News: ಕನ್ನಡಿಗರ ವಿಶಾಲ ಹೃದಯ ಎಲ್ಲೋಯ್ತು- ಸೀಟು ಸಿಕ್ಕಿಲ್ಲ ಎಂದು ಮಗು ಹಿಡಿದು ಡೋರ್ ನಲ್ಲಿ ಕೂಟ ಮಹಿಳೆ.
News: ರಾಜ್ಯದಲ್ಲಿ ಶಕ್ತಿ ಯೋಜನೆಯ (Shakti Yojane) ಎಫೆಕ್ಟ್ಸ್ ಜೋರಾಗಿಯೇ ಇದೆ. ಶಕ್ತಿ ಯೋಜನೆಯ ಅಡಿಯಲ್ಲಿ ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದರ ಸೌಲಭ್ಯವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕ್ ಯೋಜನೆಯ ಪರಿಣಾಮ ಕೆಲವು ಜನರಿಗೆ ಅಪಾಯ ತಂದೊಡ್ಡಿದೆ ಎಂದು ಹೇಳಿದರೆ ತಪ್ಪಲ್ಲ. ಇಂಥದ್ದೊಂದು ಘಟನೆ ಇತ್ತೀಚೆಗೆ ಕೊಪ್ಪಳದಲ್ಲಿ ನಡೆದಿದೆ (News).
ಈಗ ಶಕ್ತಿ ಯೋಜನೆ ಶುರುವಾದ ನಂತರ ಬಹುತೇಕ ಎಲ್ಲಾ ಬಸ್ ಗಳು ಸಿಕ್ಕಾಪಟ್ಟೆ ರಶ್ ಇರುತ್ತದೆ. ಮಹಿಳೆಯರು ಹೆಚ್ಚಾಗಿಯೇ ಓಡಾಡುತ್ತಿದ್ದಾರೆ, ಕೊಪ್ಪಳ ಜಿಲ್ಲೆಯ ಹುಲಿಗಿ ಎನ್ನುವ ಕಡೆಯಿಂದ ಕೊಪ್ಪಳಕ್ಕೆ (Koppala) ಬರುತ್ತಿದ್ದ ಬಸ್ ಸಿಕ್ಕಾಪಟ್ಟೆ ರಷ್ ಆಗಿತ್ತು, ಬಸ್ ತುಂಬಾ ಹೆಣ್ಣುಮಕ್ಕಳು ಜೊತೆಗೆ ಪೀಕ್ ಅವರ್ ಆಗಿದ್ದ ಕಾರಣ ಒಂದಷ್ಟು ಗಂಡಸರು ಕೂಡ ಇದ್ದರು. ಅದೇ ಬಸ್ ಗೆ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯರೊಬ್ಬರು ಬಂದರು (News).. ಇದನ್ನು ಓದಿ..Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??
ಆಕೆಗೆ ಬಸ್ ಹತ್ತುವುದಕ್ಕೂ ಕೂಡ ಸ್ಥಳ ಇರಲಿಲ್ಲ. ಜನರು ಬಸ್ ಹತ್ತುವುದಕ್ಕೆ ಜಾಗವನ್ನು ಕೂಡ ಕೊಡಲಿಲ್ಲ, ಆದರೆ ಆಕೆ ಹೇಗೋ ಕಷ್ಟಪಟ್ಟು ಮಗುವನ್ನು ಎತ್ತಿಕೊಂಡು ಬಸ್ ಹತ್ತಿದಳು. ಆದರೆ ಬಸ್ ಒಳಗೆ ಹೋಗುವುದಕ್ಕೆ ಯಾರು ಜಾಗ ಕೊಡಲಿಲ್ಲ. ಅಲ್ಲಿದ್ದವರು ಹೆಂಗಸರೇ ಆದರೂ ಕೂಡ, ಮಗುವನ್ನು ಎತ್ತಿಕೊಂಡು ನಿಲ್ಲಲು ಕೂಡ ಕಷ್ಟಪಡುತ್ತಿದ್ದ ಮಹಿಳೆಗೆ ಒಬ್ಬರು ಸಹ ಸೀಟ್ ಬಿಟ್ಟುಕೊಟ್ಟು ಸಹಾಯ ಮಾಡಿಲ್ಲ (News).
ಕೆಲವು ಜನ ಒಳಗೆ ಹೋಗಿ ಎಂದು ಹೇಳಿದರು ಕೂಡ, ಒಳಗೆ ಹೋಗುವುದಕ್ಕೆ ಅಲ್ಲಿ ಜಾಗವು ಇರಲಿಲ್ಲ, ಯಾರು ಕೂಡ ಆಕೆಗೆ ಜಾಗವನ್ನು ಕೊಡಲಿಲ್ಲ. ಕೊನೆಗೆ ಆಕೆ ಬೇರೆ ಏನು ಮಾಡಲು ಸಾಧ್ಯವಾಗದೆ, ಬಸ್ ಡೋರ್ ಹತ್ತಿರವೇ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ತಾನು ಕೂಡ ಕೂತುಬಿಟ್ಟಿದ್ದಾಳೆ. ಆಕೆ ಕುಳಿತಿರುವ ರೀತಿ ನೋಡಿದರೆ, ಖಂಡಿತವಾಗಿಯೂ ಅಪಾಯಕಾರಿಯಾಗಿ ಕಾಣುತ್ತದೆ (News).. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.
ತಿರುವಿನಲ್ಲಿ ಆಕೆ ಮಗುವಿನ ಜೊತೆಗೆ ರಸ್ತೆಗೆ ಉರುಳುತ್ತಾರೆ ಎನ್ನುವ ಹಾಗೆ ಕಾಣುತ್ತದೆ. ಬಸ್ ನಲ್ಲಿದ್ದವರು ಏನು ಸಹಾಯ ಮಾಡದ ಕಾರಣ ಕಂಡಕ್ಟರ್ ಮತ್ತು ಡ್ರೈವರ್ ಕೂಡ ಏನು ಮಾಡಲಾಗಿಲ್ಲ ಎನ್ನಲಾಗಿದೆ. ಆದರೆ ಕೆಲವು ಜನರು ಒಳಗೆ ಬನ್ನಿ ಎಂದು ಹೇಳಿದರು ಕೂಡ ಆಕೆಯೇ ಹಾಗೆ ಮಾಡಿದರು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಘಟನೆಯನ್ನು ನೋಡಿದರೆ ನಮ್ಮ ಜನರಲ್ಲಿ ಮಾನವೀಯತೆ ಮುರಿದು ಬೀಳುತ್ತಿದೆ ಎಂದು ಅನ್ನಿಸುತ್ತಿದೆ (News). ಇದನ್ನು ಓದಿ..Oben Rorr: ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಸಿದ ಒಬೆನ್ ರೋರ್ ಬೈಕ್- ಗರಿಷ್ಠ ವೇಗ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.