Neer Dose Karnataka
Take a fresh look at your lifestyle.

Nayana Motamma: ಏನೇ ಆದರೂ ತಗ್ಗೊದೇ ಇಲ್ಲ- ಪ್ರದೀಪ್ ಈಶ್ವರ್ ಟ್ರೊಲ್ ಮಾಡಿದವರಿಗೆ ಶಾಸಕಿ ನಯನ ಮೋಟಮ್ಮ ಖಡಕ್ ಆಗಿ ಉತ್ತರ.

Nayana Motamma: ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Ishwar) ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇವರು ಸಂದರ್ಶನಗಳಲ್ಲಿ ಹೇಳಿರುವ ಮಾತುಗಳು ಅನೇಕ ಸಾರಿ ಟ್ರೋಲ್ ಆಗಿರುವುದು ಕೂಡ ಉಂಟು. ಆದರೆ ಈಗ ಪ್ರದೀಪ್ ಈಶ್ವರ್ ಅವರ ಮಾತಿಗೆ ಬೆಂಬಲ ನೀಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (Nayana Motamma) ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ..

nayana motamma reaction on pradeep trolls
nayana motamma reaction on pradeep trolls

ಅಷ್ಟಕ್ಕೂ ಮೊದಲ ಸಭೆಯಲ್ಲಿ ನಡೆದಿದ್ದು ಏನು ಎಂದರೆ.. ಜೆಡಿಎಸ್ (JDS) ಪಕ್ಷದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ (Congress) ಪಕ್ಷದ ವಿರುದ್ಧ ಮಾತು ತೆಗೆದರು, ಮಂಡ್ಯದಲ್ಲಿ ನಡೆದ ಘಟನೆ ತೆಗೆದು, ಕಾರ್ಮಿಕ ಪ್ರಾಣ ಕಳೆದುಕೊಂಡ ಘಟನೆ ಬಗ್ಗೆ ತನಿಖೆ ಆಗಬೇಕು ಎಂದರು, ಅದರಿಂದ ಕುಮಾರಸ್ವಾಮಿ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಡುವೆ ವಾದ ವಿವಾದಗಳು ಶುರುವಾದವು. ಇಬ್ಬರು ಜೋರಾಗಿಯೇ ಮಾತನಾಡುತ್ತಿದ್ದರು. ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.

ಕೆಲ ಸಮಯದ ನಂತರ ಇಬ್ಬರು ಶಾಂತರಾದಮೇಲೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಒಬ್ಬ ವ್ಯಕ್ತಿಯ ಸಾವಿನ ಬಗ್ಗೆ ಇಷ್ಟು ಮಾತನಾಡುತ್ತಿದ್ದೀರಾ, ಕೋವಿಡ್ ಸಮಯದಲ್ಲಿ ಎಷ್ಟು ಜನರ ಪ್ರಾಣ ಹೋಯಿತು, ಅವರೆಲ್ಲರ ಸಾವಿನ ಬಗ್ಗೆ ಕೂಡ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಆಗ ಸ್ಪೀಕರ್ ಯು.ಟಿ ಖಾದರ್ ಅವರು ಪ್ರದೀಪ್ ಅವರಿಗೆ ಸಮಾಧಾನ ಮಾಡಿ, ಸಾವಾಗಿಲ್ಲ ಮಾರ್ರೆ ಪ್ರದೀಪ್, ಕೂತ್ಕೋ ಪ್ರದೀಪ್ ಎಂದು ಹೇಳಿ ಸುಮ್ಮನಾಗಿಸಿದರು.

ಆ ವೇಳೆ ನಯನಾ ಮೋಟಮ್ಮ (Nayana Motamma) ಅವರು ಟೇಬಲ್ ಗುದ್ದುವ ಮೂಲಕ ಪ್ರದೀಪ್ ಅವರಿಗೆ ತಮ್ಮ ಬೆಂಬಲ ಇದೆ ಎನ್ನುವುದನ್ನು ಸೂಚಿಸಿದ್ದರು. ಆದರೆ ಪ್ರದೀಪ್ ಅವರಿಗೆ ಬೆಂಬಲ ಕೊಟ್ಟಿದ್ದಕ್ಕೆ ನಯನಾ ಅವರು (Nayana Motamma) ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಆದರೆ ಈಗ ಟ್ವೀಟ್ ಮಾಡುವ ಮೂಲಕ ನಯನಾ (Nayana Motamma) ಅವರು ಟ್ರೋಲರ್ಸ್ ಗಳಿಗೆ ಖಡಕ್ ಉತ್ತರವನ್ನೇ ನೀಡಿದ್ದಾರೆ.. ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ

“ಸಾವಾಗಿಲ್ಲ ಮಾರ್ರೆ ನಿಜ! ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು. ಪ್ರದೀಪ್ ಈಶ್ವರ್ ಅವರು ಹೇಳಿರೋ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೆ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನೂ ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ..”ಎಂದು ನಯನಾ ಮೋಟಮ್ಮ (Nayana Motamma) ಟ್ವೀಟ್ ಮಾಡಿದ್ದಾರೆ. ವಿಡಿಯೋ ಸಹ ಶೇರ್ ಮಾಡಿದ್ದಾರೆ, ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.

Comments are closed.