BJP JDS: ದಿನೇ ದಿನೇ ಒಂದಾಗುತ್ತಿದೆ ಜೆಡಿಎಸ್, BJP – ಇದರಿಂದ ಯಾವ ಪಕ್ಷಕ್ಕೆ ಹೆಚ್ಚು ಲಾಭ ಗೊತ್ತೇ? ರಾಜಕೀಯದ ಲೆಕ್ಕಾಚಾರ ನೋಡಿ
BJP JDS: ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ (Congress) ಪಕ್ಷದ ಆಡಳಿತ ಇದೆ, ಬಿಜೆಪಿ (BJP) ಮತ್ತು ಜೆಡಿಎಸ್ (JDS) ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ಧ ಹೋರಾಡಬೇಕಿದೆ. ಇದಕ್ಕಾಗಿ ಈ ಎರಡು ಪಕ್ಷಗಳ. ನಡುವೆ ಮೈತ್ರಿ ಕೆಲಸ ನಡೆಯುತ್ತಿದೆ, ಈ ಮೈತ್ರಿ ಆಂತರಿಕವಾಗಿ ನಡೆಯುತ್ತಿದೆ ಹೊರತು ಬಹಿರಂಗವಾಗಿ ಯಾವುದೇ ವಿಷಯ ಬಿಟ್ಟುಕೊಟ್ಟಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಜೆಡಿಎಸ್ (BJP JDS) ಇಂದ 16 ಸದಸ್ಯರು ಬಿಜೆಪಿಯ 66 ಸದಸ್ಯರು ಇದ್ದಾರೆ, ಈ ಎರಡು ಪಕ್ಷಗಳು ಒಂದಾದರೆ ಏನಾಗಬಹುದು ಎಂದು ರಾಜಕೀಯದಲ್ಲಿ ಈಗ ಚರ್ಚೆ ಶುರುವಾಗಿದೆ. ಈ ಮೈತ್ರಿ ಇಂದ ಈ ಎರಡು ಸರ್ಕಾರಗಳಿಗೆ ಆಗುವ ಲಾಭ ನಷ್ಟ ಏನು ಎನ್ನುವ ಚರ್ಚೆಗಳು ಸಹ ಶುರುವಾಗಿದೆ.
ಈ ಎರಡು ಪಕ್ಷಗಳು ಶಾಸಕರನ್ನು ಅಮಾನತು ಮಾಡುವ ಬಗ್ಗೆ ಸಹ ಚರ್ಚೆ ನಡೆಸಿವೆ. ಬಿಜೆಪಿ ಪಕ್ಷದ ಶಾಸಕಾಂಗ ರಾಜ್ಯಪಾಲರಿಗೆ ನೀಡಿದ ಲೆಟರ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಸೈನ್ ಇದ್ದಾಗಿನಿಂದ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿದೆ. ಇಷ್ಟೇ ಅಲ್ಲದೆ, ನೈಸ್ ಹೋರಾಟ ವಿಚಾರಕ್ಕೆ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಕಾಣಿಸಿಕೊಂಡಿದ್ದರು. ಇದು ಮೈತ್ರಿಯ ಹಾಗೆ ತೋರುತ್ತಿದ್ದು (BJP JDS), ಈ ಎಡದು ಪಕ್ಷದ ನಾಯಕರು ಸಹ ಮುಂಬರುವ ದಿನಗಳಲ್ಲಿ ಜೊತೆಯಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.. ಇದನ್ನು ಓದಿ..BJP vs JDS: ಬಿಜೆಪಿ ಕಾರ್ಯಕರ್ತರಿಗೆ ನೆಮ್ಮದಿ ಸುದ್ದಿ- ಉಲ್ಟಾ ಹೊಡೆದ ಜೆಡಿಎಸ್, ಕುಮಾರಸ್ವಾಮಿ ರವರು ಕೊಟ್ಟ ಸಿಹಿ ಸುದ್ದಿ.
ಪ್ರಸ್ತುತ ಇರುವ ಪರಿಸ್ಥಿತಿ ನೋಡಿದರೆ ಈ ಮೈತ್ರಿಯಿಂದ ಜೆಡಿಎಸ್ ಪಕ್ಷಕ್ಕೆ ಲಾಭವೇ ಸಿಗುತ್ತದೆ. ಏಕೆಂದರೆ, ಈ ಹಿಂದೆ ಎರಡು ಸಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿರುವ ಹೆಚ್.ಡಿ ಕುಮಾರಸ್ವಾಮಿ ಅವರು ಈ ವರ್ಷ ಚುನಾವಣೆಯಲ್ಲಿ 16 ಸ್ಥಾನಗಳನ್ನು ಮಾತ್ರ ಪಡೆಯುವ ಮೂಲಕ ತೀವ್ರವಾದ ಹಿನ್ನಡೆ ಅನುಭವಿಸಿದ್ದಾರೆ. ಈಗ ಜೆಡಿಎಸ್ ಪಕ್ಷವನ್ನು ಉಳಿಸುವುದು ಮತ್ತು ಬೆಳೆಸುವುದು ಎರಡು ಕೂಡ ಬಹಳ ಮುಖ್ಯ..ಹಾಗಾಗಿ ಈ ಮೈತ್ರಿ ಜೆಡಿಎಸ್ ಗೆ ಒಳ್ಳೆಯದನ್ನೇ ಮಾಡುತ್ತದೆ (BJP JDS). ಹಾಸನದಲ್ಲಿ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್, ಮಂಡ್ಯದಲ್ಲಿ ಪ್ರಾಬಲ್ಯ ಸಾಧಿಸಬೇಕು ಎಂದು ಚಿಂತನೆ ನಡೆಸಿದೆ.
ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಹೇ ಸ್ಪರ್ಧಿಸಿದರೆ, ಅವರ ಮಗನ ರಾಜಕೀಯ ಜೀವನಕ್ಕೂ ಲಾಭ ಆಗುತ್ತದೆ. ತಮ್ಮದೇ ಕ್ಷೇತ್ರದಲ್ಲಿ ನಿಖಿಲ್ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹಾಗಾಗಿ ಬಿಜೆಪಿ ಜೊತೆಗೆ ಮೈತ್ರಿಯಾದರೆ, ಜೆಡಿಎಸ್ ಗೆ ಲಾಭ. ಇನ್ನು ಬಿಜೆಪಿಗೆ ಏನು ಲಾಭವಿದೆ ಎಂದು ನೋಡುವುದಾದರೆ..ಈಗ ಬಿಜೆಪಿ ಸೋತು ಹಿನ್ನಡೆ ಅನುಭವಿಸಿದೆ, ಈಗ ಬಿಜೆಪಿ ಇಂದ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಬಗ್ಗೆ ಕೂಡ ನಿರ್ಧಾರ ಕೇಂದ್ರದಿಂದ ಇನ್ನು ಕೈಗೊಂಡಿಲ್ಲ.. ಕಾಂಗ್ರೆಸ್ ವಿರುದ್ದದ ಹೋರಾಟಕ್ಕೆ ಕುಮಾರಸ್ವಾಮಿ ಅವರು ಮುಂದಿದ್ದಾರೆ (BJP JDS)..ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಮೂಲಕ ಸದನದಲ್ಲಿ ಕಾಂಗ್ರೆಸ್ ಗೆ ಮುಜುಗರ ತಂದರು. ಇದನ್ನು ಓದಿ..News: ಸದ್ದಿಲ್ಲದೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ- ಸಾಮಾನ್ಯರೇ ನಿಮ್ಮ ಜೀವನದ ಗತಿ ಏನು.
ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಕೂಡ ಒಳ್ಳೆಯದೇ..ಕುಮಾರಸ್ವಾಮಿ ಅವರು ಆರೋಪದ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.. ಇತ್ತ ಬಿಜೆಪಿಯು ತಮ್ಮ ಸಂಘಟನೆ ಬಳಸಿ ದೊಡ್ಡದಾಗಿ ಹೋರಾಟ ಮಾಡುವ ಸಾಮರ್ಥ್ಯ ಹೊಂದಿದೆ (BJP JDS). ಹಾಗಾಗಿ ಈ ಎರಡು ಪಕ್ಷಗಳು ಒಂದಾದರೆ ಕಾಂಗ್ರೆಸ್ ಲಕ್ಷಕ್ಕೆ ನಿಜಕ್ಕೂ ತಲೆನೋವು ಶುರುವಾಗುವುದು ಖಂಡಿತ. ಇದನ್ನು ಓದಿ..News: SC ST ಸಮುದಾಯ ಜನರ ಜಾಮೀನು ಖರೀದಿ ಮಾಡುವ ಮುನ್ನ ಇರಲಿ ಎಚ್ಚರ- ಹೊಸ ಖಡಕ್ ಆದೇಶ ಹೊರಡಿಸಿದ ಸಿದ್ದು ಸರ್ಕಾರ.
Comments are closed.