Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.
Mysore Bangalore Expressway: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bangalore Expressway) ನಲ್ಲಿ ಅಪಘಾತ ಹೆಚ್ಚಾಗುತ್ತಿರುವುದರಿಂದ ಪೊಲೀಸರು ಅವುಗಳನ್ನು ತಡೆಗಟ್ಟುವ ಸಲುವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವೇಗವಾಗಿ ಚಲಿಸುತ್ತಿರುವ ವಾಹನಗಳಿಗೆ ದಂಡ ಹಾಕುತ್ತಾ, ಬಹಳ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಎರಡೇ ದಿನಗಳಲ್ಲಿ 490 ಪ್ರಕರಣಗಳು ದಾಖಲಾಗಿದೆ. ಮೊದಲ ದಿನ ಗುರುವಾರ 44 ವೆಹಿಕಲ್ ಡ್ರೈವರ್ ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು, ಎರಡನೇ ದಿನ 446 ಡ್ರೈವರ್ ಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ (Mysore Bangalore Expressway). ಇವುಗಳ ಪೈಕಿ 174 ಓವರ್ ಸ್ಪೀಡ್ ಕೇಸ್..
137 ಲೇನ್ ಡಿಸಿಪ್ಲಿನ್ ಉಲ್ಲಂಘನೆ ಕೇಸ್, 81 ಸೀಟ್ ಬೆಲ್ಟ್ ಧರಿಸದ ಕೇಸ್, 47 ಹೆಲ್ಮೆಟ್ ಧರಿಸದ ಕೇಸ್, ಬೇರೆ ಪ್ರಕರಣ 51 ಒಟ್ಟು 490 ಕೇಸ್ ಆಗಿದೆ. 2023ರ ಮಾರ್ಚ್ ನಲ್ಲಿ ಬೆಂಗಳೂರು ಮೈಸೂರು ಎಸ್ಕ್ಪ್ರೆಸ್ ವೇ (Mysore Bangalore Expressway) ನಲ್ಲಿ ಸುಮಾರು 243 ಆಕ್ಸಿಡೆಂಟ್ ಆಗಿದ್ದು, ರಾಮನಗರದಲ್ಲಿ 58, ಮಂಡ್ಯದಲ್ಲಿ 64 ಒಟ್ಟು 122 ಜನರು ಮೃತರಾಗಿದ್ದಾರೆ. ಈ ಹೈವೇ ನಲ್ಲಿ ಅಪಘಾತ ಜಾಸ್ತಿ ಆಗುತ್ತಿರುವ ಬಗ್ಗೆ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಶೋಕ್ ಕುಮಾರ್ ಅವರು ಪರಿಶೀಲನೆ ನಡೆಸಿದ್ದಾರೆ, ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bangalore Expressway) ನಲ್ಲಿ ಸ್ಪೀಡ್ ಕಂಟ್ರೋಲ್ ಮಾಡಲು ರೇಡಾರ್ ಗನ್ ಬಳಸುವುದಾಗಿ ತಿಳಿಸಿದ್ದಾರೆ. ಇದನ್ನು ಓದಿ..Anna Bhagya: ದಿಡೀರ್ ಎಂದು ರಾತ್ರೋ ರಾತ್ರಿ ಮತ್ತೆರಡು ಷರತ್ತು ವಿಧಿಸಿದ ಸಿದ್ದರಾಮಯ್ಯ- ಅನ್ನಭಾಗ್ಯದ ಯೋಜನೆಯಲ್ಲಿ ಟ್ವಿಸ್ಟ್.
ಈಗ ಈ ಹೈವೇ ನಲ್ಲಿ ವಾಹನ ಚಲಿಸಲು 100 ಕಿಮೀ ವೇಗದ ಮಿತಿ ಇರಿಸಲಾಗಿದೆ, ಆದರೆ ವಾಹನ ಸವಾರರು 120 ಅಥವಾ 160ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಇದಕ್ಕಾಗಿ ರಾಮನಗರದಲ್ಲಿ ರೇಡಾರ್ ಗನ್ ವ್ಯವಸ್ಥೆ ಮಾಡಲಾಗುತ್ತದೆ. ರೇಡಾರ್ ಗನ್ ಸ್ಪೀಡ್ ಲಿಮಿಟ್ ಕ್ರಾಸ್ ಮಾಡುತ್ತಿರುವ ವಾಹನಗಳ ಫೋಟೋ ಸೆರೆಹಿಡಿಯುತ್ತದೆ, ಈಗಾಗಲೇ ಪೊಲೀಸರು ಕೂಡ, ಸ್ಪೀಡ್ ಲಿಮಿಟ್ ಕ್ರಾಸ್ ಮಾಡುವ ವಾಹನವನ್ನು ಬ್ಯಾರಿಕೇಡ್ ಮೂಲಕ ಹಿಡಿದು, ದಂಡ ವಿಧಿಸುತ್ತಿದ್ದಾರೆ (Mysore Bangalore Expressway)..
ಇನ್ನು ಎಕ್ಸ್ಪ್ರೆಸ್ ಹೈವೇ (Mysore Bangalore Expressway) ನಲ್ಲಿ ನಾಲ್ಕು ಹುಡುಗರು ವೀಲಿಂಗ್ ಮಾಡಿದ್ದು, ಅವರುಗಳನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಹುಸೇನ್, ವಾಸೀಂ ಖಾನ್, ಮುಜಮಿಲ್ ಮತ್ತು ಸುಲ್ತಾನ್ ಬಂಧಿತ ವ್ಯಕ್ತಿಗಳಾಗಿದ್ದು, ಇವರು ಬೆಂಗಳೂರಿನ ಹುಡುಗರಾಗಿದ್ದಾರೆ. ಐದಾರು ತಿಂಗಳ ಹಿಂದೆ, ಬೈಕ್ ಹಿಂದೆ ಹುಡುಗಿಯರನ್ನು ಕೂರಿಸ್ಕೊಂಡು ವೀಲಿಂಗ್ ಮಾಡಿ, ರೀಲ್ಸ್ ಮಾಡಿ, ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ
ಈ ರೀತಿ ವೀಲಿಂಗ್ ಮಾಡುವುದು ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ, ಹಾಗೂ ಅಪಾಯ ತರಬಹುದು ಎನ್ನುವ ಕಾರಣಕ್ಕೆ ಆ ಹುಡುಗರನ್ನು ಬಂಧಿಸಲಾಗಿದೆ..ಒಟ್ಟಿನಲ್ಲಿ ಪೊಲೀಸರು ಎಕ್ಸ್ಪ್ರೆಸ್ ವೇ (Mysore Bangalore Expressway) ವಿಚಾರದಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇನ್ನುಮುಂದೆ ಜನರು ಕೂಡ ಹುಷಾರಾಗಿ ಇರಬೇಕಿದೆ. ಇದನ್ನು ಓದಿ..iPhone: ಸಾಮಾನ್ಯ ಐಫೋನ್ (iPHone) ಮೊದಲೇ ಕಾಸ್ಟ್ಲಿ, ಆದರೆ ಈ ಐಫೋನ್ ಫೆರಾರಿ ಗಿಂತ ದುಬಾರಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.