Neer Dose Karnataka
Take a fresh look at your lifestyle.

LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

LIC Policy: ಹೆಣ್ಮಕ್ಕಳು ಇರುವ ತಂದೆತಾಯಿಯರಿಗೆ ಹೆಣ್ಣುಮಗುವನ್ನು ನೋಡಿಕೊಳ್ಳಲು ಕಷ್ಟ ಆಗಬಾರದು ಎಂದು ಸರ್ಕಾರವು ಹಣಕಾಸಿನ ವಿಚಾರದಲ್ಲಿ ಸಹಾಯ ಅಗುವಂಥ ಯೋಜನೆಗಳನ್ನು ತಂದಿದೆ. ಅದೇ ರೀತಿ LIC ಸಹ ಹೆಣ್ಣು ಮಕ್ಕಳಿರುವ ತಂದೆ ತಾಯಿಗೆ ಸಹಾಯ ಆಗುವ ಯೋಜನೆ ತಂದಿದೆ. ಹೆಣ್ಣುಮಗು ಬೆಳೆದ ಬಳಿಕ ಮಗುವಿನ ಓದು ಮತ್ತು ಮದುವೆಗೆ ಸಹಾಯ ಆಗಲಿ ಎಂದು ಒಂದು LIC ಪಾಲಿಸಿ (LIC Policy) ಲಭ್ಯವಿದ್ದು, ನೀವು ಈ ಪ್ರಯೋಜನ ಪಡೆಯಬಹುದು. ಈ ಯೋಜನೆ ಬಗ್ಗೆ ತಿಳಿಸುತ್ತೇವೆ ನೋಡಿ..

LIC ಎಲ್ಲಾ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು (LIC Policy) ಪರಿಚಯ ಮಾಡುತ್ತದೆ. ಅದೇ ರೀತಿ ಹೆಣ್ಣುಮಕ್ಕಳಿಗೆ ಹೊಸ ಯೋಜನೆ ತಂದಿದೆ. ಇದರ ಹೆಸರು LIC ಕನ್ಯಾದಾನ (LIC Kanyadana) ಯೋಜನೆ ಆಗಿದೆ. ಈ ಪಾಲಿಸಿಯಲ್ಲಿ (LIC Policy) ನೀವು ಉಳಿತಾಯ, ವಿದ್ಯಾಭ್ಯಾಸ, ಮದುವೆ ಖರ್ಚಿಗಾಗಿ ಹಣಕಾಸಿನ ತೊಂದರೆ ಅನುಭವಿಸುವ ಅವಶ್ಯಕತೆ ಇಲ್ಲ. ನೀವು ಕೂಡ ನಿಮ್ಮ ಹೆಣ್ಣುಮಗುವಿನ ಹೆಸರಿನಲ್ಲಿ ಈ ಪಾಲಿಸಿ ತೆಗೆದುಕೊಳ್ಳಬಹುದು. ಇಲ್ಲಿ ನೀವು ದಿನಕ್ಕೆ 75 ರೂಪಾಯಿ ಉಳಿತಾಯ ಮಾಡಿ, 25 ವರ್ಷಗಳ ನಂತರ ₹14 ಲಕ್ಷ ಪಡೆಯಬಹುದು. ಇದನ್ನು ಓದಿ..Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.

ಈ ಯೋಜನೆಯ (LIC Policy) ಅರ್ಹತೆಗಳು, ಹೆಣ್ಣುಮಗು ಹುಟ್ಟಿ ಒಂದು ವರ್ಷಕ್ಕಿಂತ ಹೆಚ್ಚಾಗಿರಬೇಕು, ಮಗುವಿನ ತಂದೆ ತಾಯಿಯ ವಯಸ್ಸು 18 ವರ್ಷದಿಂದ 50 ವರ್ಷದ ಒಳಗಿರಬೇಕು. ಈ ಪಾಲಿಸಿಯಲ್ಲಿ 13ರಿಂದ 25 ವರ್ಷಗಳ ಮೆಚ್ಯುರಿಟಿ ಸಮಯವನ್ನು ವಿಸ್ತರಣೆ ಮಾಡಬಹುದು. ಈ ಯೋಜನೆಯ ಪ್ರಯೋಜನಗಳು ಏನೇನು ಎಂದು ನೋಡುವುದಾದರೆ..
*LIC ಕನ್ಯಾದಾನ ಪಾಲಿಸಿ ತೆಗೆದುಕೊಳ್ಳುವವರು ಮಾಸಿಕವಾಗಿ, ಮೂರು ತಿಂಗಳಿಗೆ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಮಾಡಬಹುದು.

*ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ, 25 ವರ್ಷಗಳ ನಂತರ 14 ಲಕ್ಷ ರೂಪಾಯಿ ಆದಾಯ ಪಡೆಯಬಹುದು.
*ಪಾಲಿಸಿ ತೆಗೆದುಕೊಳ್ಳುವವರು, ಪಾಲಿಸಿ (LIC Policy) ಮೆಚ್ಯುರ್ ಆಗುವುದಕ್ಕಿಂತ ಮೊದಲೇ, ಮರಣ ಹೊಂದಿದರೆ, LIC ಕಡೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ.
*ಪಾಲಿಸಿ ತೆಗೆದುಕೊಂಡಿರುವವರು ಒಂದು ವೇಳೆ ಅಪಘಾತವಾಗಿ ಮೃತರಾದರೆ 10 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ..
*ಪಾಲಿಸಿ ತೆಗೆದುಕೊಂಡವರು ಮೃತರಾದರೆ ಪ್ರೀಮಿಯಂ ಕಟ್ಟುವ ಹಾಗಿಲ್ಲ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

*ಪ್ರೀಮಿಯಂ ಪಾವತಿ ಮಾಡಿದ ನಂತರ ಮೂರು ವರ್ಷಗಳ ಕಾಲ ಪಾಲಿಸಿ ಕಟ್ಟಿದ ನಂತರ ಎಮರ್ಜೆನ್ಸಿ ಇದ್ದಾಗ ಸಾಲ ಪಡೆಯಬಹುದು.
*ಪಾಲಿಸಿ ಮೆಚ್ಯುರಿಟಿ (LIC Policy) ಆದ ನಂತರ ನಿಮಗೆ ಸಿಗುವ ಮೊತ್ತಕ್ಕೆ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ.
*LIC ಕನ್ಯಾದಾನ ಪಾಲಿಸಿ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ನೀವು LIC ಆಫೀಸ್, ಏಜೆನ್ಟ್ ಅಥವಾ LIC ವೆಬ್ಸೈಟ್ ಗೆ ಭೇಟಿ ನೀಡಿ. ಇದನ್ನು ಓದಿ..Railway News: ಬಡವರಿಗೆ ಬಿಗ್ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ- ಇದೊಂದು ಆದರೆ ಬಡವರಿಗೆ ರೈಲಿನಲ್ಲಿ ಸುಲಭ ಪ್ರಯಾಣ.

Comments are closed.