BJP vs JDS: ಬಿಜೆಪಿ ಕಾರ್ಯಕರ್ತರಿಗೆ ನೆಮ್ಮದಿ ಸುದ್ದಿ- ಉಲ್ಟಾ ಹೊಡೆದ ಜೆಡಿಎಸ್, ಕುಮಾರಸ್ವಾಮಿ ರವರು ಕೊಟ್ಟ ಸಿಹಿ ಸುದ್ದಿ.
BJP vs JDS: ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಕೂಡ ವಿರೋಧ ಪಕ್ಷವಾಗಿದೆ. ಈ ಎರಡು ಪಕ್ಷಗಳು ರಾಜ್ಯ ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳನ್ನು ಹರಿಸಿದೆ. ಈಗಷ್ಟೇ ಮೊದಲ ವಿಧಾನಸಭೆಯ ಕಲಾಪ ಮುಗಿದಿದೆ. ಇದೀಗ ಹೆಚ್.ಡಿ ದೇವೇಗೌಡ (HD Devegowda) ಅವರು ಸರ್ಕಾರದ ವಿಷಯವಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದು, ಈ ಮಾತು ಕೇಳಿ ಬಿಜೆಪಿ ಕಾರ್ಯಕರ್ತರಿಗೆ ನೆಮ್ಮದಿಯಾಗಿದೆ. ಅಷ್ಟಕ್ಕೂ ದೇವೇಗೌಡ ಅವರು ಹೇಳಿದ್ದೇನು ಗೊತ್ತಾ?
“ವಿಧಾನ ಸಭೆಯ ಕಲಾಪ ನಾಳೆ ಮುಗಿಯುತ್ತದೆ. ವಿಧಾನಸಭೆಯ ಎಲ್ಲಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮದು ಪ್ರಾದೇಶಿಕ ಪಕ್ಷವಾಗಿದೆ., ರಾಜ್ಯದ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕು ಎನ್ನುವ ಬಗ್ಗೆ ಸಹ ಚರ್ಚೆಗಳು ನಡೆದಿದೆ. ನಮ್ಮ ಪಕ್ಷದ ಎಲ್ಲರನ್ನು ಭೇಟಿ ಮಾಡಿ, ಹೇಗೆ ಮುಂದುವರಿಯಬೇಕು ಎನ್ನುವ ಬಗ್ಗೆ ಸಲಹೆ ನೀಡಿದ್ದೇನೆ. ಇತ್ತ NDA ಇದೆ ಅತ್ತ ಇಂಡಿಯಾ ಇದೆ, ಈಗ ನಾನು ನನ್ನ ಅನುಭವಗಳನ್ನೆಲ್ಲಾ ಅವರ ಜೊತೆಗೆ ಹಂಚಿಕೊಂಡಿದ್ದೇನೆ. ಇದನ್ನು ಓದಿ..News: SC ST ಸಮುದಾಯ ಜನರ ಜಾಮೀನು ಖರೀದಿ ಮಾಡುವ ಮುನ್ನ ಇರಲಿ ಎಚ್ಚರ- ಹೊಸ ಖಡಕ್ ಆದೇಶ ಹೊರಡಿಸಿದ ಸಿದ್ದು ಸರ್ಕಾರ.
ಈಗ ಪಕ್ಷದ ನಾಯಕರಾಗಿರುವುದು ಕುಮಾರಸ್ವಾಮಿ (HD Kumaraswamy). ಅವ್ರು ಎಲ್ಲಾ ಹೊಣೆ ತೆಗೆದುಕೊಂಡು ಕೆಲಸ ಶುರು ಮಾಡಿದ್ದಾರೆ. ಅವರ ಜೊತೆಗೆ ನನ್ನ ಅನುಭವ ಹಂಚಿಕೊಂಡಿದ್ದೇನೆ.. ಮತ್ತೆ ಸಲಹೆ ಕೊಡುವುದಕ್ಕೂ ಸಿದ್ಧವಾಗಿದ್ದೇನೆ..” ಎಂದು ಜೆಡಿಎಸ್ ಪಕ್ಷದ ರಾಷ್ಟ್ರಧ್ಯಕ್ಷ ರಾಗಿರುವ ಹೆಚ್.ಡಿ.ದೇವೇಗೌಡ ಅವರು ಮಾತನಾಡಿದ್ದಾರೆ. ಇಂದು ಹೋಟೆಲ್ ಒಂದರಲ್ಲಿ ದೇವೇಗೌಡ ಅವರ ಜೊತೆಗೆ ಜೆಡಿಎಸ್ (JDS) ನ ಎಲ್ಲಾ ಕಾರ್ಯಕರ್ತರ ಸಭೆ ನಡೆದಿದೆ. ಈ ಸಭೆ ನಂತರ ಹೆಚ್.ಡಿ ದೇವೇಗೌಡ ಅವರು ಮಾತನಾಡಿದ್ದಾರೆ (BJP vs JDS)..
“ನನಗೆ ರಾಷ್ಟ್ರ ರಾಜಕಾರಣದ ಬಗ್ಗೆ ಚೆನ್ನಾಗಿ ಗೊತ್ತಿದೆ. ರಾಜ್ಯದ ಜನರ ದೃಷ್ಟಿಯಿಂದ ಈ ಪಕ್ಷ ಉಳಿಸುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಪಕ್ಷಕ್ಕೆ ಅನ್ಯಾಯ ನಡೆದಿದೆ, ಅದನ್ನ ನೇರವಾಗಿ ಜನರ ಮುಂದೆ ಇಡುತ್ತೇವೆ (BJP vs JDS), ಕನ್ನಡ ಜನರ ಸಾಮರ್ಥ್ಯ ಏನು ಎನ್ನುವುದನ್ನು ತೊರಿಸುತ್ತೇವೆ..ಈ ಮಾತನ್ನು ತೋರಿಕೆಗೆ ಅಥವಾ ಇಲ್ಲಿ ಲಾಭ ಪಡೆಯಬೇಕು ಎಂದು ಹೇಳುತ್ತಿಲ್ಲ. ಇಡೀ ಜೀವನ ನಾವು ಹೋರಾಟ ಮಾಡ್ತೀವಿ. NDA UPA ಯಾವುದು ಇಲ್ಲ..ಸ್ವತಂತ್ರ್ಯವಾಗಿ ಹೋರಾಟ ಮಾಡ್ತೀವಿ..” ಎಂದಿದ್ದಾರೆ ಹೆಚ್.ಡಿ.ಡಿ. ಇದನ್ನು ಓದಿ..Second Hand Car: ಸುಮ್ಮನೆ ಸೋಶಿಯಲ್ ಮೀಡಿಯಾ ನೋಡಿ ಖರೀದಿ ಮಾಡುವುದಲ್ಲ- ಸೆಕೆಂಡ್ ಹ್ಯಾಂಡ್ ಅಥವಾ ಹೊಸದು ಯಾವ ಕಾರ್ ಬೆಸ್ಟ್ ಗೊತ್ತೇ?
ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ.. ಅದೇ ವಿಚಾರವನ್ನು ಬಿಜೆಪಿ ತೆಗೆದುಕೊಂಡು ಹೋರಾಟ ನಡೆಸಿತ್ತು. ಇದನ್ನೆಲ್ಲ ನೋಡಿದ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದೆ ಅಂದುಕೊಂಡಿತ್ತು.. ಈಗ ಬಿಜೆಪಿಗೆ ಸಂಖ್ಯೆಯ ಬಲ ಇದೆ, ಕುಮಾರಸ್ವಾಮಿ ಮಾಡಿದ ಒಂದು ಟ್ವೀಟ್ ಇಟ್ಟುಕೊಂಡು ಅವರು ಹೋರಾಟ ಮಾಡ್ತಿದ್ದಾರೆ (BJP vs JDS). ಈ ಥರ ಆಗ್ತಿರೋದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಸಂಬಂಧ ಇದೆ ಎಂದು ಬಿಂಬಿಸಬೇಡಿ. ನಮ್ಮ ಹೋರಾಟವನ್ನು ನಾವು ಮಾಡ್ತೀವಿ, ಬಿಜೆಪಿ ಅವರ ಹೋರಾಟ ಮಾಡ್ತಾರೆ..ಎಂದು ಹೇಳಿದ್ದಾರೆ. ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.
Comments are closed.