Neer Dose Karnataka
Take a fresh look at your lifestyle.

iPhone: ಸಾಮಾನ್ಯ ಐಫೋನ್ (iPHone) ಮೊದಲೇ ಕಾಸ್ಟ್ಲಿ, ಆದರೆ ಈ ಐಫೋನ್ ಫೆರಾರಿ ಗಿಂತ ದುಬಾರಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

iPhone: ನಮ್ಮ ದೇಶದಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್ ಯಾವುದು ಎಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಉಲ್ಟ್ರಾ, ದಿ ಪಿಕ್ಸೆಲ್ ಫೋಲ್ಡ್, ಐಫೋನ್ 14 ಪ್ರೊ ಮ್ಯಾಕ್ಸ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದೆಲ್ಲಕ್ಕಿಂತ ದುಬಾರಿ ಬೆಲೆಯ ಐಫೋನ್ ಮಾಡೆಲ್ ಒಂದನ್ನು ರಷ್ಯಾದ ಕಾವಿಯರ್ ಸಂಸ್ಥೆ ತಯಾರಿಸಿದೆ. ಇದು ಐಫೋನ್ 14 ಪ್ರೊ ಮ್ಯಾಕ್ಸ್ ಮಾಡೆಲ್ ಫೋನ್ ನ ಡೈಮಂಡ್ ಗಳ ಜೊತೆಗೆ ತಯಾರಿಸಿದ್ದು, ಇದರ ಬೆಲೆ ಎಷ್ಟು ಕೋಟಿ ಗೊತ್ತಾ? ಈ ಹಣದಲ್ಲಿ ನೀವು ಫೆರಾರಿ ಕಾರ್ ಅನ್ನೇ ಕೊಂಡುಕೊಳ್ಳಬಹುದು.

ಕಾವಿಯರ್ ಸಂಸ್ಥೆ ತಯಾರಿಸಿರುವ ಈ ಫೋನ್ ನ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ. ಭಾರತದಲ್ಲಿ ಇಷ್ಟು ಹಣಕ್ಕೆ ಒಂದು ಫೆರಾರಿ ಎಫ್8 ಕಾರ್ ಕೊಂಡುಕೊಳ್ಳಬಹುದು. ಕಾವಿಯರ್ ಸಂಸ್ಥೆ ಬ್ರಿಟಿಷ್ ಮೂಲದ ಬ್ರಿಟಿಷ್ ಜ್ಯುವೆಲರಿ ಬ್ರಾಂಡ್ ಗ್ರಾಫ್ ಜೊತೆ ಸೇರಿ ಐಫೋನ್ ಪ್ರೊ ಮ್ಯಾಕ್ಸ್ ನ ಈ ಹೊಸ ಎಡಿಷನ್ ಅನ್ನು ತಯಾರಿಸಿದೆ. ಇಡೀ ಪ್ರಪಂಚದಲ್ಲಿ ಈ ಎಡಿಷನ್ ನ ಐಫೋನ್ ಇರುವುದು ಕೇವಲ 3 ಫೋನ್ ಗಳು ಮಾತ್ರ. ಇದನ್ನು ಓದಿ..Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?

ಈ ಫೋನ್ ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಫೋನ್ ನ ಹಿಂಭಾಗ ಪ್ಲಾಟಿನಂ ಹಾಗೂ ವೈಟ್ ಗೋಲ್ಡ್ ಪೆಂಡೆಂಟ್ ಇಂದ ಮಾಡಲ್ಪಟ್ಟಿದೆ., ಹಾಗೆಯೇ ರೌಂಡ್ ಕಟ್ ಡೈಮಂಡ್ಸ್ ಇಂದ ಅಲಂಕಾರಗೊಂಡಿದೆ. ಇದರ ಬೆಲೆ ಸುಮಾರು 62ಲಕ್ಷ ಇರಬಹುದು. ಇದರ ಬ್ಯಾಕ್ ಪ್ಯಾಕ್ 18ಕ್ಯಾರೆಟ್ ವೈಟ್ ಗೋಲ್ಡ್ ಇಂದ ಮಾಡಲ್ಪಟ್ಟಿದ್ದು, 570 ಕ್ರಾಫ್ಟಡ್ ಡೈಮಂಡ್ ಗಳಿಂದ ಮಾಡಲ್ಪಟ್ಟಿದೆ. ಪ್ಲೆತೋರ ಡೈಮಂಡ್ ಮತ್ತು ಅಪರೂಪದ ಲೋಹಗಳಿಂದ ಮಾಡಲ್ಪಟ್ಟಿರುವುದರಿಂದ ಈ ಫೋನ್ ಬೆಲೆ ಅಷ್ಟು ದುಬಾರಿ ಆಗಿದೆ.

ಈ ಫೋನ್ ಕಾವಿಯಾರ್ ನ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದ್ದು, 5 ಕೋಟಿ ದುಬಾರಿ ಬೆಲೆಯ ಫೋನ್ ಕೊಂಡುಕೊಳ್ಳುವ್ಯದಕ್ಕೆ ಆಸಕ್ತಿ ಹೊಂದಿರುವ ಜನರ ಸಂಖ್ಯೆ ಕೂಡ ಕಡಿಮೆ ಇರುತ್ತದೆ. ಅಧಿಕೃತ ವೆಬ್ಸೈಟ್ ನಲ್ಲಿ ನೀವು ಈ ಫೋನ್ ಬಗ್ಗೆ ಪೂರ್ತಿ ಡೀಟೇಲ್ಸ್ ಪಡೆಯಬಹುದು. ಈ ಅತ್ಯಂತ ದುಬಾರಿ ಫೋನ್ ಮೇಲೆ ಒಂದು ವರ್ಷದ ವಾರಂಟಿ ಇರುತ್ತದೆ ಎಂದು ಕಾವಿಯರ್ ಸಂಸ್ಥೆ ತಿಳಿಸಿದೆ. ಇದನ್ನು ಓದಿ..Bank Savings: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿಸಿಕೊಳ್ಳಬಹುದು ಗೊತ್ತೇ? ಬ್ಯಾಂಕ್ ನಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಸೇಫ್.

ಸಾಮಾನ್ಯವಾಗಿ 128GB ಸ್ಟೋರೇಜ್ ಇರುವ ಆಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ನ ಬೆಲೆ ₹1,39,900 ರೂಪಾಯಿ ಆಗಿದೆ. ಈ ವರ್ಷದ ಕೊನೆಯಲ್ಲಿ ಐಫೋನ್ 15 ಸೀರೀಸ್ ನ ಹೊಸ ಫೋನ್ ಲಾಂಚ್ ಆಗುವ ನಿರೀಕ್ಷೆ ಇದೆ. ಐಫೋನ್ ಮೇಲಿನ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಲೆ ಎಷ್ಟೇ ದುಬಾರಿ ಇದ್ದರು ಕೂಡ, ಕೊಂಡುಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಆಗುತ್ತಿಲ್ಲ. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ

Comments are closed.