳಲ್ಲಿ ಈಗ ಜಾರಿಗೆ ಬಂದಿರುವುದು ಒಂದು ಯೋಜನೆ ಮಾತ್ರ. ಅದರಲ್ಲೂ ಅನ್ನ ಭಾಗ್ಯ (Anna Bhagya) ಯೋಜನೆ ಬಗ್ಗೆ ಭಾರಿ ಗೊಂದಲ ಸೃಷ್ಟಿಸಿದೆ. ಆರಂಭದಲ್ಲಿ ಸರ್ಕಾರ ಹೇಳಿದ್ದು, ಈ ಯೋಜನೆಯ ಅಡಿಯಲ್ಲಿ ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇರುವವರಿಗೆ ರೇಷನ್ ಕಾರ್ಡ್ ನಲ್ಲಿರುವ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಕೊಡಲಾಗುತ್ತದೆ ಎಂದು..
ಆದರೆ ನಂತರ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಹೇಳಿದ ಸರ್ಕಾರ, 5ಕೆಜಿ ಅಕ್ಕಿ ಬದಲಾಗಿ ಹಣ ಕೊಡುವುದಾಗಿ ಹೇಳಿತು, ಇದರಿಂದ ಜನರಿಗು ಕೂಡ ನೆಮ್ಮದಿಯಾಗಿತ್ತು, ಆದರೆ ಈಗ ಅನ್ನಭಾಗ್ಯ (Anna Bhagya) ಯೋಜನೆ ಬಗ್ಗೆ ಸಾಕಷ್ಟು ನಿಯಮಗಳನ್ನ ಸರ್ಕಾರ ತರುತ್ತಿದೆ, ಜನರಿಗೆ ಹಣ ಕೊಡುವುದರಿಂದ ಹೇಗಾದರು ತಪ್ಪಿಸಿಕೊಳ್ಳಬೇಕು ಎನ್ನುವ ಪ್ಲಾನ್ ಇದು ಎಂದು ಭಾಸವಾಗುವ ಹಾಗೆ ಮಾಡುತ್ತಿದೆ.. ಇದನ್ನು ಓದಿ..iPhone: ಸಾಮಾನ್ಯ ಐಫೋನ್ (iPHone) ಮೊದಲೇ ಕಾಸ್ಟ್ಲಿ, ಆದರೆ ಈ ಐಫೋನ್ ಫೆರಾರಿ ಗಿಂತ ದುಬಾರಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
ಸರ್ಕಾರ ಈಗ ರೇಷನ್ ಕಾರ್ಡ್ ಇರುವವರ ಅಕೌಂಟ್ ಗೆ ಹಣ ಹಾಕುವುದಕ್ಕೆ ಒಂದಲ್ಲಾ ಒಂದು ನೆಪಗಳನ್ನು ತರುತ್ತಿದೆ, ಹಣ ಕೊಡಲು ಹೊಸ ಹೊಸ ಕಂಡೀಶನ್ ಗಳನ್ನು ಸಹ ತರುತ್ತಿದೆ. ಮೊದಲಿಗೆ ಅಂತ್ಯೋದಯ ಕಾರ್ಡ್ (Anthyodaya Card) ಇರುವ ಎಲ್ಲರೂ ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಿತ್ತು, ಅದರೆ ಈಗ ಎರಡು ಹೊಸ ಕಂಡೀಷನ್ (Anna Bhagya) ಗಳನ್ನು ತಂದಿದೆ. ಜನರು ಈ ಕಂಡೀಷನ್ ಕೇಳಿ ಶಾಕ್ ಆಗಿದ್ದಾರೆ.
ಈ ಹೊಸ ಕಂಡೀಷನ್ ಏನು ಎಂದರೆ, ಅಂತ್ಯೋದಯ ಕಾರ್ಡ್ ನಲ್ಲಿ 3 ಅಥವಾ 3 ಕ್ಕಿಂತ ಸದಸ್ಯರು ಇರುವ ಮನೆಗಳಿಗೆ 5ಕೆಜಿಯ ಹೆಚ್ಚುವರಿ ಹಣ ಸಿಗುವುದಿಲ್ಲ. ಏಕೆಂದರೆ ಅಂತ್ಯೋದಯ ಕಾರ್ಡ್ ನಲ್ಲಿ ಈಗಾಗಲೇ 35 ಕೆಜಿ ಅಕ್ಕಿ ಲಭ್ಯವಾಗುತ್ತಿದ್ದು, 3 ಜನರಿಗೆ ಇಷ್ಟು ಅಕ್ಕಿ ಸಾಕು ಎಂದು ಸರ್ಕಾರ ಅಂದಾಜು ಮಾಡಿದೆ (Anna Bhagya) , ಇದರಿಂದಾಗಿ 4 ಅಥವಾ 4ಕ್ಕಿಂತ ಹೆಚ್ಚು ಸದಸ್ಯರು ಇರುವ ಮನೆಗಳಿಗೆ ಮಾತ್ರ, ಹಣ ಕೊಡುವುದಾಗಿ ಹೇಳಿದೆ..ಬಿಪಿಎಲ್ ಕಾರ್ಡ್ ಇರುವವರಿಗೂ ಒಂದು ಕಂಡೀಷನ್ ಹಾಕಿದ್ದು, ಕಳೆದ ಮೂರು ತಿಂಗಳಿನಿಂದ ಅಕ್ಕಿ ತೆಗೆದುಕೊಂಡಿಲ್ಲ ಎಂದರೆ.. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.
ಅವರಿಗು ಹೆಚ್ಚುವರಿ ಹಣ ಸಿಗುವುದಿಲ್ಲ..ಅಂತ್ಯೋದಯ ಕಾರ್ಡ್ ಗೆ ಸಿಗುವ ಸೌಲಭ್ಯ ಹೇಗಿದೆ ಎಂದರೆ, 4 ಜನರು ಇದ್ದರೆ, 35ಕೆಜಿ ಅಕ್ಕಿ ಜೊತೆಗೆ ₹170 ರೂಪಾಯಿ ಅಕೌಂಟ್ ಗೆ ಬರುತ್ತದೆ, 5 ಜನ ಇದ್ದರೆ 35ಕೆಜಿ ಅಕ್ಕಿ ಜೊತೆಗೆ ₹510 ರೂಪಾಯಿ ಅಕೌಂಟ್ ಗೆ ಬರುತ್ತದೆ. 6 ಜನ ಇದ್ದರೆ 35ಕೆಜಿ ಅಕ್ಕಿ ಜೊತೆಗೆ ₹810 ರೂಪಾಯಿ ಬರುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ, ಒಬ್ಬ ವ್ಯಕ್ತಿಗೆ 5ಕೆಜಿ ಹಾಗೂ 170 ರೂಪಾಯಿ ಸಿಗುತ್ತದೆ (Anna Bhagya) . ಇದನ್ನು ಓದಿ..Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.