Oben Rorr: ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಸಿದ ಒಬೆನ್ ರೋರ್ ಬೈಕ್- ಗರಿಷ್ಠ ವೇಗ, ಬೆಲೆಯ ಸಂಪೂರ್ಣ ಡೀಟೇಲ್ಸ್.
Oben Rorr: ಒಬನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಸುವ ಸಂಸ್ಥೆಯು ಬೆಂಗಳೂರಿನ (Bangalore) ಮೂಲದ ಸಂಸ್ಥೆ ಆಗಿದೆ. ಈ ಸಂಸ್ಥೆ ಈಗ ಒಬನ್ ರೋರ್ (Oben Rorr) ಬೈಕ್ ಡಿಸ್ಟ್ರಿಬ್ಯುಶನ್ ಶುರು ಮಾಡಿದೆ. ಶುರುವಿನಲ್ಲಿ ಈಗಾಗಲೇ 25 ಬೈಕ್ಸ್ ಡಿಸ್ಟ್ರಿಬ್ಯುಶನ್ ನಡೆದಿದೆ, ಈ ವರ್ಷ ಮಾರ್ಚ್ ನಲ್ಲಿ ಬೈಕ್ ಲಾಂಚ್ ಆಯಿತು. ಈಗ ಬೆಂಗಳೂರಿನಲ್ಲಿ ಮಾತ್ರ ಬೈಕ್ ಡಿಸ್ಟ್ರಿಬ್ಯುಶನ್ ನಡೆದಿದೆ. ಈಗಾಗಲೇ ಈ ಸಂಸ್ಥೆಗೆ 21,000 ಯೂನಿಟ್ ಬುಕಿಂಗ್ ಬಂದಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಬೈಕ್ ಕೊಂಡುಕೊಳ್ಳುವವರಿಗೆ ಮೊದಲ ಮೂರು ವರ್ಷ ಸರ್ವಿಸ್ ಫ್ರೀ ಇರುತ್ತದೆ.
ಹಾಗೆಯೇ 50000 km/3 ವರ್ಷದ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ, 75000 km/5 ವರ್ಷಗಳ ಎಕ್ಸ್ಟನ್ಡ್ ವಾರೆಂಟಿ ಕೊಡಲಾಗಿದೆ..ಈ ಬೈಕ್ ನ ಎಲೆಕ್ಟ್ರಿಕ್ ಮೋಟರ್ ಗೆ 3 ವರ್ಷಗಳ ವಾರೆಂಟಿ ಕೊಡಲಾಗಿದೆ. ಹಾಗೆಯೇ ಫ್ರೀಯಾಗಿ ರಸ್ತೆಗಳಲ್ಲಿ ಸಹಾಯ ಕೊಡಲಾಗುತ್ತದೆ. 12,000 ಕ್ಕಿಂತ ಹೆಚ್ಚು ಸ್ಟಾಪ್ ಗಳಲ್ಲಿ ಚಾರ್ಜಿಂಗ್ ಸೌಲಭ್ಯ ಸಹ ಇದೆ. ಒಬೆನ್ ರೋರ್ (Oben Rorr) ಡಿಸೈನ್ ಹಾಗೂ ಸ್ಟೈಲಿಂಗ್ ವಿಷಯದಲ್ಲಿ ಪಲ್ಸರ್ ಮತ್ತು ಅಪಾಚೆ ಬೈಕ್ ಗೆ ಕಾಂಪಿಟೇಶನ್ ಆಗಿರುತ್ತದೆ. ಈ ಬೈಕ್ ಗೆ ನೇಕೆಡ್ ರೋಡ್ ಸ್ಟರ್ ಡಿಸೈನ್ (Oben Rorr) ಕೊಡಲಾಗಿದೆ, ಹಾಗೆಯೇ ನೋಡಲು ಬಹಳ ಚೆನ್ನಾಗಿ ಕಾಣುತ್ತದೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.
ಹಾಗೆಯೇ ಈ ಬೈಕ್ ನಲ್ಲಿ ಕೆಲವು ವಿಶೇಷತೆಗಳು ಸಹ ಇದೆ, ಇದು ಬೇರೆ ಬೈಕ್ ಗಳಲ್ಲಿ ಇರುವುದಿಲ್ಲ. ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಒಬೆನ್ ರೋರ್ ಬೈಕ್ ಕನೆಕ್ಟ್ ಮಾಡಿಕೊಳ್ಳಬಹುದು. ಇಲ್ಲಿ ಡ್ರೈವರ್ ಅಲರ್ಟ್ ಸಿಸ್ಟಮ್ ಹಾಗೂ ಜಿಯೋಫೆನ್ಸಿಂಗ್ ರೀತಿಯ ವ್ಯವಸ್ಥೆ ಇದೆ (Oben Rorr). ಒಂದು ವೇಳೆ ನಿಮ್ಮ ಬೈಕ್ ಅನ್ನು ಯಾರಾದರೂ ಕದಿಯಲು ಪ್ರಯತ್ನಪಟ್ಟರೆ, ನಿಮ್ಮ ಫೋನ್ ಗೆ ಎಚ್ಚರಿಕೆ ಬರಲಿದೆ., ಆಗ ನೀವು ಕಳ್ಳತನ ಆಗುವುದನ್ನು ತಡೆಗಟ್ಟಬಹುದು.
ನಿಮ್ಮ ಬೈಕ್ ಅನ್ನು ಫೋನ್ ಇಂದಲೇ ಲಾಕ್ ಮಾಡಬಹುದು. ಡಿಜಿಟಲ್ ಡಿಸ್ಪ್ಲೇ ಇರುವ ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಪೂರ್ತಿ LED ಲೈಟಿಂಗ್ ಲಭ್ಯವಿದೆ. ಬೈಕ್ ನ ಟ್ಯಾಂಕ್ ಬಗ್ಗೆ ಹೇಳುವುದಾದರೆ, ಇದು IP67 ಪ್ರಕಾರ ಡಸ್ಟ್ ಪ್ರೂಫ್ ಮತ್ತು ವಾಟರ್ ಪ್ರೂಫ್ ಆಗಿದೆ. ರಕ್ಷಣೆ ಇರುವ ಬ್ಯಾಟರಿ ಹೊಂದಿದೆ. ಈ ಬೈಕ್ (Oben Rorr) ಪೂರ್ತಿ ಚಾರ್ಜ್ ಮಾಡಿದರೆ 200ಕಿಮೀ ರೇಂಜ್ ಕೊಡುತ್ತದೆ. 3 ಸೆಕೆಂಡ್ ಗಳಲ್ಲಿ 0 ಇಂದ 40 ಕಿಮೀ ಸ್ಪೀಡ್ ತೆಗೆದುಕೊಳ್ಳುತ್ತದೆ. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.
ಈ ಬೈಕ್ ಮ್ಯಾಕ್ಸಿಮಮ್ ಸ್ಪೀಡ್ 100ಕಿಮೀ ಆಗಿದೆ. ಈ ಬೈಕ್ ಆನ್ನು ನೀವು ನ್ಯಾಷನಲ್ ಹೈವೇಗಳಲ್ಲಿ ಸುಲಭವಾಗಿ ಓಡಿಸಬಹುದು. ಬೈಕ್ ಬ್ಯಾಟರಿ 80% ಆಗಲು 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. 1ನಿಮಿಷ ಕ್ಯೂರ್ಜ್5ಮಾಡಿದರೆ, 1ಕಿಮೀ ಓಡಿಸಬಹುದು. ಒಬನ್ ರೋರ್ (Oben Rorr) ಎಲೆಕ್ಟ್ರಿಕ್ ಬೈಕ್ ಒಂದು ವೇರಿಯಂಟ್ ನಲ್ಲಿ ಲಭ್ಯವಿದೆ. ಈ ಬೈಕ್ 1.49 ಲಕ್ಷಕ್ಕೆ ಖರೀದಿ ಮಾಡಬಹುದು. ಬೈಕ್ ಗೆ ಫ್ರೇಮ್2 ಸಬ್ಸಿಡಿ ಪಡೆದ ಬಳಿಕ ಈ ಬೆಲೆ ಇರುತ್ತದೆ. ಅಧಿಕೃತ ವೆಬ್ಸೈಟ್ ನಲ್ಲಿ ಬೈಕ್ ಬುಕ್ ಮಾಡಬಹುದು. ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.
Comments are closed.